Shubhashaya News

ನಾಲೆಗೆ ಎಪ್ರಿಲ್ ೨೦ರವರೆಗೆ ನೀರು ಹರಿಸಲು ಶಿವಪುತ್ರ ಗಾಣದಾಳ ಒತ್ತಾಯ

ಲಿಂಗಸುಗೂರು : ನಾರಾಯಣಪುರ ಬಲದಂಡೆ ನಾಲೆಯ ಅಚ್ಚುಕಟ್ಟು ಪ್ರದೇಶಕ್ಕೆ ಏಪ್ರಿಲ್ 20ರ ವರಗೆ ನೀರು ಹರಿಸಬೇಕೆಂದು ಕರುನಾಡು ವಿಜಯ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪುತ್ರ ಗಾಣದಾಳ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈಗಾಗಲೆ ಬಲದಂಡೆ ನಾಲೆ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಬತ್ತ, ಮೆಣಸಿನಕಾಯಿ, ಶೇಂಗಾ ಸೇರಿದಂತೆ ಲಕ್ಷಾಂತರ ರೂಪಾಯಿ ಹಣ ವ್ಯಯಿಸಿ ಕೃಷಿ ಮಾಡಿದ್ದಾರೆ. ಬೆಳೆ ಬರಲು ಕನಿಷ್ಠ ತಿಂಗಳು ಬೇಕು ಇದರ ಮಧ್ಯೆ ಬಿಸಿಲು ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು ಬೆಳೆಗಳಿಗೆ ನೀರು ಒದಗಿಸುವ ಪ್ರಮುಖ ಅಂಶವಾಗಿದೆ. ಬೆಳೆಗೆ ನೀರು ಬಿಡದೇ ಹೋದರೆ ಸಾಲ-ಶೂಲ ಮಾಡಿ ಜಮೀನು ಬಿತ್ತನೆ ಮಾಡಿದ ರೈತರಿಗೆ ಭಾರಿ ನಷ್ಟಕ್ಕೆ ಕಾರಣವಾಗಲಿದೆ. ರೈತರ ರಕ್ಷಣೆಗೆ ಏಪ್ರಿಲ್ 20 ರ ವರೆಗೂ ನಾಲೆ ನೀರು ಹರಿಸಬೇಕೆಂದು ಒತ್ತಾಯಿಸಿದರು.

Leave A Reply

Your email address will not be published.