70 ಹಳ್ಳಿಗೆ ಕುಡಿಯುವ ನೀರಿನ ಕೊರತೆ, ಕೃಷಿ ಹಾಗೂ ಪ್ರಾಣಿ ಸಂಪತ್ತಿಗೆ ಸಂಕಷ್ಟ
ಬೇಸಿಗೆಯ ನೀರಿನ ಬಿಕ್ಕಟ್ಟು ಆರಂಭ: ನದಿ ದಂಡೆ ಜಿರೋಳಿ ಬಾವಿಗಿಲ್ಲ ನೀರು
ಆಳಂದ: ಅಮರ್ಜಾ ಮೇಲ್ಭಾಗದ ನದಿ ದಡದ ಜಿರೋಳಿ ಗ್ರಾಮದ ತೆರೆದ ಬಾವಿ ಬೇಸಿಗೆ ಮುನ್ನವೇ ಬತ್ತಿ ಹೋಗಿದೆ.
ಆಳಂದ: ನೀರಿನ ಸಮಸ್ಯೆ ಎದುರಾದ ಜಿರೋಳಿ ಗ್ರಾಮಕ್ಕೆ ಭೇಟಿ ನೀಡಿದ ತಾಪಂ ಇಒ ಮಾನಪ್ಪ ಕಟ್ಟಿಮನಿ ಪರಿಶೀಲಿಸಿ ಖಾಸಗಿ ಮೂಲದ ನೀರು ಪೂರೈಕೆಗೆ ಸೂಚಿಸಿದರು. ಜೆಜೆಎಂ, ಎಇಇ ವಿಜಯಕುಮಾರ ಇತರರು ಇದ್ದರು.
ಆಳಂದ: ಬೇಸಿಗೆ ಹಂಗಾಮು ಪ್ರಾರಂಭವಾಗುತ್ತಿದ್ದಂತೆ ಪ್ರಥಿವಿಯ ಉಷ್ಣತೆ ಹೆಚ್ಚಳದಿಂದ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ನೀರಿನ ತೀವ್ರ ಕೊರತೆ ಉಂಟಾಗುವ ಆತಂಕ ಸೃಷ್ಟಿಸಿದೆ.
ಈ ಬಾರಿ ವಿಚಿತ್ರವಾದರೂ ಸತ್ಯ ಎನ್ನುವಂತೆ ನದಿ ದಡದಲ್ಲಿರುವ ಜಿರೋಳಿ ಗ್ರಾಮದ ನೀರು ಪೂರೈಕೆಯ ಬಾವಿ ಬತ್ತಿ ಹೋಗಿದ್ದು, ಖಾಸಗಿ ಮೂಲದಿಂದ ನೀರು ಖರೀದಿಸಿ ಪೂರೈಕೆ ಪರಿಸ್ಥಿತಿ ಎದುರಾಗಿದೆ.
ಈ ಹಂಗಾಮಿನ ಮೊದಲು ಹಳಿಯಾಗಿ ನಿರಗುಡಿ ಗ್ರಾಮದಲ್ಲಿ ಖಾಸಗಿ ಕೊಳವೆ ಬಾವಿಯಿಂದ ನೀರು ಖರೀದಿಸಿ ಪೂರೈಕೆ ಆರಂಭಿಸಲಾಗಿದೆ. ತಾಲೂಕಿನ ಗ್ರಾಮೀಣ ಮತಕ್ಷೇತ್ರಕ್ಕೆ ಒಳಪಡುವ ಬೋಧನವಾಡಿ, ಹಾಳತಕಲ್ ಗ್ರಾಮದಲ್ಲೂ ಖಾಸಗಿವಾಗಿ ಪಡೆದು ಪೂರೈಸಲು ತಾಲೂಕು ಆಡಳಿತ ಮುಂದಾಗಿದೆ. ಈ ಸಂಖ್ಯೆ ದಿನಕಳದಂತೆ ಹೆಚ್ಚಾಗುವ ಸಾಧ್ಯತೆ ಇದೆ.
ಪ್ರಾಥಮಿಕವಾಗಿ ಅಂದಾಜಿಸಿದಂತೆ ತಾಲೂಕಿನ 70ಹಳ್ಳಿಗಳನ್ನು ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಹಳ್ಳಿಗಳೆಂದು ಗುರುತಿಸಲಾಗಿದೆ. ನೀರಿನ ಕೊರತೆಯಿಂದಾಗಿ ರೈತರ ಕೃಷಿ ಚಟುವಟಿಕೆಗಳು ಮತ್ತು ಪಶುಪಾಲಕರ ಆತಂಕ ಎದುರಿಸುವಂತಾಗಿದೆ.
ಬೇಸಿಗೆಯಲ್ಲಿ ಬಾವಿಗಳು, ಕೆರೆ-ಕಟ್ಟೆಗಳು ಒಣಗುವ ಪ್ರವೃತ್ತಿ ಹೊಂದಿದ್ದು, ಹಲವೆಡೆ ಕೊಳವೆಬಾವಿಗಳು ಕೂಡ ನೀರಿಲ್ಲದ ಸ್ಥಿತಿಗೆ ತಲುಪುತ್ತಿವೆ. ಕುಡಿಯುವ ನೀರಿನ ಕೊರತೆಯಿಂದ ಗ್ರಾಮಸ್ಥರು ದೂರದ ಹೊಲ ಗದ್ದೆಗಳಿಗೆ ಹೋಗಿ ನೀರು ತರಬೇಕಾದ ಪರಿಸ್ಥಿತಿ ಅಲ್ಲಗಳೆಯಲಾಗದು. ಕೆಲವು ಹಳ್ಳಿಗಳಲ್ಲಿ ಖಾಸಗಿ ಮೂಲಗಳೀಂದ ನೀರು ಸರಬರಾಜು ಮಾಡುವ ಅವಶ್ಯಕತೆ ಎದುರಾಗಿದೆ.
ಕೃಷಿ ಮತ್ತು ಪಶುಪಾಲನೆ ಮೇಲೆ ಪರಿಣಾಮ: ಬೆಳೆ ಬೆಳವಣಿಗೆ ತೀವ್ರವಾಗಿ ಪ್ರಭಾವಿತ: ನೀರಿನ ಕೊರತೆಯಿಂದಾಗಿ ಬೇಸಿಗೆ ಬಿತ್ತನೆ ಮಾಡಿರುವ ಬೆಳೆಗಳಿಗೆ ನೀರು ಒದಗಿಸಲು ಸಾಧ್ಯವಾಗದೆ ರೈತರು ಹಾನಿ ಅನುಭವಿಸುತ್ತಿದ್ದಾರೆ.
ಮೆಟಲುಗಳು ಒಣಗಿ ಹೋದ ಪರಿಣಾಮ: ಹಳ್ಳಿಗಳ ಪಕ್ಕದ ಹುಲ್ಲು ಮೆಟಲುಗಳು ಒಣಗಿ ಹೋಗಿದ್ದು, ಜಾನುವಾರುಗಳಿಗೆ ಮೇವು ಪೂರೈಕೆಯ ಸಮಸ್ಯೆ ಉಂಟಾಗಿದೆ. ಇದರಿಂದ ಹಸು, ಎಮ್ಮೆ, ಕರುಗಳು ಕಷ್ಟಕ್ಕೀಡಾಗುವ ಬಗ್ಗೆ ತಳಿಹಾಕಲಾಗದು.
ಹಳ್ಳ, ಕೊಳ್ಳೆಗಳ ಕೆರೆಯ ನೀರು ಕುಡಿಯಲು ಅಸರ್ಪಕ: ಜಾನುವಾರುಗಳಿಗೆ ಇರುವ ನೀರಿನ ಮೂಲಗಳಾದ ಕೆರೆ-ಕೊಳ್ಳೆಗಳ ನೀರು ಕಡಿಮೆಯಾಗಿದ್ದು, ಕೆಲವು ಕಡೆ ನೀರಿನ ಗುಣಮಟ್ಟ ಕೂಡ ಎಂದಿಂತೆ ಕೆಡುತ್ತಿದೆ ಎನ್ನಲಾಗಿದೆ.
ಸಮಸ್ಯೆ ನಿವಾರಣೆಗೆ ಆಡಳಿತದ ಕ್ರಮ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತುರ್ತು ಸಭೆಗಳು ನಡೆಯುತ್ತಿವೆ. ನೀರಿನ ಮೂಲಗಳನ್ನು ಬೇರೆಯೂರಿನಿಂದ ತರಲು ಪಂಪ್ ಮೂಲಕ ಕೆರೆಗಳಲ್ಲಿ ನೀರು ತುಂಬಿಸುವ ಕ್ರಮವನ್ನೂ ಯೋಜನೆ ರೂಪಿಸಲಾಗುತ್ತಿದೆ. ಸರ್ಕಾರ ಮಟ್ಟದಲ್ಲಿ ನೀರಿನ ಪೂರೈಕೆಗೆ ಶಿಫಾರಸು: ರಾಜ್ಯ ಸರ್ಕಾರದಿಂದ ಹೆಚ್ಚುವರಿ ನೀರಿನ ಖಾಸಗಿ ಮೂಲಗಳಿಂದ ಪಡೆದು ಪೂರೈಕೆ ಕ್ರಮ ಕೈಗೊಳ್ಳುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸ್ಥಳೀಯ ಅಧಿಆರಿಗಳು ಕೋರಿಕೆ ಸಲ್ಲಿಸತೊಡಗಿದ್ದಾರೆ.
ನೀರಿನ ಸಂರಕ್ಷಣೆ ಹಾಗೂ ಜಾಗೃತಿಯ ಅಭಿಯಾನ: ಜನರಲ್ಲಿ ನೀರಿನ ಸದ್ಬಳಕೆ ಮತ್ತು ಸಂರಕ್ಷಣೆ ಕುರಿತಾಗಿ ಅರಿವು ಮೂಡಿಸಲು ಗ್ರಾಮಸ್ಥರ ಸಭೆಗಳನ್ನು ನಡೆಸಲಾಗುತ್ತಿದೆ.
ನೀರಿನ ಬಾವಿಗಳ ಪುನಶ್ಚೇತನ: ಹಳ್ಳಿಗಳಲ್ಲಿ ಇರುವ ಬಾವಿಗಳನ್ನು ಪುನಶ್ಚೇತನಗೊಳಿಸಲು ಸ್ಥಳೀಯ ಆಡಳಿತ ಕಸರತ್ತು ಮಾಡಬೇಕು. ಮುಂದಿನ ರ್ಷ ಬೇಸಿಗೆಯಲ್ಲಿ ಇಂತಹ ಸಮಸ್ಯೆ ತಲುಪದಂತೆ ಮಳೆನೀರು ಸಂಗ್ರಹಣೆ ಮತ್ತು ಭೂರ್ಭಜಲ ರ್ತಿಗಾಗಿ ಸೂಕ್ತ ಯೋಜನೆ ರೂಪಿಸಬೇಕಾಗಿದೆ.
ಶಾಸಕರ ಸೂಚನೆ:
ಕುಡಿಯುವ ನೀರಿನ ಪೂರೈಕೆಗಾಗಿ ಹಳ್ಳಿಗಳಿಗೆ ವಿಶೇಷ ಅನುದಾನವನ್ನು ಒದಗಿಸಲು ಸರ್ಕಾರ ಕ್ರಮವಹಿಸಿದ್ದು, ಕ್ರಿಯಾಯೋಜನೆ ಸಲ್ಲಿಸಿ ಅನುಮೋದನೆ ಪಡೆದು ತುರ್ತು ಕ್ರಮಕ್ಕೆ ಸ್ಪಷ್ಟಸೂಚನೆ ನೀಡಿದೆ. ಸಮಸ್ಯೆಯನ್ನು ನಿಯಂತ್ರಿಸಲು ಸರ್ಕಾರ ಹಾಗೂ ಸ್ಥಳೀಯ ಆಡಳಿತ, ಗ್ರಾಮಸ್ಥರು ಹಾಗೂ ರೈತರ ಪರಸ್ಪರ ಸಹಕಾರ ಅತ್ಯವಶ್ಯಕ ಈ ಬಾರಿ ಟ್ಯಾಂಕರ್ ನೀರು ಪೂರೈಕೆಗೆ ಅವಕಾಶವಿಲ್ಲ. ಅಗತ್ಯವಿದ್ದಲ್ಲಿ ಖಾಸಗಿ ಮೂಲಗಳಿಂದ ನೀರು ಖರೀದಿಸಿ ಪೂರೈಸಿ, ಸಮಸ್ಯೆ ಉಲ್ಬಣಗೊಳ್ಳದಂತೆ ಕ್ರಮಕೈಗೊಳ್ಳಲು ಸಭೆ ಕರೆದು ಅಧಿಕಾರಿಗಳನ್ನು ಸೂಚಿಸಲಾಗಿದೆ.
ಬಿ.ಆರ್. ಪಾಟೀಲ ಶಾಸಕರು ಆಳಂದ.
ಸಹಾಯವಾಣಿ ಕೇಂದ್ರ ಸಂಖ್ಯೆ: ಬೇಸಿಗೆ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಲು ಸಹಾಯವಾಣಿ ಕೇಂದ್ರ ತೆರೆಯಲಾಗಿದ್ದು, ಸಂಪರ್ಕಿಸಲು 08477-202102 ಸಂಪರ್ಕಿಸಬೇಕು. ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ನೀರಿನ ಸಮಸ್ಯೆಯಾದ ಕಡೆ ಹೋಗಿ ನಿವಾರಿಸಬೇಕು. ಗ್ರಾಪಂ ಅಧಿಕಾರಿಗಳು ಮತ್ತು ಸಿಬ್ಬಂದಿ ನೀರಿನ ಕೊರತೆಯನ್ನು ತಡೆಗಟ್ಟಲು ಕೇಂದ್ರ ಸ್ಥಾ£ದಲ್ಲಿರಬೇಕು ಅಗತ್ಯವಿರುವ ಹಳ್ಳಿಗಳಲ್ಲಿ ಕೊಳವೆ ಬಾವಿ, ತೆರೆದ ಬಾವಿಗಳನ್ನು ದುರಸ್ತಿಗೊಳಿಸಲು ಸೂಚಿಸಿದ್ದು. ಕುಡಿಯುವ ನೀರಿನ ತೀವ್ರ ಕೊರತೆ ಎದುರಾದ ಕಡೆ ಖರೀದಿಸಿ ಪೂರೈಸಲು ನಿರ್ಧರಿಸಲಾಗಿದೆ.
ಮಾನಪ್ಪ ಕಟ್ಟಿಮನಿ ತಾಪಂ ಇಒ ಆಳಂದ.
ಸಮಸ್ಯೆ ನಿವಾರಣೆಗೆ ಸಿದ್ಧತೆ:
ತಾಲೂಕಾ ಮಟ್ಟದಲ್ಲಿ ಈ ನೀರಿನ ಬಿಕ್ಕಟ್ಟನ್ನು ಎದುರಿಸಲು ನಿಗಾ ಸಮಿತಿಗಳನ್ನು ರಚಿಸುವ ಸಮಿತಿ ಕೈಗೊಳ್ಳಲಾಗಿದ್ದು, ಸ್ಥಳೀಯ ಆಡಳಿತ, ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳ ಸಹಕಾರದಿಂದ ಈ ಸಂಕಷ್ಟವನ್ನು ಕಡಿಮೆಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ಅಣ್ಣಾರಾವ್ ಪಾಟೀಲ ತಹಸೀಲ್ದಾರರು ಆಳಂದ.
ಕ್ರಿಯಾ ಯೋಜನೆ ಸಿದ್ಧತೆ:
ಬೇಸಿಗೆ ನೀರಿನ ಸಮಸ್ಯೆ ನಿವಾರಿಸುವುದಕ್ಕಾಗಿ ಜಿಲ್ಲಾಧಿಕಾರಿಗಳು ಗುರುವಾರ ಸಭೆ ಕರೆದು ಚರ್ಚಿಸಲಿದ್ದು, ಸದ್ಯಕ್ಕೆ ಯಾವುದೇ ನೀರಿನ ಸಮಸ್ಯೆ ಇಲ್ಲ. ಸದ್ಯ 40 ಕಾಮಗಾರಿ ಕೈಗೊಳ್ಳಬೇಕಿದ್ದು ಇದಕ್ಕೆ 79 ಲಕ್ಷ ರೂಪಾಯಿ ಅನುದಾನ ಬೇಡಿಕೆಯಿದೆ. ಇದರಲ್ಲಿ ಕೊಳವೆ ಬಾವಿ ತೊಡಿಸುವುದು. ಪೈಪಲೈನ್ ಕಾಮಗಾರಿ, ಇದ್ದ ಕೊಳವೆಬಾವಿ ದುರಸ್ಥಿ ಹಾಗೂ ಮೊಟಾರ ಅಳವಡಿಕೆ ಹೀಗೆ ಕ್ರಿಯಾಯೋಜನೆ ಸಿದ್ಧ ಪಡಿಸಿ ಪ್ರಸ್ತಾವನೆ ಕಳುಸಿಕೊಡಬೇಕಾಗಿದೆ.
ವಿಜಯಕುಮಾರ ಎಇಇ ಜೆಜೆಎಂ ಆಳಂದ