ಆಳಂದ: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಠಾಣೆಯ ಪಿಐ ಶರಣಬಸಪ್ಪ ಕೊಡ್ಲಾ ನೇತೃತ್ವದಲ್ಲಿ ಪಿಎಸ್ಐ ಭೀಮಾಶಂಕರ್ ಬಂಕ್ಲಿ ಸಿಬ್ಬಂದಿಗಳು ಮಾಲು ಸಮೇತ ಕಳ್ಳತನ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಆಳಂದ: ಪೆÇಲೀಸ್ ಠಾಣೆಯ ಸಿಬ್ಬಂದಿಗಳು ಖಚಿತ ಮಾಹಿತಿಯನ್ನು ಆಧರಿಸಿ, ಕಳ್ಳತನ ಪ್ರಕರಣವೊಂದನ್ನು ಯಶಸ್ವಿಯಾಗಿ ಭೇದಿಸಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಪೆÇಲೀಸರು ಆರೋಪಿಯಿಂದ ಒಟ್ಟು 68,000 ರೂಪಾಯಿ ಮೌಲ್ಯದ ಮುದ್ದೆಮಾಲನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 32 ಇಂಚಿನ ಎರಡು ಟಿವಿಗಳು, ಎರಡು ಖಾಲಿ ಗ್ಯಾಸ್ ಸಿಲಿಂಡರ್ಗಳು ಮತ್ತು ಮನೆ ಬಳಕೆಯ ವಸ್ತುಗಳು ಸೇರಿವೆ. ದಸ್ತಗಿರಿ ಮಾಡಲಾದ ಒಬ್ಬ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಾಚರಣೆಗೆ ಜಿಲ್ಲಾ ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರು ಆಳಂದ ಪೆÇಲೀಸರ ಕರ್ತವ್ಯವನ್ನು ಪ್ರಶಂಸಿಸಿದ್ದಾರೆ.
ಈ ಪ್ರಕರಣವು ಏ.8ರಂದು ಆಳಂದ ಪೆÇಲೀಸ್ ಠಾಣೆಯಲ್ಲಿ ವರದಿಯಾಗಿದ್ದು, ಕ್ರೈಂ ಸಂಖ್ಯೆ 82/2025 ಅಡಿಯಲ್ಲಿ ಐಪಿಸಿ ಸೆಕ್ಷನ್ 300, 331(3), 331(4), ಮತ್ತು 305 ರಂತೆ ದಾಖಲಾಗಿತ್ತು. ಘಟನೆಯು ದಿನಾಂಕ ಏ.4ರಂದುು ಮಧ್ಯರಾತ್ರಿ 12:30 ಸುಮಾರಿಗೆ ನಡೆದಿದ್ದು, ಕಳ್ಳತನದಲ್ಲಿ ಭಾಗಿಯಾದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೆÇಲೀಸರು ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಆಳಂದ ಪೆÇಲೀಸ್ ಠಾಣೆಯ ಪಿಐ ಶರಣಬಸಪ್ಪ ಕೋಡ್ತಾ, ಪಿಎಸ್ಐ ಭೀಮರಾಯ ಬಂಕ್ಷಿ ಮತ್ತು ಸಿಬ್ಬಂದಿಗಳಾದ ಮೆಹಬೂಬ ಶೇಖ (ಎಚ್ಸಿ-282), ಚಂದ್ರಶೇಖರ (ಎಚ್ಸಿ-277), ಗಣಪತರಾವ (ಎಚ್ಸಿ-204), ಸಚಿನ (ಪಿಸಿ-477), ಜಾಕೀರ (ಪಿಸಿ-374), ವೆಂಕಟರಾವ (ಪಿಸಿ-94), ಶ್ರೀ ಮೌಲಾಲಿ (ಎಪಿಸಿ-21) ಮತ್ತು ಇತರರು ಭಾಗವಹಿಸಿದ್ದರು.
ಈ ತಂಡವು ಮಾನ್ಯ ಆರಕ್ಷಕ ಅಧಿಕ್ಷಕರು ಕಲಬುರಗಿ, ಹೆಚ್ಚುವರಿ ಅಧಿಕ್ಷಕರು ಕಲಬುರಗಿ ಹಾಗೂ ಉಪ-ಅಧಿಕ್ಷಕರು ಆಳಂದ ರವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಿತು.
ಈ ಯಶಸ್ವಿ ಕಾರ್ಯಾಚರಣೆಯಿಂದಾಗಿ ಆಳಂದ ಪೆÇಲೀಸ್ ಠಾಣೆಯ ಸಿಬ್ಬಂದಿಗಳ ಶ್ರಮ ಮತ್ತು ಸಮರ್ಪಣೆಗೆ ಮಾನ್ಯ ಎಸ್ಪಿ ಸಾಹೇಬರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೆÇಲೀಸರ ಪ್ರಯತ್ನಗಳಿಗೆ ಮತ್ತೊಂದು ಉದಾಹರಣೆಯಾಗಿದೆ