ಆಳಂದ: ದಸರಾ ಹಬ್ಬದಂಗವಾಗಿ ಪಟ್ಟಣದಲ್ಲಿ ನಡೆದ ಸಾಂಪ್ರದಾಯಿಕ ಬನ್ನಿ ವಿನಿಮಯ ಕಾರ್ಯಕ್ರಮದ ಮೆರವಣಿಗೆಯಲ್ಲಿ ಗ್ರೇಡ್-2 ತಹಸೀಲ್ದಾರ ಬಿ.ಜಿ. ಕುದರಿ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.
ಆಳಂದ: ಅತಿ ವೃಷ್ಟಿ ಅನಾವೃಷ್ಟಿ ನಡುವೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ವಿಜಯದಶಮಿ ಹಬ್ಬವನ್ನು ಭಕ್ತಿಭಾವ ಮತ್ತು ಸಂಭ್ರಮದಿಂದ ಎಂದಿನಂತೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಆಡಳಿತದಿಂದ ಪಟ್ಟಣದ ಎಚ್.ಕೆ. ಡಿಗ್ರಿ ಕಾಲೇಜು ಬಳಿ ಸಂಜೆ ಬನ್ನಿ ವಿನಿಮಯ ಕಾರ್ಯಕ್ರಮವನ್ನು ಗ್ರೇಡ್-2 ತಹಸೀಲ್ದಾರ ಬಿ.ಜಿ.ಕುದರಿ ಅವರು ಚಾಲನೆ ನೀಡಿದರು. ಆರ್ಯ ಸಮಾಜ ಮಂದಿರದಿಂದ ಸಾಂಪ್ರದಾಯಿಕ ಮೆರವಣಿಗೆಯನ್ನು ಹನುಮಾನ ಮಂದಿರ ಮೂಲಕ ಡಿಗ್ರಿಕಾಲೇಜುವರೆಗೆ ನಡೆದ ಬನ್ನಿ ವಿನಿಮಯಕ್ಕೆ ಚಾಲನೆ ನೀಡಲಾಯಿತು.
ಪಟ್ಟಣದ ಪ್ರಮುಖ ರಸ್ತೆಗಳು, ಸಾರ್ವಜನಿಕ ಸ್ಥಳಗಳು ಹಾಗೂ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿದ ದೇವಿಯ ಮೂರ್ತಿಗಳನ್ನು ಅಲಂಕರಿಸಲಾಗಿತ್ತು. ಮಹಿಳೆಯರು, ಮಕ್ಕಳು ಸೇರಿದಂತೆ ಭಕ್ತರು ದೇವಿಯ ದರ್ಶನ ಪಡೆದು ಭಕ್ತಿಭಾವದಿಂದ ಪ್ರಾರ್ಥಿಸಿದರು.
ಹಬ್ಬದ ಅಂಗವಾಗಿ ಸಾರ್ವಜನಿಕರು ಪರಸ್ಪರ ಗುರು-ಹಿರಿಯರು, ಸ್ನೇಹಿತರು ಮತ್ತು ಬಂಧು-ಬಾಂಧವರಿಗೆ ಬೆಳ್ಳಿ-ಬಂಗಾರ ರೂಫದಲ್ಲಿ ಬನ್ನಿ ನೀಡಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಪಟ್ಟಣದ ಎ.ವಿ.ಪಾಟೀಲ ಡಿಗ್ರಿ ಕಾಲೇಜು ಬಳಿ ಸಾಂಪ್ರದಾಯಿಕ ಬನ್ನಿ ವಿನಿಮಯ ಕಾರ್ಯಕ್ರಮ ನಡೆಯಿತು. ಗ್ರೇಡ್-2 ತಹಸೀಲ್ದಾರ ಬಿ.ಜಿ. ಕುದರಿ, ಪುರಸಭೆ ಸದಸ್ಯ ಈರಣ್ಣಾ ಹತ್ತರಕಿ, ಖಜೂರಿ ನಾಡ್ ತಹಹಸೀಲ್ದಾರ ಗುರುಲಿಂಗಯ್ಯಾ ಸ್ವಾಮಿ, ಗ್ರಾಮಾಡಳಿತ ಹಿರಿಯ ಅಧಿಕಾರಿ ಶರಣಬಸಪ್ಪ ಹಕ್ಕಿ, ಆನಂದ ಪೂಜಾರಿ, ಸಂಜಯ ಮಿಸ್ಕಿನ್ ಸೇರಿದಂತೆ ವಿವಿಧ ಸಮಾಜ ಸಂಘಟನೆಗಳ ಪ್ರಮುಖರು ಮತ್ತು ಸಾರ್ವಜನಿಕರು ಭಾಗವಹಿಸಿ ಬನ್ನಿ ವಿನಿಮಯ ಮಾಡಿಕೊಂಡು ಪರಸ್ಪರ ಶುಭಾಷಯ ಕೊರಿಕೊಂಡರು.
ಗ್ರಾಮೀಣ ಭಾಗದಲ್ಲೂ ಖಜೂರಿ, ನಿಂಬರಗಾ, ನರೋಣಾ, ಮಾದನಹಿಪ್ಪರಗಾ ಗ್ರಾಮ ಹಬ್ಬವನ್ನು ಆಚರಿಸಲಾಯಿತು.
Comments are closed.