Shubhashaya News

ವಿಕಸಿತ ಭಾರತ–2047 ಗುರಿಗೆ ಬೌದ್ಧಿಕ ಆಸ್ತಿ ಹಕ್ಕುಗಳ ಮಹತ್ವ: ಸಿಯುಕೆಯಲ್ಲಿ ವಿಶೇಷ ಉಪನ್ಯಾಸ

ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ಬೌದ್ಧಿಕ ಆಸ್ತಿ ಹಕ್ಕುಗಳ ಮಹತ್ವ ಉಪನ್ಯಾಸದಲ್ಲಿ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಉದ್ಘಾಟಿಸಿ ಮಾತನಾಡಿದರು. ಡಾ. ಶರಣಗೌಡ, ಪೆÇ್ರ. ಹನುಮೇಗೌಡ ಇತರರು ಇದ್ದರು.

ಆಳಂದ: ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ಐಪಿಆರ್ ಸೆಲ್ ವತಿಯಿಂದ “ವಿಕಸಿತ ಭಾರತ–2047 ಗಾಗಿ ಬೌದ್ಧಿಕ ಆಸ್ತಿ ಹಕ್ಕುಗಳ ಪಾತ್ರ” ವಿಷಯದ ಮೇಲೆ ಮಾರ್ಚ್ 18, 2026 ರಂದು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಮಾತನಾಡಿ, ವಿಮರ್ಶಾತ್ಮಕ ಚಿಂತನೆ ಮತ್ತು ಸೃಜನಶೀಲತೆ ಪೇಟೆಂಟ್‍ಗಳ ಮೂಲಭೂತ ಅಂಶಗಳಾಗಿವೆ ಎಂದು ಹೇಳಿದರು. ಪೇಟೆಂಟ್‍ಗಳ ಅರಿವು ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದು, ಸಿಯುಕೆ ಸಂಸ್ಥೆ ಪೇಟೆಂಟ್‍ಗಳ ಮೂಲಕ ವಿಕಸಿತ ಭಾರತ–2047 ಸಾಧನೆಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಅಭಿಪ್ರಾಯಪಟ್ಟರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಚೆನ್ನೈಯ ಉಪನಿಯಂತ್ರಕ (ಪೇಟೆಂಟ್ ಮತ್ತು ವಿನ್ಯಾಸಗಳು) ಡಾ. ಶರಣಗೌಡ ಅವರು ಮಾತನಾಡಿ, ವಿಕಸಿತ ಭಾರತ ಗುರಿ ಸಾಧನೆಗೆ ದೇಶದ ಸಮಗ್ರ ಅಭಿವೃದ್ಧಿ ಅಗತ್ಯವಿದೆ ಎಂದರು. ಈ ಹಿನ್ನೆಲೆಯಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ವಿವರಿಸಿದರು. ಐಪಿಆರ್‍ಗಳ ವಾಣಿಜ್ಯ ಮೌಲ್ಯವನ್ನು ಗುರುತಿಸುವುದು ಅವಶ್ಯಕವಾಗಿದ್ದು, ವಾಣಿಜ್ಯ ಮೌಲ್ಯ ಹೊಂದಿರುವ ಸೃಜನಾತ್ಮಕ ಕೃತಿಗಳು ಬೌದ್ಧಿಕ ಆಸ್ತಿಯಾಗುತ್ತವೆ ಎಂದು ತಿಳಿಸಿದರು. 2025ರಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ 81ನೇ ಸ್ಥಾನದಿಂದ 39ನೇ ಸ್ಥಾನಕ್ಕೆ ಏರಿಕೆಯಾಗಿದೆ ಎಂಬುದನ್ನು ಅವರು ಉಲ್ಲೇಖಿಸಿದರು.

ಗೌರವ ಅತಿಥಿ ಪೆÇ್ರ. ಹನುಮೇಗೌಡ ಅವರು, ಐಪಿಆರ್ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು ವಿಕಸಿತ ಭಾರತ–2047 ಗುರಿ ಸಾಧನೆಗೆ ಅಗತ್ಯವಾಗಿದೆ ಎಂದು ಹೇಳಿದರು.
ಐಪಿಆರ್ ಸೆಲ್ ನಿರ್ದೇಶಕರೂ ಹಾಗೂ ಕಾನೂನು ಅಧ್ಯಯನ ಶಾಲೆಯ ಡೀನ್ ಆಗಿರುವ ಡಾ. ಬಸವರಾಜ ಕುಬಕಡ್ಡಿ ಅವರು ಮಾತನಾಡಿ, ಐಪಿಆರ್‍ಗಳು ಶೈಕ್ಷಣಿಕ ನವೀನತೆ ಮತ್ತು ಸೃಜನಾತ್ಮಕ ಕೃತಿಗಳನ್ನು ರಕ್ಷಿಸುವುದರ ಜೊತೆಗೆ ಸಂಶೋಧನೆಯ ವಾಣಿಜ್ಯೀಕರಣಕ್ಕೂ ಸಹಕಾರಿಯಾಗಿವೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಸಿಯುಕೆ ವಿದ್ಯಾರ್ಥಿಗಳಿಗೆ ಅಗತ್ಯ ವೇದಿಕೆಗಳನ್ನು ಒದಗಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಶಾಲೆಗಳ ಡೀನ್‍ಗಳು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ರಾಷ್ಟ್ರಗೀತೆ ಮತ್ತು ರಾಷ್ಟ್ರಗಾನವನ್ನು ಪ್ರಸ್ತುತಪಡಿಸಿದರು. ಡಾ. ನಿಕ್ಕಿತಾ ಕಾರ್ಯಕ್ರಮ ನಿರೂಪಣೆ ನಡೆಸಿ, ಕೊನೆಯಲ್ಲಿ ಧನ್ಯವಾದಗಳನ್ನು ಅರ್ಪಿಸಿದರು.

Comments are closed.

Don`t copy text!