Shubhashaya News

‘ಟೈಮ್ ಸೀರೀಸ್, ಪ್ಯಾನಲ್ ಡೇಟಾ ವಿಶ್ಲೇಷಣೆ’ ಕುರಿತು ಎಫ್‌ಡಿಪಿ

ಆಳಂದ: ಸಿಯುಕೆಯಲ್ಲಿ ನಡೆಯಲಿರುವ ಅರ್ಥಶಾಸ್ತç ಅಧ್ಯಾಪಕರ ‘ಟೈಮ್ ಸೀರೀಸ್ ಮತ್ತು ಪ್ಯಾನಲ್ ಡೇಟಾ ವಿಶ್ಲೇಷಣೆ’ ಕಾರ್ಯಕ್ರಮದ ಪೋಸ್ಟರ್ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಬಿಡುಗಡೆಗೊಳಿಸಿದರು. ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಇತರರು ಇದ್ದರು.

ಸಿಯುಕೆಯಲ್ಲಿ ನ. ೧೬ರಿಂದ ಅರ್ಥಶಾಸ್ತç ಅಧ್ಯಾಪಕರಿಗೆ ಮೂರು ದಿನಗಳ ತರಬೇತಿ
ಆಳಂದ: ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಅರ್ಥಶಾಸ್ತç ಅಧ್ಯಯನ ಮತ್ತು ಯೋಜನೆ ವಿಭಾಗದ ವತಿಯಿಂದ ಅರ್ಥಶಾಸ್ತç ಅಧ್ಯಾಪಕರಿಗಾಗಿ ‘ಟೈಮ್ ಸೀರೀಸ್ ಮತ್ತು ಪ್ಯಾನಲ್ ಡೇಟಾ ವಿಶ್ಲೇಷಣೆ’ ವಿಷಯದ ಕುರಿತು ಮೂರು ದಿನಗಳ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮವನ್ನು (ಎಫ್‌ಡಿಪಿ) ನವೆಂಬರ್ ೧೬ರಿಂದ ೧೮ರವರೆಗೆ ಆಯೋಜಿಸಲಾಗಿದೆ.
ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಮಾತನಾಡಿ, ಅರ್ಥಶಾಸ್ತç ಅಧ್ಯಾಪಕರು ತಮ್ಮ ವಿಶ್ಲೇಷಣಾತ್ಮಕ ಸಾಮರ್ಥ್ಯ ಹಾಗೂ ಸಂಶೋಧನಾ ಕೌಶಲಗಳನ್ನು ವೃದ್ಧಿಸಿಕೊಳ್ಳಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ. ದೇಶದಾದ್ಯಂತ, ವಿಶೇಷವಾಗಿ ಕರ್ನಾಟಕದ ಅರ್ಥಶಾಸ್ತç ಅಧ್ಯಾಪಕರು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಸಮಯಾನುಸಾರ ದತ್ತಾಂಶ ಮತ್ತು ಪ್ಯಾನಲ್ ದತ್ತಾಂಶಗಳ ವಿಶ್ಲೇಷಣಾ ವಿಧಾನಗಳಲ್ಲಿ ವಿಶೇಷ ತರಬೇತಿ ನೀಡುವ ಮೂಲಕ ಅಧ್ಯಾಪಕರ ಸಂಶೋಧನಾ ಸಾಮರ್ಥ್ಯವನ್ನು ಬಲಪಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್, ವ್ಯವಹಾರ ಅಧ್ಯಯನ ವಿಭಾಗದ ಡೀನ್ ಪ್ರೊ. ಪಾಂಡುರAಗ ವಿ. ಪತ್ತಿ, ಐಕ್ಯೂಎಸಿ ನಿರ್ದೇಶಕ ಹಾಗೂ ಇಂಜಿನಿಯರಿAಗ್ ವಿಭಾಗದ ಡೀನ್ ಪ್ರೊ. ಎಂ. ಅಮರೇಂದ್ರ ಮತ್ಸಾ, ಅರ್ಥಶಾಸ್ತç ವಿಭಾಗದ ಮುಖ್ಯಸ್ಥೆ ಡಾ. ಸುಮಾ ಸ್ಕಾರಿಯಾ, ಪ್ರೊ. ಎಂ.ವಿ.ಎನ್. ಅಂಬಿಕಾ ಪ್ರಸಾದ್, ಕಾರ್ಯಕ್ರಮದ ನಿರ್ದೇಶಕ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ಮಲ್ಲೇಶ್ ಉಮ್ಮಲ್ಲಾ, ಸಹ ನಿರ್ದೇಶಕ ಮತ್ತು ಸಂಯೋಜಕ ಡಾ. ಎಸ್. ಲಿಂಗಮೂರ್ತಿ, ಪ್ರಾಧ್ಯಾಪಕರಾದ ಎಂ.ಡಿ. ಮೊಹ್ಸಿನ್ ಖಾನ್ ಹಾಗೂ ಡಾ. ಅನುಶ್ರೀ ಎಸ್. ಪಣಿಕ್ಕಸ್ಸೆರಿ ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗೆ ಕಾರ್ಯಕ್ರಮದ ನಿರ್ದೇಶಕ ಡಾ. ಮಲ್ಲೇಶ್ ಉಮ್ಮಲ್ಲಾ ಅವರನ್ನು ೯೧೮೨೧೦೪೭೩೧ ಮೊಬೈಲ್ ಸಂಖ್ಯೆ ಮೇಲ್: mummಚಿಟಟಚಿ@ಛಿuಞ.ಚಿಛಿ.iಟಿ ಸಂಪರ್ಕಿಸಬಹುದು.

Leave A Reply

Your email address will not be published.