ಆಳಂದ: ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ಕೆರೆ ನಿರ್ಮಾಣದಲ್ಲಿ ತೊಡಗಿದ ಕಾರ್ಮಿಕರು.
ಆಳಂದ: ಗ್ರಾಪಂಗಳ ಮೂಲಕ ತಾಲೂಕಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಒಉಓಖಇಉಂ) ಕಾಮಗಾರಿಯೂ ಜಿಲ್ಲೆಯ 11 ತಾಲೂಕುಗಳ ಪೈಕಿ 9ನೇ ಸ್ಥಾನಕ್ಕೆ ಕುಸಿದಿದೆ.
ಜಿಲ್ಲೆಯ11 ತಾಲೂಕುಗಳ ಪೈಕಿ ಆಳಂದ ತಾಲೂಕು ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ 9ನೇ ಸ್ಥಾ£ಕ್ಕೆ ಕುಸಿದ್ದು ಆಡಳಿತವನ್ನು ನಾಚಿಸುವಂತೆ ಮಾಡಿದೆ. ಪ್ರತಿಯೊಂದು ಸಾಧನೆಯಲ್ಲಿ ಮಂಚೂಣಿಯಲಿರುತ್ತಿದ್ದ ಈ ತಾಲೂಕು ಈ ಉದ್ಯೋಗ ಖಾತ್ರಿಯಲ್ಲಿ ಹಿಂದೇಟಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಅಧಿಕಾರಿಗಳು ಹೇಳುವಂತೆ ಸಾವಿರ ಜನಕ್ಕೆ ಕೆಲಸಕೊಟ್ಟರು 300 ಜನರೆ ಬರುತ್ತಿದ್ದಾರೆ. ಕೆಲಸಕ್ಜೆ ಗೈರಾಗುತ್ತಿರುವುದಕ್ಕೆ ಬೋಗಸ್ ಹಾಜರಾತಿ ತಡೆಯಲಾಗಿದ್ದು ಪ್ರಮುಖ ಕಾರಣ ಎಂಬುದು ಅಧಿಕಾರಿಗಳು ಹೇಳುತ್ತಿದ್ದಾರೆ. ಕೆಲಸ ಕೊಟ್ಟಷ್ಟು ಜನ ಸಕಾಲಕ್ಕೆ ಸರ್ವರು ಬರುತ್ತಿಲ್ಲ. ಕಾರ್ಮಿಕರಿಗೆ ವೇತನ 15 ದಿನದೊಳಗೆ ನೆರವಾಗಿ ಅವರ ಖಾತೆಗೆ ಜಮಾಗೊಳುತ್ತದೆ. ಇಷ್ಟಾಗಿಯೂ ಸಾಧನೆಗೆ ಹಿನ್ನೆಡೆ ಅನುಭವಿಸಿದೆ.
ಒಟ್ಟು ತಾಲೂಕಿನ 42 ಗ್ರಾಪಂಗಳಿಗೆ ಪ್ರಸ್ತುತ ಕೈಗೆತ್ತಿಕೊಂಡ ಒಟ್ಟು 3120 ಕಾಮಗಾರಿಯಲ್ಲಿ ಎರಡು ತಿಂಗಳಲ್ಲಿ 983 ಕಾಮಗಾರಿ ಪೂರ್ಣಗೊಂಡಿವೆ. ಇನ್ನೂ 2137 ಪ್ರಸ್ತುತ ಕಾಮಗಾರಿ ಚಾಲ್ತಿಯಲಿವೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಉದ್ಯೋಗ ಖಾತ್ರಿ ಕೆಲಸಕ್ಕೆ 71323 ಕುಟುಂಬಗಳು ನೊಂದಾಯಿಸಿದ್ದರಾದರು ಇದರಲ್ಲಿ 31807 ಕೆಲಸದ ಬೇಡಿಕೆಯಿಟ್ಟಿದ್ದಾರೆ. ಈ ್ಲ 31402 ಕುಟುಂಬಗಳಿಗೆ ಕೆಲಸ ನೀಡಲಾಗಿದೆ. ಇನ್ನೂಳಿದವರ ದಾಖಲೆ ಏರುಪೇರಾಗಿದ್ದರಿಂದ ಕೈಬಿಡಲಾಗಿದೆ ಎನ್ನಲಾಗಿದೆ. ಒಟು42 ಗ್ರಾಮ ಪಂಚಾಯತಿಗಳಲ್ಲಿ 2337 ಕಾಮಗಾರಿಗಳ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಶೇ 74.7ರಷ್ಟು ಸಾಧನೆ ಗುರಿ ಸಾಧಿಸಿಕೊಂಡಿದೆ ತೃಪ್ತಿಕರವಾಗಿದ್ದರು, ಒಟ್ಟು ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಕಾಮಗಾರಿ ಗುರಿ ಸಾಧನೆಯಲ್ಲಿ ಜಿಲ್ಲೆಯಲ್ಲಿ 9ನೇಸ್ಥಾನಕ್ಕಿಳಿದುಕೊಂಡಿದೆ.
2024-25ರಲ್ಲಿ ಮಾನವ ದಿನಗಳ 965023 ಗುರಿ ಹೊಂದಲಾಗಿದೆ. ಪೈಕಿ 650113 ಮಾನವ ದಿನಗಳು ಗುರಿ ಸಾಧಿಸಲಾಗಿದೆ. ಶೇ 67.4 ಪ್ರತಿಷಿತ ಗುರಿ ಸಾಧಿಸಲಾಗಿದೆ. ಹಳ್ಳಿಸಲಗರ ಗ್ರಾಪಂನಲ್ಲಿ ಅತಿ ಹೆಚ್ಚು ಮಾನವ ದಿನಗಳ ಸಾಧನೆಯಾಗಿದ್ದು ಶೇ 191 ಪ್ರತಿಷಿತ ಗುರಿಸಾಧಿಸಲಾಗಿದೆ. ನರೋಣಾ ಪಂಚಾಯಿತಿಯಲ್ಲಿ ಅತಿ ಕಡಿಮೆ ಶೇ 15 ಪ್ರತಿಷಿತ ಗುರಿಸಾದಿಸಿ ಕಡಿಮೆಯಾಗಿದೆ.
ಈ ಯೋಜನೆ ಗ್ರಾಮೀಣ ನಿರುದ್ಯೋಗ ನಿವಾರಣೆಗೆ ಪ್ರಮುಖ ಯೋಜನೆ ಆಗಿದ್ದರೂ, ಅದರ ಫಲಿತಾಂಶಗಳ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಕ್ರಿಯಾಯೋಜನೆ ಮಾಡಿದಷ್ಟು ಕಾಮಗಾರಿಗಳು ವಾಸ್ತವದಲ್ಲಿ ಪ್ರತ್ಯಕ್ಷವಾಗುತ್ತಿಲ್ಲ. ಸರ್ಕಾರದ ಹಣ ಹರಿದುಹೋಗುತ್ತಿದೆ, ಆದರೆ ಸಮರ್ಪಕವಾಗಿ ಕೃಷಿ, ನೀರಾವರಿ ಮತ್ತು ಅಂತರ್ಜಲ ಸುಧಾರಣಾ ಕೆಲಸಗಳು ಎಲ್ಲಿ ನಡೆಯುತ್ತಿವೆ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ ಎಂಬ ಆರೋಪಗಳು ಕೇಳಿಬರಲಾರಂಭಿಸಿವೆ.
ಅಸಮಾನತೆ ಮತ್ತು ಯೋಜನೆಯ ವೈಫಲ್ಯ:
ಯೋಜನೆಗೆ ಅನುದಾನ ಬರಿದೇ ಅಂಕಿಅಂಶಗಳ ಮಟ್ಟಿಗೆ ಉಳಿದಿದೆಯೇ? ಈ ಬಗ್ಗೆ ವಿರೋಧ ಪಕ್ಷ ಮತ್ತು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. ವಾಸ್ತವದಲ್ಲಿ ಕಣ್ಣಿಗೆ ಗೋಚರಿಸುವಂತಹ ಯಾವುದೇ ದೊಡ್ಡ ಅಭಿವೃದ್ಧಿ ಕೆಲಸಗಳು ಗ್ರಾಮೀಣ ಪ್ರದೇಶಗಳಲ್ಲಿ ಕಾಣಸಿಗುತ್ತಿಲ್ಲ ಎಂಬ ಆರೋಪಗಳು ಸಾಮಾನ್ಯವಾಗಿ ಬಿಟ್ಟಿವೆ.
ಪ್ರಶ್ನೆಗೆ ಕಾರಣವಾಗುತ್ತಿರುವ ಪ್ರಮುಖ ಅಂಶಗಳು:
ಹಣ ದುರ್ಬಳಕೆ ಮತ್ತು ಅಕ್ರಮ: ಕಾಗದದಲ್ಲಿ ಲಕ್ಷಾಂತರ ರೂಪಾಯಿ ಬಳಸಲಾಗಿದೆ ಎಂದು ದಾಖಲಾಗಿದರೂ, ಸ್ಥಳೀಯ ಅಭಿವೃದ್ಧಿಯಲ್ಲಿ ಏನೂ ಬದಲಾವಣೆ ಕಾಣಲಾಗುತ್ತಿಲ್ಲ. ನೀರಾವರಿ, ಕೃಷಿ ಪೂರಕ ಕಾಮಗಾರಿಗಳು ತಳಮಟ್ಟದಲ್ಲಿ ಸ್ಪಷ್ಟವಾಗಿ ಗೋಚರಿಸುವಂತಿಲ್ಲ. ಈ ಯೋಜನೆ ಗ್ರಾಮೀಣ ಜನತೆಗೆ ಉದ್ಯೋಗ ಖಾತರಿ ನೀಡಲು ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಅನ್ವಯಿಸಬೇಕಾದರೂ, ಫಲಿತಾಂಶಗಳು ಹಾಸ್ಯಾಸ್ಪದವಾಗಿವೆ.
ಆಳಂದ ತಾಲೂಕಿನಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯು “ಉದ್ಯೋಗ ಖಾತರಿ” ಎಂಬ ಹೆಸರಿಗೇ ತಕ್ಕಂತೆ ಕಾರ್ಯನಿರ್ವಹಿಸುತ್ತಿದೆಯಾ? ಅಥವಾ ಬರೀ ಅಂಕಿಅಂಶಗಳ ಲೆಕ್ಕಾಚಾರದಲ್ಲಿ ಸರ್ಕಾರದ ಹಣ ವ್ಯರ್ಥವಾಗುತ್ತಿದೆಯಾ? ಈ ಕುರಿತು ಸಮಗ್ರ ತನಿಖೆ ಮತ್ತು ನಿರ್ವಹಣಾ ಸುಧಾರಣೆ ಅಗತ್ಯವಿದೆ. ಯೋಜನೆಯ ಸತತ ಸುಧಾರಣೆಯಿಲ್ಲದೆ ಗ್ರಾಮೀಣ ಪ್ರದೇಶದ ಜನರು ಮೋಸಕ್ಕೀಡಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
ಹೊಂದಿಕೊಳ್ಳಬೇಕಾದ ತ್ವರಿತ ಕ್ರಮಗಳು:
ಕಡೇಮಟ್ಟದ ಪರಿಶೀಲನೆ: ಎಲ್ಲಾ ಕಾಮಗಾರಿಗಳನ್ನು ಸಾಕ್ಷ್ಯಾಧಾರಗಳೊಂದಿಗೆ ಪರಿಶೀಲನೆ ಮಾಡಬೇಕು. ಯೋಜನೆಯ ವ್ಯವಹಾರಗಳು ಉPS ಆಧಾರಿತ ಮ್ಯಾಪಿಂಗ್ ಮೂಲಕ ಅನುಸರಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಳೀಯ ಸಮಿತಿಗಳನ್ನು ರಚಿಸಿ, ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ಪ್ರಾರಂಭಿಸಬೇಕು. ಅಧಿಕಾರಿಗಳು ಕೈಗೊಳ್ಳುವ ತೀರ್ಮಾನಗಳು ವೈಜ್ಞಾನಿಕವಾಗಿ ಸಮರ್ಥವಾಗಿರಬೇಕು ಮತ್ತು ತಾತ್ಕಾಲಿಕ ಲಾಭಕ್ಕೋಸ್ಕರ ದುರ್ಬಳಕೆ ತಡೆಯಬೇಕು.
ಹರ್ಷಾನಂದ ಗುತ್ತೇದಾರ ಬಿಜೆಪಿ ಮುಖಂಡ ಹಾಗೂ ಜಿಪಂ ಮಾಜಿ ಉಪಾಧ್ಯಕ್ಷರು ಆಳಂದ.
ಮೌಲಾ ಮುಲ್ಲಾ ಸಿಪಿಐ ರಾಜ್ಯ ಮುಖಂಡರು.
ಗುರಿ ಸಾಧನೆಗೆ ಒತ್ತು
ಕಾರ್ಮಿಕರಿಗೆ ಕೆಲಸ ನೀಡುವುದು ಮತ್ತು ಅಂತರ್ಜಲ ಹೇಳದಂತ ಕಾಮಗಾರಿಗಳು ಕೈಗೆತ್ತಿಕೊಂಡು ಬೇಸಿಗೆಯಲ್ಲಿ ಕಾರ್ಮಿಕರಿಗೆ ಕೆಲಸ ನೀಡುವಂತೆ ಎಲ್ಲಾ ಗ್ರಾಪಂ ಪಿಡಿಗಳ ಸಭೆ ಕರೆದು ಸೂಚನೆ ನೀಡಲಾಗಿದೆ. ವಾರ್ಷಿಕ ಗುರಿ ಸಾಧನೆಗೆ ಒತ್ತು ನೀಡಲಾಗುವುದು.
ಮಾನಪ್ಪ ಕಟ್ಟಿಮನಿ ತಾಪಂ ಇಒ ಆಳಂದ.
ಬೋಗಸ್ಗೆ ಅವಕಾಶ ನೀಡಿಲ್ಲ:
ದುರ್ಬಳಕೆ ತಡೆಗಟ್ಟಿ ನಿಜವಾದ ಕೂಲಿ ಕಾರ್ಮಿಕರ ಹಾಜರಾತಿ ನೀಡಲಾಗುತ್ತಿದೆ. ಎನ್ಎಂಎಂಎಸï ತಂತ್ರಾಂಶದ ಮೂಲಕ ಕಾರ್ಮಿಕರ ಹಾಜರಾತಿ ಹಾಕಿ ವೇತನ ಪಾವತಿಸಲಾಗುತ್ತದೆ. ನೀರಾವರಿ,ಕೆರೆ ನಿರ್ಮಾಣ ರೈತರಿಗೆ ಅನುಕೂಲಕ್ಕೆ ಅಂತರ್ಜಲ ಹೆಚ್ಚಿಸುವ ಕಾಮಗಾರಿಗೆ ಒತ್ತು ನೀಡಲಾಗಿದೆ.
ಸೋಮಶೇಖರ ಜಾಡರ್ ಸಹಾಯಕ ನಿರ್ದೇಶಕರು ಉದ್ಯೋಗ ಖಾತ್ರಿ ತಾಪಂ ಆಳಂದ