Shubhashaya News

ರಾರಾಜಿಸುತ್ತಿರುವ ಜೆಡಿಎಸ್ ಬ್ಯಾನರ್ :ಕ್ರಮ ಕೈಗೊಳ್ಳದ ತಾಲೂಕ ಆಡಳಿತ

ಲಿಂಗಸುಗೂರು : ಪಟ್ಟಣದಲ್ಲಿ ಜೆಡಿಎಸ್‌ ಮುಖಂಡರಾದ ಸಿದ್ದು ಬಂಡಿ ಹುಟ್ಟು ಹಬ್ಬದ ನಿಮಿತ್ತ ರಕ್ತದಾನ ಶಿಬಿರ ಬ್ಯಾನರ್‌ ರಾರಾಜಿಸುತ್ತಿವೆ ಆದರೆ ತಾಲೂಕ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಚಚೆ೯ಗೆ ಗ್ರಾಸವಾಗಿದೆ.

ಜಿಲ್ಲೆಯ ಮಸ್ಕಿ ಉಪಚುನಾವಣೆ ನಿಮಿತ್ತ ನೀತಿ ಸಂಹಿತೆ ಜಾರಿಯಲ್ಲಿದೆ ಇದರ ಮಧ್ಯ ಜೆಡಿಎಸ್‌ ಮುಖಂಡರು ಬಡವರ ಬಂದು, ರೈತರ ಚಿಂತಕರು ಯುವಕರ ಕಣ್ಮಣಿ ಎಂದು ಸಿದ್ದು ಬಂಡಿ ಹಾಗೂ ಜೆಡಿಎಸ್‌ ಪಕ್ಷದ ತಾಲೂಕ ಅಧ್ಯಕ್ಷ ಕೆ.ನಾಗಭೂಷಣನವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಟಾಸ್ಕಪೋರ್ಸ್‌ಸಮಿತಿ(ರಕ್ತ ಸುರಕ್ಷತೆ) ರಾಯಚೂರು ಮತ್ತು  ಭಾರತೀಯ ವೈದ್ಯಕೀಯ ಸಂಘ ಲಿಂಗಸುಗೂರು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಎಪ್ರೀಲ್‌೦೧ ರಂದು ಭಾವಚಿತ್ರಗಳನ್ನು ಬ್ಯಾನರ್ ನಲ್ಲಿ ಹಾಕಲಾಗಿದೆ.

ಪಟ್ಟಣದ ಜ್ಯೂನಿಯರ್‌ ಕಾಲೇಜು, ಐಬಿ ಎದುಗಡೆ, ಹಳೆ ಬಸ್‌ನಿಲ್ದಾನ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಕಿ ಪ್ರಚಾರ ಮಾಡಲಾಗುತ್ತಿದೆ ಇದರಿಂದ ಚುನಾವಣೆ ನೀತಿ ಸಂಹಿತೆ ಜಾರಿ ಇದ್ದರೂ ಕೂಡ ಹಾಕಿದ್ದು ಅಧಿಕಾರಿಗಳು ಮೌನ ಮುರಿದಿದ್ದಾರೆ.

ಪಟ್ಟಣದಲ್ಲಿ ಯಾವುದೇ ಬ್ಯಾನರ ಹಾಕುವ ಮುನ್ನ ಪುರಸಭೆಯ ಅನುಮತಿ ಪಡೆಯಬೇಕು ಆದರೆ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಹಾಕಿದ್ದು ಕಾನೂನು ವಿರೋಧ ಚಟುವಟಿಕೆಯಾಗಿದೆ ಕೂಡಲೇ ಕ್ರಮ ಜರುಗಿಸಬೇಕೆಂದು ಸಾವ೯ಜನಿಕರು ಆಕ್ರೋಶ ವ್ಯಕ್ತಪಡಿಸಿದರು.

Comments are closed.

Don`t copy text!