Shubhashaya News

ಡಾ. ಬಾಬು ಜಗಜೀವನರಾಮ ಜಯಂತಿ ಸಂಭ್ರಮ:

ಮಹಿಳೆಯರಿಗೆ ಉಡಿತುಂಬಿ ಗೌರವಿಸಿದ ಜೆಡಿಎಸ್ ನಾಯಕಿ ಮಹೇಶ್ವರಿ ವಾಲಿ

ಆಳಂದ: ಪಟ್ಟಣದಲ್ಲಿ ಮಾದಿಗ ಸಮಾಜ ಏರ್ಪಡಿಸಿದ್ದ ಡಾ.ಬಾಬು ಜಗಜೀವನರಾಮ್ ಅವರ ಜಯಂತಿ ಸಮಾರಂಭವನ್ನು ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಉದ್ಘಾಟಿಸಿದರು. ಲಿಂಗರಾಜ ತಾರಪೈಲ್, ರಾಜಕುಮಾರ ಮಾಶಾಳಕರ್ ಇತರರು ಇದ್ದರು.

ಆಳಂದ: ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಮಾದಿಗ ಸಮಾಜದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ ಅವರ ೧೧೯ನೇ ಜಯಂತಿ ಕಾರ್ಯಕ್ರಮ ಭಕ್ತಿಭಾವ ಹಾಗೂ ಸಮಾಜಮುಖಿ ಸಂದೇಶಗಳೊAದಿಗೆ ಜರುಗಿತು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಅವರು ಭಾಗವಹಿಸಿ ನೂರಾರು ಮಹಿಳೆಯರಿಗೆ ಸೀರೆ-ಕುಪ್ಪ ನೀಡಿ ಉಡಿತುಂಬಿ ಗೌರವಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಹೇಶ್ವರಿ ವಾಲಿ ಅವರು, ಡಾ. ಬಾಬು ಜಗಜೀವನರಾಮ ಅವರು ದೇಶದ ಹಸಿರು ಕ್ರಾಂತಿಗೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಸ್ಮರಿಸಿದರು. ಉಪ ಪ್ರಧಾನಿಗಳಾಗಿ ಅವರು ಸಮಾಜದ ನ್ಯಾಯಕ್ಕಾಗಿ ಮಾಡಿದ ಸೇವೆ ಹಾಗೂ ತ್ಯಾಗ ಪ್ರತಿಯೊಬ್ಬರಿಗೂ ಆದರ್ಶವಾಗಬೇಕು. ಅವರ ಹಾದಿಯಲ್ಲಿ ನಡೆಯುವ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು. ಬಳಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ತಾಯಂದಿರಿಗೆ ಸ್ವಂತವಾಗಿ ಸೀರೆ ಮತ್ತು ಕುಪ್ಪ ನೀಡಿ ಸನ್ಮಾನಿಸುವ ಮೂಲಕ ಗೌರವ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ರಾಜಕುಮಾರ ಪಿ. ಮಾಶಾಳಕರ್ ಅವರು ಮಾತನಾಡಿ, ಮಹನೀಯರ ಜೀವನ ಚರಿತ್ರೆ ಯುವಜನತೆಗೆ ಪ್ರೇರಣೆಯಾಗಬೇಕು ಎಂದು ತಿಳಿಸಿದರು.
ಡಿಎಂಎಸ್ ಸಂಸ್ಥಾಪಕ ಹಾಗೂ ದಕ್ಷಿಣ ವಲಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ತಾರಫೈಲ್ ಅವರು ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನರಾಮ ಅವರ ಸಮಾಜಮುಖಿ ಕೊಡುಗೆಗಳನ್ನು ಸ್ಮರಿಸಿ, ಸಮಾನತೆಗಾಗಿ ಅವರ ಹಾದಿಯನ್ನು ಅನುಸರಿಸುವ ಸಂಕಲ್ಪವನ್ನು ಪ್ರತಿಯೊಬ್ಬರೂ ಕೈಗೊಳ್ಳಬೇಕು ಎಂದು ಹೇಳಿದರು. ಸಮಾಜ ಸೇವೆಯಲ್ಲಿ ತೊಡಗಿರುವವರಿಗೆ ಟೀಕೆಗಳು ಸಹಜವಾದರೂ, ಅದನ್ನು ಲೆಕ್ಕಿಸದೇ ನಿರಂತರ ಪರಿಶ್ರಮದಿಂದ ಕಾರ್ಯನಿರ್ವಹಿಸಿದರೆ ಉತ್ತಮ ಫಲ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು. ಮಾದಿಗ ಸಮುದಾಯದ ಇತಿಹಾಸವು ಶ್ರೀಮಂತವಾದ ಪರಂಪರೆಯಾಗಿದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಸಮುದಾಯ ಹಿನ್ನಡೆಯನ್ನು ಎದುರಿಸುತ್ತಿದ್ದು, ಇದರಿಂದ ಹೊರಬರಲು ಶಿಕ್ಷಣ, ಸಂಘಟನೆ, ತಾಳ್ಮೆ ಹಾಗೂ ಪ್ರಾಮಾಣಿಕತೆ ಅಗತ್ಯವೆಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾನಿಂಗಪ್ಪ ಜಮಾದಾರ, ಯಲ್ಲಪ್ಪ ಮಾಂಗ, ಯಲ್ಲಾಲಿಂಗ ಬಂಡಾರಿ, ಚಂದ್ರಕಾAತ ಉಳ್ಳೆ, ಶಶಿಕಲಾ ಶಿವಪುತ್ರ, ಯಲ್ಲಪ್ಪ ಆರೂರ, ಪಂಡಿತ ಪಾತ್ರೆ, ರಾಜು ಕಟ್ಟಿಮನಿ, ಪರಮೇಶ್ವರ ಮಾಳಾಳೆ, ಜೆಟ್ಟೆಪ್ಪ, ಜಯಪ್ರಕಾಶ, ರವಿ ಮಲ್ಲಿನಾಥ, ಜೆಟ್ಟೆಪ್ಪ ಪೂಜಾರಿ, ಮಶಾಳ, ದೇವಿಂದ್ರಪ್ಪ ಬಾಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಲಕ್ಕಪ್ಪ ಧನ್ನು ಪ್ರಸ್ತಾವಿಕವಾಗಿ ಮಾತನಾಡಿದರು. ರಾಜೇಂದ್ರ ಸಿ. ಹತ್ತಗಾಳೆ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಿದ್ಧು ನಾವದಗಿ ವಂದಿಸಿದರು.

Comments are closed.

Don`t copy text!