ಆಳಂದ: ಬಟ್ಟರಗಾ ಗ್ರಾಮದ ಭಾವೈಕ್ಯತೆ ಮೌಲಾಲಿ ದರ್ಗಾದ ಹೊರನೋಟ
ಆಳಂದ: ತಾಲೂಕಿನ ಬಟ್ಟರಗಾ ಗ್ರಾಮದ ಭಾವೈಕ್ಯದ ಆರಾಧ್ಯ ದೇವರಾದ ಹಜರತ್ ಸೈಯದ ಹುಸೇನಿ ಶಾಹವಲಿ ಉರ್ಪ ಮೌಲಾ ಅಲಿ 136ನೇ ಜಾತ್ರೆ ಏ. 17 ರಿಂದ 19 ವರೆಗೆ ನಡೆಯಲಿದೆ ಎಂದು ಸದ್ಬಕ್ತ ಮಂಡಳಿ ಪರವಾಗಿ ನಬೀಸಾಬ ಮುತ್ಯಾ ಅವರು ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಪ್ರತಿ ವರ್ಷದಂತೆ ಜಾತ್ರೆಯನ್ನು ವಿಜ್ರಂಮಣೆಯಿಂದ ನಡೆಯಲಿದ್ದು, ಏ 17 ರಂದು ಧಂಗಾಪೂರ ಗ್ರಾಮದ ಮಾಜಿ ಶಾಸಕ ದಿ. ಶರಣಬಸಪ್ಪ ಮಾಲಿ ಪಾಟೀಲ್ ಅವರ ಮನೆಯಿಂದ ಗಂಧ ಹೊರಟು ಸಾಹೇಬರ ಮುನೆಗೆ ತಲುಪಿ ಇಡೀ ರಾತ್ರಿ ವಿವಿಧ ಸಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಬೆಳಗಿನ ಜಾವ 04.00ಕ್ಕೆ ದರ್ಗಾದ ಪೀಠಾಧಿಪತಿ ಸೈಯದ ಬಾಷಾ ಹುಸೇನಿ ಉರ್ಪ ಸೈಯದ ಖುತುಬಿ ಹುಸೇನಿ ಸಜ್ಜಾದಾ ನಶೀನ ವ ಮುತವಲ್ಲಿ ಅವರ ಅಮೃತ ಹಸ್ತದಿಂದ ಗಂಧ ಲೇಪನ ನಡೆಯಲಿದೆ ಎಂದರು.
ಏ 18 ದೀಪ ಬೆಳಗುವ ಕಾರ್ಯಕ್ರಮ ನಡೆಯಲಿದ್ದು, 19 ಮಂಗಳವಾರ ಜೀಯಾರತ ನಂತರ ಪ್ರಸಾದ ವಿತರಣೆ, ಸಂಜೆ 4:00 ಗಂಟೆಗೆ ಜಂಗೀ ಪೈಲ್ವಾನರ ಕುಸ್ತಿಗಳು, ದೀಪ ಮತ್ತು ಗೀಗೀ , ಕವಾಲಿಗಳು ಇನ್ನಿತರ ಸಂಸ್ಕøತಿಕ ಕಾರ್ಯಕ್ರಮ ನಡೆಯಲಿವೆ.
ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತಾಧಿಗಳು ದರ್ಶನ ಪಡೆಯಲಿದ್ದು, ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಜಾತ್ರೆಯಲ್ಲಿ ಎಂದಿನಂತೆ ಪಾಲ್ಗೊಂಡು ಭಾಷಾ ಮುತ್ಯಾ ಅವರ ದರ್ಶನ ಪಡೆಯಬೇಕೆಂದು ಅವರು ಮನವಿ ಮಾಡಿದ್ದಾರೆ.