ಬೈಕ್ ಸವಾರಿಯಲ್ಲಿ ಬೇಸಿಗೆಯ ಬರಕ್ಕೆ ಕಟ್ಟೆಚ್ಚರ!
ಜಿಲ್ಲಾ ಪಂಚಾಯತ್ sಸಿಇಒ ಭವಾಸಿರ್ಂಗ್ ಮೀನಾ ನೀರಿನ ಮುಂಜಾಗ್ರತೆ ಕ್ರಮ ಸೂಚನೆ
ಆಳಂದ: ಜೀರೊಳ್ಳಿ ಹೊರವಲಯದ ಬಾವಿ ನೀರಿನ ಸ್ಥಿತಿಗಿತಿ ವೀಕ್ಷಣೆ ಸ್ವತಃ ಬೈಕ್ ಸವಾರಿ ಮಾಡಿದ ಜಿಪಂ ಸಿಇಒ ಭವಾರಸಿಂಗ್ ಮೀನಾ ಅವರು ಮತ್ತು ಹಿಂಬದಿ ಸವಾರ ಇಒ ಮಾನಪ್ಪ ಕಟ್ಟಿಮನಿ ತೆರಳಿದರು.
ಆಳಂದ: ಬೇಸಿಗೆಯ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುವ ಮುನ್ನ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವಾಸಿರ್ಂಗ್ ಮೀನಾ ಅವರು ಇಂದು ಆಳಂದ್ ತಾಲೂಕಿನ ನೀರಿನ ಅಭಾವ ಎದುರಿಸುತ್ತಿರುವ ಪ್ರಮುಖ ಗ್ರಾಮಗಳಿಗೆ ಭೇಟಿ ನೀಡಿ ವ್ಯಾಪಕ ಪರಿಶೀಲನೆ ನಡೆಸಿದರು.
ಅಂಬಲಗಾ ತಾಂಡಾದಲ್ಲಿ ಆರಂಭಿಸಿದ ಪರಿಶೀಲನೆಯಲ್ಲಿ ಕೆ.ಕೆ.ಆರ್.ಡಿ.ಬಿ. ಮೂಲಕ ಹೊಸ ಬೋರ್ವೆಲ್ ಕೊರೆಯುವುದು ಮತ್ತು ಪೈಪ್ಲೈನ್ ಅಳವಡಿಸುವ ಕಾಮಗಾರಿಗೆ ಕ್ರೀಯಾ ಯೋಜನೆಯಲ್ಲಿ ಅನುಮೋದನೆಯಾಗಿರುವುದನ್ನು ಗಮನಿಸಿದ ಮೀನಾ ಅವರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೌರ್ಮಲ್ಯ ಇಲಾಖೆ, ಉಪ-ವಿಭಾಗ ಆಳಂದ್) ಅವರಿಗೆ “ಕಾಮಗಾರಿ ತ್ವರಿತಗತಿಯಲ್ಲಿ ಅನುμÁ್ಠನಗೊಳಿಸಿ, ಎಲ್ಲಾ ಮನೆಗಳಿಗೆ ನೀರು ತಲುಪುವಂತೆ ಮಾಡಿ” ಎಂದು ಕಟ್ಟುನಿಟ್ಟಾದ ಸೂಚನೆ ನೀಡಿದರು.
ಬಳಿಕ ಭೋದನ ಗ್ರಾಮ ಪಂಚಾಯತಿಯ ಗುಂಜ ಬಬಲಾದ್ ಗ್ರಾಮಕ್ಕೆ ತೆರಳಿದ ಅಧಿಕಾರಿಗಳು, ಮುಂದಿನ ತಿಂಗಳು ನೀರಿನ ಸಮಸ್ಯೆ ತೀವ್ರಗೊಳ್ಳುವ ಸಾಧ್ಯತೆಯನ್ನು ಗುರುತಿಸಿ, ಖಾಸಗಿ ಬಾವಿಯನ್ನು ಬಾಡಿಗೆ ಪಡೆದು ನೀರು ಒದಗಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರಿಗೆ ನಿರ್ದೇಶಿಸಿದರು. ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಮೀನಾ ಅವರು ಮಧ್ಯಾಹ್ನದ ಬಿಸಿಊಟದ ಗುಣಮಟ್ಟವನ್ನು ಪರಿಶೀಲಿಸಿದರು. ಶಾಲಾ ಆವರಣದಲ್ಲಿ ಬೆಳೆದ ಕೈತೋಟದ ತಾಜಾ ತರಕಾರಿಗಳನ್ನು ನೋಡಿ ಮುಖ್ಯ ಶಿಕ್ಷಕರನ್ನು ಮೆಚ್ಚುಗೆಯಿಂದ ಪ್ರಶಂಸಿಸಿದರು. “ಮಕ್ಕಳ ಪೆÇೀಷಣೆಗೆ ಇಂತಹ ಸ್ವಯಂ ಸಹಾಯಕ ಕ್ರಮಗಳು ಮಾದರಿಯಾಗಿರುವುದು ಶ್ಲಾಘನೀಯ. ಇನ್ನೂ ಹೆಚ್ಚು ತರಕಾರಿ ಬೆಳೆಯುವಂತೆ ಪೆÇ್ರೀತ್ಸಾಹಿಸಿ” ಎಂದು ಸೂಚಿಸಿದರು.
ಹೆಬಳಿ ಗ್ರಾಮ ಪಂಚಾಯತಿಯ ಜೀರೊಳ್ಳಿ ಗ್ರಾಮದಲ್ಲಿ ಸುಮಾರು ಅರ್ಧ ಕಿ.ಮೀ. ದೂರದ ಬಾವಿಗೆ ಸ್ವತಃ ಬೈಕ್ ಮೇಲೆಯೇ ತೆರಳಿದ ಮೀನಾ ಅವರು, ಬಾವಿಯ ಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿದರು. ಬಾವಿಯನ್ನು ತ್ವರಿತವಾಗಿ ಹೂಳೆತ್ತಿ ಶುದ್ಧ ಕುಡಿಯುವ ನೀರು ಒದಗಿಸುವಂತೆಯೂ, ನೀರು ಸಾಕಾಗದಿದ್ದಲ್ಲಿ ಖಾಸಗಿ ಬಾವಿಯನ್ನು ಬಾಡಿಗೆ ಪಡೆದು ಕ್ರಮ ವಹಿಸುವಂತೆಯೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರಿಗೆ ಸ್ಪಷ್ಟ ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಮೀನಾ ಅವರು ಪ್ರತಿಯೊಂದು ಸಮಸ್ಯೆಗೂ ಸಕಾರಾತ್ಮಕ ಉತ್ತರ ನೀಡಿದರು.
ಕೊರಳ್ಳಿ ಗ್ರಾಮದಲ್ಲಿ ಪ್ರಸ್ತುತ ವರ್ಷದ ತಾಲೂಕ್ ಪಂಚಾಯತ್ ಅನಿಬರ್ಂಧಿತ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ‘ಅರಿವು ಕೇಂದ್ರ ಗ್ರಂಥಾಲಯ’ದ ಕಾಮಗಾರಿಯನ್ನು ವಿವರವಾಗಿ ಪರಿಶೀಲಿಸಿದ ಅಧಿಕಾರಿಗಳು, ಕಾಮಗಾರಿಯ ಗುಣಮಟ್ಟ ಮತ್ತು ವೇಗವನ್ನು ಹೆಚ್ಚಿಸುವಂತೆ ಸಂಬಂಧಪಟ್ಟ ಶಾಖಾ ಅಧಿಕಾರಿಗಳಿಗೆ ಸೂಚಿಸಿದರು. “ಗ್ರಾಮೀಣ ಮಕ್ಕಳಿಗೆ ಉತ್ತಮ ಗ್ರಂಥಾಲಯ ಸೌಲಭ್ಯ ಒದಗಿಸುವುದು ನಮ್ಮ ಆದ್ಯತೆ” ಎಂದು ಹೇಳಿದರು.
ಈ ಸಮಗ್ರ ಪರಿಶೀಲನೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವಾಸಿರ್ಂಗ್ ಮೀನಾ ಅವರು ಬೈಕ್ ಮೇಲೆ ಸಂಚರಿಸುತ್ತಾ ಗ್ರಾಮೀಣ ಕ್ಷೇತ್ರದ ನಿಜ ಸಮಸ್ಯೆಗಳನ್ನು ಸ್ವತಃ ಅರಿತುಕೊಂಡಿದ್ದು, “ಬೇಸಿಗೆಯಲ್ಲಿ ಒಂದು ಹನಿ ನೀರೂ ಕೊರತೆಯಾಗದಂತೆ ಎಲ್ಲಾ ಅಧಿಕಾರಿಗಳು ಎಚ್ಚರಿಕೆ ವಹಿಸಿ” ಎಂದು ಒತ್ತಾಯಿಸಿದರು.
Comments are closed.