ಆಳಂದ: ಯಳಸಂಗಿ ಎಸ್ಸೆಎಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಸೈನ್ಸ್ ಉತ್ತರ ಪತ್ರಿಕೆಗಳನ್ನು ಸಿಬ್ಬಂದಿಗಳು ಪ್ಯಾಕ್ ಮತ್ತು ಸೀಲ್ ಮಾಡಿ ರವಾನಿಸಿದರು.
ಆಳಂದ: ಆಳಂದ್ ತಾಲೂಕಿನ ಎಸ್‍ಎಸ್‍ಎಲ್‍ಸಿ ವಿಜ್ಞಾನ ವಿಷಯದ ಪರೀಕ್ಷೆ 2025ರ ಏಪ್ರಿಲ್ 2ರಂದು ಸ್ಥಾಪಿತ ಒಟ್ಟು 16 ಕೇಂದ್ರಗಳಲ್ಲಿ ಪರೀಕ್ಷೆ ಶಾಂತಿಯುತವಾಗಿ ನಡೆಯಿತು.
ಈ ಪರೀಕ್ಷೆಗೆ ಒಟ್ಟು 5,582 ವಿದ್ಯಾರ್ಥಿಗಳು ನೋಂದಾಯಿಸಿದ್ದರಲ್ಲಿ 5,160 ವಿದ್ಯಾರ್ಥಿಗಳು ಹಾಜರಾಗಿದ್ದು, 422 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಒಟ್ಟಾರೆ ಹಾಜರಾತಿ ಶೇ. 92.44 ಆಗಿದ್ದು, ವಿದ್ಯಾರ್ಥಿಗಳು ಪರೀಕ್ಷೆಗೆ ಉತ್ತಮ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುವ ಮೂಲಕ ಶಿಸ್ತಿನಿಂದ ಪಾಲ್ಗೊಂಡಿದ್ದಾರೆ.
ಕೇಂದ್ರಗಳಲ್ಲಿ ವೆಬ್‍ಕಾಸ್ಟಿಂಗ್ ಸಿಸಿಕ್ಯಾಮಿರಾ ಅಳವಡಿಕೆ ಕೇಂದ್ರಗಳ ಹೊರಗೆ ಪೊಲೀಸ್ ಕಾವಲು ಮತ್ತು ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿ ಸುವ್ಯವಸ್ಥೆಗೆ ಶ್ರಮಿಸಿದ್ದಾರೆ.
ತಾಲೂಕಿನ ಕರ್ನಾಟಕ ಪಬ್ಲಿಕ್ ಶಾಲೆ, ಮದನಹಿಪ್ಪರಗಾ 416 ವಿದ್ಯಾರ್ಥಿಗಳಲ್ಲಿ 358 ಹಾಜರಾಗಿ, (58 ಗೈರು),. ಸರ್ಕಾರಿ ಹೈಸ್ಕೂಲ್, ಸರಸಂಬಾ 491 ವಿದ್ಯಾರ್ಥಿಗಳಲ್ಲಿ 464 ಹಾಜರಾಗಿ, (27 ಗೈರು), ಗಲ್ರ್ಸ್ ಹೈಯರ್ ಪ್ರೈಮರಿ ಶಾಲೆ, ವಿ.ಕೆ.ಸಾಳಗರ್ 319 ವಿದ್ಯಾರ್ಥಿಗಳಲ್ಲಿ 308 ಹಾಜರಾಗಿ, (11 ಗೈರು), ಮಹಾತ್ಮಾ ಗಾಂಧಿ ಶಾಲೆ, ಅಹಮದ್ ನಗರ 320 ವಿದ್ಯಾರ್ಥಿಗಳಲ್ಲಿ 304 ಹಾಜರಾಗಿ, (16ಗೈರು), ಸರ್ಕಾರಿ ಪಿ.ಯು. ಕಾಲೇಜು, ಖಾಜೂರಿ 309 ವಿದ್ಯಾರ್ಥಿಗಳಲ್ಲಿ 289 ಹಾಜರಾಗಿ, (20ಗೈರು) ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಕೊರಾಳಿ 273 ವಿದ್ಯಾರ್ಥಿಗಳಲ್ಲಿ 260 ಹಾಜರಾಗಿ, (13ಗೈರು), ಸರ್ಕಾರಿ ಪಿ.ಯು. ಕಾಲೇಜು, ಯಳಸಂಗಿ 349 ವಿದ್ಯಾರ್ಥಿಗಳಲ್ಲಿ 312 ಹಾಜರಾಗಿ, (37ಗೈರು). ಆದರ್ಶ ವಿದ್ಯಾಲಯ (ಆರ್.ಎಂ.ಎಸ್.ಎ), ಆಳಂದ್ 353 ವಿದ್ಯಾರ್ಥಿಗಳಲ್ಲಿ 334 ಹಾಜರಾಗಿ, (19ಗೈರು), ಆಳಂದನಲ್ಲಿನ ಅಲ್-ಫಾರೂಕ್ ಹೈಸ್ಕೂಲ್ (ತಹಶೀಲ್ದಾರ್ ಕಚೇರಿ ಹಿಂದಿನ ರಸ್ತೆ, ತಡಕಲ್) 262 ವಿದ್ಯಾರ್ಥಿಗಳಲ್ಲಿ 247 ಹಾಜರಾಗಿ, (15 ಗೈರು), ಸರ್ಕಾರಿ ಪಿಯು ಕಾಲೇಜು (ಬಾಲಕರಿಗಾಗಿ, ಆಳಂದ್) 433 ವಿದ್ಯಾರ್ಥಿಗಳಲ್ಲಿ 423 ಹಾಜರಾಗಿ, (10ಗೈರು), ಮೋರಾಜಿ ದೇಸಾಯಿ ವಸತಿ ಶಾಲೆ (ತಡಕಲ್) 381 ವಿದ್ಯಾರ್ಥಿಗಳಲ್ಲಿ 337 ಹಾಜರಾಗಿ, (44 ಗೈರು), ಸರ್ಕಾರಿ ಹೈಸ್ಕೂಲ್ (ಕಮಲಾನಗರ), 218 ವಿದ್ಯಾರ್ಥಿಗಳಲ್ಲಿ 206 ಹಾಜರಾಗಿ, (12ಗೈರು), ಬಸವೇಶ್ವರ ಹೈಸ್ಕೂಲ್ (ಆಳಂದ್) 271 ವಿದ್ಯಾರ್ಥಿಗಳಲ್ಲಿ 260 ಹಾಜರಾಗಿ, (11ಗೈರು), ಸರ್ಕಾರಿ ಪಿಯು ಕಾಲೇಜು (ನರೋಣ) 387 ವಿದ್ಯಾರ್ಥಿಗಳಲ್ಲಿ 306 ಹಾಜರಾಗಿ, (81ಗೈರು), ಮೌಂಟ್ ಕಾರ್ಮೆಲ್ ಪ್ರೈಮರಿ ಶಾಲೆ (ಕಡಗಂಚಿ) 441 ವಿದ್ಯಾರ್ಥಿಗಳಲ್ಲಿ 410 ಹಾಜರಾಗಿ, (31ಗೈರು), ಸರ್ಕಾರಿ ಜೂನಿಯರ್ ಕಾಲೇಜು (ನಿಂಬರ್ಗಾ) 359 ವಿದ್ಯಾರ್ಥಿಗಳಲ್ಲಿ 342 ಹಾಜರಾಗಿ, 17ಗೈರು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ಒಟ್ಟು ಈ 16 ಕೇಂದ್ರಗಳಲ್ಲಿ ನರೋಣಾ ಪರೀಕ್ಷಾ ಕೇಂದ್ರಕ್ಕೆ ಅತಿ ಹೆಚ್ಚು 81 ವಿದ್ಯಾರ್ಥಿಗಳು ಗೈರಾಗಿದ್ದಾರೆ.