Shubhashaya News

ಧುತ್ತರಗಾಂವ ಗ್ರಾಮ ಪಂಚಾಯತಿಯ 4 ಜನ ಸದಸ್ಯರು ಬಿಜೆಪಿ ಸೇರ್ಪಡೆ

ಆಳಂದನಲ್ಲಿ ಮುಂದುವರೆದ ಪಕ್ಷಾಂತರ ಪರ್ವ

ಆಳಂದನಲ್ಲಿ ಆಡಳಿತಕ್ಕೆ ಬೇಸತ್ತು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿರುವುದು ಮುಂದುವರೆದಿದೆ. ಇತ್ತೀಚಿಗೆ ಅಲ್ಪ ಸಂಖ್ಯಾತ ಮುಖಂಡರು, ಯುವಕರು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಾಬುಗೌಡ ಪಾಟೀಲ ಭೂಸನೂರ ಅವರು ಪಕ್ಷ ತೊರೆದ ಬೆನ್ನಲ್ಲೆ ಈಗ ಮತ್ತೆ 5 ಜನ ಗ್ರಾಮ ಪಂಚಾಯತಿ ಜನ ಸದಸ್ಯರು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾ ಎಸ್ ಗುತ್ತೇದಾರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಧುತ್ತರಗಾಂವ ಗ್ರಾಮ ಪಂಚಾಯತ ಸದಸ್ಯರಾದ ಶಿವಾನಂದ ಬಿರಾದಾರ, ಸುಭಾಷ ಬೆಳಮಗಿ, ಈರಣ್ಣಾ ಬಂಗರಗಿ, ಸಂಜು ಶಿಲ್ಡ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.

 

Comments are closed.

Don`t copy text!