Shubhashaya News

ಜಿಡಗಾ ಜಿ.ಪಂ ಮುಂದುವರಿಕೆಗೆ ಸಂಪೂರ್ಣ ಸಹಕಾರ: ಹರ್ಷಾನಂದ ಎಸ್ ಗುತ್ತೇದಾರ

ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ ಅವರು ಜಿಡಗಾ ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಸ್ವಾಮೀಜಿಯವರನ್ನು ಭೇಟಿಯಾಗಿ ಜಿಡಗಾ ಜಿ.ಪಂ ಕ್ಷೇತ್ರದ ಕುರಿತು ಚರ್ಚಿಸಿದರು.

ಆಳಂದ ತಾಲೂಕಿನ ಜಿಡಗಾ ಜಿಲ್ಲಾ ಪಂಚಾಯತ ಕ್ಷೇತ್ರವನ್ನು ಈ ಮೊದಲಿನಂತೆ ಮುಂದುವರೆಸಿಕೊಂಡು ಹೋಗಲು ಎಲ್ಲ ರೀತಿಯ ಸಹಾಯ, ಸಹಕಾರ ನೀಡಲಾಗುವುದು ಎಂದು ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ ಹೇಳಿದರು.
ಬುಧುವಾರ ಶ್ರೀಕ್ಷೇತ್ರ ಜಿಡಗಾ ಮಠಕ್ಕೆ ಭೇಟಿ ನೀಡಿ ಮಠದ ಪೀಠಾಧಿಪತಿಗಳಾದ ಡಾ. ಮುರುಘೆಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದ ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ ಅವರು, ಯಾವುದೇ ಕಾರಣಕ್ಕೂ ಜಿಡಗಾ ಜಿ.ಪಂ ಕ್ಷೇತ್ರ ಕೈ ಬಿಟ್ಟು ಹೋಗಲು ಬಿಡುವುದಿಲ್ಲ. ರಾಜ್ಯ ಸರ್ಕಾರಕ್ಕೆ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಜಿಡಗಾ ಜಿ.ಪಂ ಕ್ಷೇತ್ರದ ಅವಶ್ಯಕತೆ, ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಡುತ್ತೇವೆ ಎಂದು ಹೇಳಿದರು.
ತಹಸೀಲದಾರ ಯಲ್ಲಪ್ಪ ಸುಭೇದಾರ, ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ, ಮುಖಂಡ ರಾಜಶೇಖರ ಮಲಶೆಟ್ಟಿ, ಚಂದ್ರಕಾಂತ ಘೋಡಕೆ ಸೇರಿದಂತೆ ಇತರರು ಇದ್ದರು.

ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ ಅವರು ಜಿಡಗಾ ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಸ್ವಾಮೀಜಿಯವರನ್ನು ಸನ್ಮಾನಿಸಿದರು. ಆನಂದರಾವ ಪಾಟೀಲ ಕೊರಳ್ಳಿ, ರಾಜಶೇಖರ ಮಲಶೆಟ್ಟಿ, ಚಂದ್ರಕಾಂತ ಘೋಡಕೆ ಇದ್ದರು.

ಜಿಡಗಾ ಶ್ರೀ ಸಿದ್ದರಾಮೇಶ್ವರರ ಗದ್ದುಗೆಗೆ ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ, ತಹಸೀಲದಾರ ಯಲ್ಲಪ್ಪ ಸುಬೇದಾರ ಭೇಟಿ ನೀಡಿ ಆಶೀರ್ವಾದ ಪಡೆದರು.

Comments are closed.

Don`t copy text!