ಆಳಂದ: ಸಿಯುಕೆ ಆಯೋಜಿಸಿದ್ದ “ಸಂಶೋಧನೆ ಮತ್ತು ಪ್ರಕಟಣಾ ನೈತಿಕತೆ” ಕುರಿತ ಕಾರ್ಯಾಗಾರವನ್ನು ಪ್ರೊ..ಬಟ್ಟು ಸತ್ಯನಾರಾಯಣ ಅವರು ಉದ್ಘಾಟಿಸಿ ಮಾತನಾಡಿದರು.
ಆಳಂದ: ಗುಣಮಟ್ಟದ ಸಂಶೋಧನೆಯ ಅಡಿಪಾಯ ಪ್ರಾಮಾಣಿಕತೆ, ಸಮಗ್ರತೆ, ಸ್ವಂತಿಕೆ ಹಾಗೂ ನೈತಿಕ ನಡವಳಿಕೆಯಾಗಿದ್ದು, ಸಂಶೋಧಕರು ಅರ್ಥಪೂರ್ಣ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಕೃತಿಚೌರ್ಯದಿಂದ ದೂರವಿರಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕೇಂದ್ರ ಗ್ರಂಥಾಲಯ ವತಿಯಿಂದ ನೂತನ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ಸಂಶೋಧನೆ ಮತ್ತು ಪ್ರಕಟಣಾ ನೈತಿಕತೆ” ಕುರಿತ ಕಾರ್ಯಾಗಾರವನ್ನು ಡಾ. ಎಸ್.ಆರ್. ರಂಗನಾಥನ್ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಸಂಶೋಧನಾ ಪ್ರಬಂಧಗಳು ದೇಶ-ವಿದೇಶದ ಪ್ರತಿಷ್ಠಿತ ಜರ್ನಲ್‌ಗಳಲ್ಲಿ ಪ್ರಕಟವಾಗುವಂತೆಯೂ, ಶೋಧಗಂಗಾದಲ್ಲಿ ದಾಖಲೆಯಾಗುವಂತೆಯೂ ಗುಣಮಟ್ಟದ ಸಂಶೋಧನೆ ನಡೆಸಬೇಕು. ಇದರಿಂದ ಸಂಶೋಧಕರ ಶೈಕ್ಷಣಿಕ ವೃತ್ತಿಜೀವನಕ್ಕೆ ಬಲ ದೊರೆಯುತ್ತದೆ ಎಂದು ತಿಳಿಸಿದರು.
ಸಂಶೋಧನಾ ವಿದ್ಯಾರ್ಥಿಗಳು ವಿಷಯಜ್ಞಾನ ಜೊತೆಗೆ ಸಂವಹನ, ಭಾಷೆ ಹಾಗೂ ಪರಿಣಾಮಕಾರಿ ಬರವಣಿಗೆಯ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ವಿಶ್ವವಿದ್ಯಾಲಯದ ಅತ್ಯಾಧುನಿಕ ಪ್ರಯೋಗಾಲಯಗಳು ಹಾಗೂ ಕೇಂದ್ರ ಗ್ರಂಥಾಲಯದ ಡಿಜಿಟಲ್ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಕರೆ ನೀಡಿದರು.
ಕೇಂದ್ರ ಸರ್ಕಾರದ “ಒಂದು ರಾಷ್ಟç–ಒಂದು ಚಂದಾದಾರಿಕೆ” ಯೋಜನೆಯಡಿ ೩೦ಕ್ಕೂ ಹೆಚ್ಚು ಪ್ರಮುಖ ಪ್ರಕಾಶಕರ ಸುಮಾರು ೧೩ ಸಾವಿರಕ್ಕೂ ಅಧಿಕ ಅಂತರರಾಷ್ಟಿçÃಯ ಜರ್ನಲ್‌ಗಳ ಪ್ರವೇಶ ಸೌಲಭ್ಯ ಲಭ್ಯವಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದರು.
ಕೇAದ್ರ ಗ್ರಂಥಾಲಯದಲ್ಲಿ ಡಿಜಿಟಲ್ ಸಂಪನ್ಮೂಲಗಳು, ವೈ-ಫೈ, ಪ್ರಶ್ನೆಪತ್ರಿಕೆಗಳ ಸಂಗ್ರಹ, ಬುಕ್‌ಬ್ಯಾಂಕ್, ಟರ್ನಿಟಿನ್ ಕೃತಿಚೌರ್ಯ ಪತ್ತೆ ತಂತ್ರಾAಶ ಸೇರಿದಂತೆ ಹಲವು ಆಧುನಿಕ ಸೌಲಭ್ಯಗಳಿವೆ. ಮುಂದಿನ ತಿಂಗಳು ೧೦೦ ಆಸನಗಳ ಅಂತರ್ಜಾಲ ಆಧಾರಿತ ನೂತನ ಕಲಿಕಾ ಕೇಂದ್ರವನ್ನು ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
ಮುಖ್ಯ ಅತಿಥಿ ಪ್ರಭಾರ ಪರೀಕ್ಷಾ ನಿಯಂತ್ರಕ ಪ್ರೊ. ಭರತ್ ಕುಮಾರ್ ಮಾತನಾಡಿ, ಪಿಎಚ್.ಡಿ. ಕೇವಲ ಪದವಿ ಪಡೆಯುವ ಸಾಧನವಲ್ಲ; ಅದು ವಿಮರ್ಶಾತ್ಮಕ ಚಿಂತನೆ ಬೆಳೆಸಿ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿಯುತ ಶೈಕ್ಷಣಿಕ ಪಯಣವಾಗಿದೆ. ಸಂಶೋಧಕರು ಬದ್ಧತೆ, ಶಿಸ್ತು ಮತ್ತು ನೈತಿಕತೆಯೊಂದಿಗೆ ಸಂಶೋಧನೆ ನಡೆಸಬೇಕು ಎಂದು ಹೇಳಿದರು.
ಮುಖ್ಯ ಗ್ರಂಥಪಾಲಕ ಹಾಗೂ ಕಾರ್ಯಾಗಾರದ ಸಂಯೋಜಕ ಡಾ. ಪಿ.ಎಸ್. ಕಟ್ಟಿಮನಿ ಸ್ವಾಗತಿಸಿ, ಸಂಶೋಧನಾ ವಿಧಾನ, ವಿಷಯ ಆಯ್ಕೆ, ಪ್ರಕಟಣಾ ನೀತಿಶಾಸ್ತç, ಕೃತಿಚೌರ್ಯ ತಡೆ, ದತ್ತಾಂಶ ಸಂಗ್ರಹ ಹಾಗೂ ಪರಿಣಾಮಕಾರಿ ಶೈಕ್ಷಣಿಕ ಬರವಣಿಗೆ ಕುರಿತು ಕಾರ್ಯಾಗಾರದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊ. ರಾಜೀವ್ ಶೇಷ ಜೋಶಿ ಹಾಗೂ ಡಾ. ಎನ್. ಸಂದೀಪ್ ಸಂಶೋಧನಾ ವಿಧಾನ, ವಿಷಯ ಆಯ್ಕೆ, ದತ್ತಾಂಶ ಹುಡುಕಾಟ ಹಾಗೂ ತಂತ್ರಜ್ಞಾನ ಬಳಕೆ ಕುರಿತು ಮಾರ್ಗದರ್ಶನ ನೀಡಿದರು.
ಕಾರ್ಯಾಗಾರದಲ್ಲಿ ವಿವಿಧ ವಿಭಾಗಗಳ ಸಂಶೋಧನಾ ವಿದ್ಯಾರ್ಥಿಗಳು, ಗ್ರಂಥಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಡಾ. ಜಿ.ಜೆ.ಪಿ. ದೀಕ್ಷಿತ್ ನಿರೂಪಿಸಿದರು.