Shubhashaya News

ನೂತನ ಶಿಕ್ಷಣಾಧಿಕಾರಿ ವಿ.ರಂಗಸ್ವಾಮಿ ಶೆಟ್ಟಿ ಅಧಿಕಾರ ಸ್ವೀಕಾರ

ಆಳಂದ: ತಾಲೂಕಿಗೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವಿ.ರಂಗಸ್ವಾಮಿ ಶೆಟ್ಟಿ ಅವರು ಸೋಮವಾರ ಅಧಿಕಾರ ವಹಿಸಿಕೊಂಡರು. ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸತೀಶ ಷಣ್ಮೂಖ, ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ, ನಾಗಪ್ಪ ದೇವಂತಗಿ ಇತರರು ಸ್ವಾಗತಿಸಿದರು.

 

 

ಆಳಂದ: ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯಿಂದ ಆಳಂದ ತಾಲೂಕಿಗೆ ನೂತನ ಶಿಕ್ಷಣಾಧಿಕಾರಿಯಾಗಿ ವಿ.ರಂಗಸ್ವಾಮಿ ಶೆಟ್ಟಿ ಅವರನ್ನು ನೇಮಿಸಲಾಗಿದೆ.

ಈ ಸಂಬಂಧ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಮುತ್ತು ಮೇ 03, 2025 ರಂದು ಬೆಂಗಳೂರಿನಲ್ಲಿ ಆದೇಶ ಪತ್ರವನ್ನು ಹೊರಡಿಸಿದ್ದಾರೆ.

ಪತ್ರದ ವಿವರಗಳ ಪ್ರಕಾರ, ವಿ.ರಂಗಸ್ವಾಮಿ ಅವರು (ಪ್ರಸ್ತುತ ನಿರೀಕ್ಷಣೆಯಲ್ಲಿರುವರು) ಆಳಂದ ತಾಲೂಕಿನಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಈ ಹಿಂದೆ ಆಳಂದ ತಾಲೂಕಿನಲ್ಲಿ ಪ್ರಭಾರಿ ಶಿಕ್ಷಣಾಧಿಕಾರಿಯಾಗಿದ್ದ ಹೃಷಿಕೇಶ ದಂತಕಾಳೆ ಮೂಲಸ್ಥಾನಕ್ಕೆ ತೆರಳಲಿದ್ದು,  ವಿ.ರಂಗಸ್ವಾಮಿ ಅವರು ತಕ್ಷಣವೇ ಆಳಂದದಲ್ಲಿ ಅಧಿಕಾರ ಸ್ವೀಕರಿಸಿ ಕರ್ತವ್ಯ ನಿರ್ವಹಿಸುವಂತೆ ಆದೇಶದಲ್ಲಿ ತಿಳಿಸಿದ ಹಿನ್ನೆಲೆಯಲ್ಲಿ ಅವರು ಸೋಮವಾರ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ (ತಮ್ಮ) ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸತೀಶ ಷಣ್ಮೂಖ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ, ಖಾಸಗಿ ಅನುದಾನಿತ ಶಾಲಾ ಶಿಕ್ಷಕರ ಸಂಘದ ಮುಖಂಡ ನಾಗಪ್ಪ ದೇವಂತಗಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸೂರ್ಯವಂಶಿ, ವ್ಯವಸ್ಥಾಪಕ ಮಲ್ಲಿಕಾರ್ಜುನ, ಎಫ್‍ಡಿಎ ಲೋಕೇಶ ಜಾಧವ, ಮಹಾಂತೇಶ, ಅಧೀಕ್ಷಕಿ ಜನಾಬಾಯಿ ಮತ್ತು ರಂಜನಾ ಕುಲಕರ್ಣಿ  ಸೇರಿದಂತೆ ಇತರ ಸಿಬ್ಬಂದಿಗಳು ಮತ್ತಿತರು ನೂತನ ಶಿಕ್ಷಣಾಧಿಕಾರಿಗಳಿಗೆ   ಸ್ವಾಗತಿಸಿಕೊಂಡರು.

ಕಳೆದ ಕೆಲವು ವರ್ಷಗಳಿಂದ ಇಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೆಚ್ಚು ಕೆಲಸ ನಿರ್ವಹಿಸುವ ಬದಲು ವರ್ಗಾವಣೆ ಆಗಿತ್ತಲೇ ಇದ್ದುದ್ದರಿಂದಿ ಶಿಕ್ಷಣ ವ್ಯವಸ್ಥೆಯ ಹಿಡಿತ ಕಳೆದುಕೊಂಡಿದ್ದು ಈ ಬಾರಿಯ ತಾಲೂಕಿನ ಶಾಲೆಗಳಲ್ಲಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಕುಸಿತಕ್ಕೂ ಕಾರಣವೆಂದು ಶೈಕ್ಷಣಿಕ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ನೂತನ ಶಿಕ್ಷಣಾಧಿಕಾರಿಯ ನೇಮಕದಿಂದ ಆಳಂದ ತಾಲೂಕಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆಯ ನೀರಿಕ್ಷೆಯ ನಡುವೆ ಕಾದುನೋಡುವಂತೆ ಮಾಡಿದೆ.

Leave A Reply

Your email address will not be published.