Shubhashaya News

ಹೋಳಿ ಕವಿಗೋಷ್ಠಿ ಫಲಿತಾಂಶ ಪ್ರಕಟ

ಕಲಬುರಗಿ: ರಾಜ್ಯ ಬರಹಗಾರರ ಬಳಗ ಜಿಲ್ಲಾ ಘಟಕದ ಆಶ್ರಯದಲ್ಲಿ ಕಳೆದ ರವಿವಾರ ಏರ್ಪಡಿಸಿದ ಆನ್ ಲೈನ್ ಕವಿಗೋಷ್ಠಿ ಸ್ಪರ್ದೆಯ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಸಂಚಾಲಕ ಧರ್ಮಣ್ಣ ಧನ್ನಿ ತಿಳಿಸಿದ್ದಾರೆ.
ಘಟಕಕದ ಜಿಲ್ಲಾದ್ಯಕ್ಷ ಮಹಾಂತೇಶ ಪಾಟೀಲ ಅವರ ನೇತೃತ್ವದಲ್ಲಿ ಹೋಳಿ ಹಬ್ಬದ ನಿಮಿತ್ತ ಆಯೋಜಿಸಿದ ಕವಿಗೋಷ್ಠಿಯಲ್ಲಿ 28ಜನ ಕವಿಗಳು ಭಾಗವಹಿಸಿದರು. ಇವರಲ್ಲಿ ಅತ್ಯುತ್ತಮ ಮೂರು ಕವನಗಳನ್ನು ಆಯ್ಕೆ ಮಾಡಲಾಗಿದೆ. ಹಾಗೂ ಮೂವರಿಗೆ ಮೆಚ್ಚುಗೆ ಕವನಗಳೆಂದು ಆಯ್ಕೆ ಮಾಡಲಾಗಿದೆ.
ಶಿಕ್ಷಕಿ ಮಲ್ಲಮ್ಮ ಎಸ್ ಕಾಳಗಿ(ಪ್ರಥಮ), ಚಂದುಬಾಯಿ ಕಾಸರ(ದ್ವಿತೀಯ) ಹಾಗೂ ಕವಿತಾ ರಾಠೋಡ(ತೃತೀಯ) ಆಯ್ಕೆಯಾದವರು. ಅಲ್ಲದೆ ಅಶ್ವೀನಿ ಎಂ ಪಾಟೀಲ, ಎನ್ ಆರ್ ರಗಟೆ, ನೀಲಮ್ಮ ಎಸ್ ಸಾಲಿಮಠ ಅವರ ಹೋಳಿ ಕವನಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ. ಶಿಕ್ಷಕ ರವಿಕುಮಾರ ಬಿ ನಂದಗೇರಿ ಅವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದರು. ರಂಗು ರಂಗಿನ ಹೋಳಿ ಸ್ವರಚಿತ ಕವನಗಳು ಓದುಗರಿಗೆ ಹಬ್ಬದ ರಸದೌತಣ ಉಣ ಬಡಿಸಿತು. ಇದರಲ್ಲಿ ಮಹಿಳೆಯರೆ ಹೆಚ್ಚಿನ ಸಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷ.
ಪ್ರತಿ ರವಿವಾರ ಆನ್ ಲೈನ್ ಸ್ಪರ್ದೆ ನಡೆಸಿ ಈ ಭಾಗದ ಯುವ ಕವಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಲಾಗಿದೆ. ಪ್ರಯುಕ್ತ ಆಸಕ್ತ ಕವಿಗಳು ಈ ಆನ್ ಲೈನ್ ಸ್ಪರ್ದೆಯಲ್ಲಿ ಪಾಲ್ಗೊಳ್ಳಬೇಕು ಪಾಟೀಲ ಅವರು ಮನವಿ ಮಾಡಿದ್ದಾರೆ.

Leave A Reply

Your email address will not be published.