Shubhashaya News

ಜೀವ ಉಳಿಸಿದ ಸರ್ಕಾರಿ ವೈದ್ಯರಿಗೆ ಕುಟುಂಬದ ಕೃತಜ್ಞತೆ ಸಲ್ಲಿಕೆ

ಹಾವು ಕಡಿದು ಸಾವು ಬದುಕಿನಲ್ಲಿದ್ದ ಮಹಿಳೆ

ಆಳಂದ: ಪಟ್ಟಣದ ಬಾಳನಕೇರಿಯ ಲಕ್ಷ್ಮೀ ಜಮಖಂಡಿ ತಮಗೆ ಹಾವು ಕಡಿದಾಗ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಜೀವ ಉಳಿಸಿದ ಡಾ. ಉಮಾಕಾಂತ ರಾಜಗಿರಿ ಅವರ ತಂಡಕ್ಕೆ ಭೇಟಿ ಮಾಡಿ ಶುಕ್ರವಾರ ಕೃತಜ್ಞತೆ ಸಲ್ಲಿಸಿ ಮಾನವಿತೆ ಮೆರೆದರು.

ಆಳಂದ: ನಾಗರ ಪಂಚಮಿಯ ಹಬ್ಬದಂದು ಪಟ್ಟಣದ ಬಾಳನಕೇರಿ ನಿವಾಸಿ ಮಹಿಳೆಯೊಬ್ಬರಿಗೆ ಹಾವು ಕಡಿದ ಮೈಯಲ್ಲಾ ವಿಷವೇರಿ ಸಾವು ಬದುಕಿನೊಂದಿಗೆ ಹೋರಾಡುತ್ತ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು ತಕ್ಷಣಕ್ಕೆ ವೈದ್ಯರು ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಿದ ಫಲದಿಂದಾಗಿ ಬದುಕುಳಿದು ಆರೋಗ್ಯ ಸುಧಾರಿಸಿದ ಮೇಲೆ ಆಸ್ಪತ್ರೆಗೆ ಕುಟುಂಬಸ್ಥರೊಂದಿಗೆ ಬಂದು ವೈದ್ಯರನ್ನು ಹರ್ಷಿಸಿ ಕೃತಜ್ಷೆ ಸಲ್ಲಿಸಿದ ಮಾನವೀಯ ಮೆರೆದ ಪ್ರಸಂಗ ನಡೆದಿದೆ.
ಪಟ್ಟಣದ ಬಾಳಕೇರಿ ನಿವಾಸಿ ಲಕ್ಷ್ಮೀ ಚಂದ್ರಕಾಂತ ಜಮಖಂಡಿ ಅವರಿಗೆ ಕಳೆದ ನಾಗರ ಪಂಚಮಿ ಹಬ್ಬದಂದು ಹಾವು ಕಚಿದ ಪರಿಣಾಮ ತಕ್ಷಣಕ್ಕೆ ಕುಟುಂಬಸ್ಥರು ಚಿಕಿತ್ಸೆಗಾಗಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಈ ವೇಳೆ ಹಾವು ಕಡಿತಕ್ಕೊಳಗಾದ ಲಕ್ಷ್ಮೀ ಅವರ ಹೃದಯ ಸ್ತಂಬನಗೊಂಡು (ನಿಂತು), ಜೀವನ್ಮರಣದೊಂದಿಗೆ ಹೋರಾಡುತ್ತಿದ್ದರು. ಇದನ್ನು ಗಮನಿಸಿದ ಆಸ್ಪತ್ರೆಯಲ್ಲಿನ ಮುಖ್ಯ ಆಡಳಿತ ವೈದ್ಯಾಧಿಕಾರಿಯಾದ ಡಾ. ಉಮಾಕಾಂತ ರಾಜಗಿರಿ ಅವರ ನೇತೃತ್ವದ ವೈದ್ಯರ ತಂಡವು ತಕ್ಷಣಕ್ಕೆ ಕಾರ್ಯಪ್ರವರ್ತತತೆ ತುರ್ತು ಅಗತ್ಯವಾಗಿ ಚಿಕಿಸೆ ನೀಡಿದ ಕಾರಣ ಚಿಕಿತ್ಸೆ ಫಲಿಸಿ ಲಕ್ಷ್ಮೀ ಚೇತರಿಸಿಕೊಂಡಳು. ಬಳಿಕ ಸೂಕ್ತ ರೀತಿಯಲ್ಲಿ ಅಗತ್ಯ ಚಿಕಿತ್ಸೆ ನೀಡಿ ತಕ್ಷಣಕ್ಕೆ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿಕೊಟ್ಟದ್ದರು. ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟ ಪರಿಣಾಮ 12 ದಿನಗಳ ಕಾಲ ಜಿಲ್ಲಾಸ್ಪತ್ರೆಯಲ್ಲೂ ಹೆಚ್ಚಿನ ಚಿಕಿತ್ಸೆ ದೊರೆತು ಬದುಕುಳಿದು ಫಲವಾಗಿ ಮನೆಯಲ್ಲಿ ಕೆಲವು ದಿನ ವಿಶ್ರಾಂತಿ ಪಡೆದಿದ್ದು, ಈಗ ಶುಕ್ರವಾರ ಸ್ಥಳೀಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಲಕ್ಷ್ಮೀ ಜಮಖಂಡಿ ಅವರು ತಮ್ಮ ಕುಟುಂಬಸ್ಥರೊಂದಿಗೆ ಮರಳಿ ಬಂದು ವೈದ್ಯರ ಸ್ಪಂದನೆಗೆ ಹರ್ಷವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದ ಪ್ರಸಂಗ ನಡೆದಿದೆ.
“ಈ ವೈದ್ಯರು ನನಗೆ ಹೊಸ ಜೀವ ನೀಡಿದರು. ನಾನು ಅವರೆಲ್ಲರಿಗೂ ಎಂದಿಗೂ ಋಣಿಯಾಗಿದ್ದೇನೆ” ಎಂದರು. ಕುಟುಂಬಸ್ಥರು ಕೂಡ ಹೇಳಿದರು, “ವೈದ್ಯರ ತಕ್ಷಣದ ನಿರ್ಧಾರ ಮತ್ತು ತಂಡದ ಕೆಲಸದಿಂದಲೇ ಲಕ್ಷ್ಮಿ ಬದುಕುಳಿದಿದ್ದಾರೆ. ನಾವು ಸದಾ ಅವರ ಋಣಿಯಾಗಿದ್ದೇವೆ ಎಂದು ಹೇಳಿದರು.
ಚಿಕಿತ್ಸೆಗೆ ಶ್ರಮಿಸಿದ ಡಾ. ಉಮಾಕಾಂತ ರಾಜಗಿರಿ, ಡಾ. ಯುನೂಸ್ ಸಲಿಂ (ಅನಸ್ಥೇಷಿಯಾ), ಡಾ. ಆಫಿಯಾ (ಜನರಲ್ ಮೆಡಿಸಿನ್), ಡಾ. ಅಮರ್ (ಎಲುಬು ತಜ್ಞ) ಮತ್ತು ಡಾ. ಗಿರೀಶ್ ಸೇರಿ ಸಿಬ್ಬಂದಿಗಳು ಇದ್ದರು.
ಹಾವು ಕಚಿದರೆ ತಕ್ಷಣ ಹೀಗೆ ಮಾಡಿ:
ಸಾರ್ವಜನಿಕ ಆಸ್ಪತ್ರೆಯ ಆಡಳಿತ ಮುಖ್ಯ ವೈದ್ಯಾಧಿಕಾರಿ ಡಾ. ಉಮಾಕಾಂತ ರಾಜಗಿರಿ ಅವರು, ಜನರಿಗೆ ಹಾವು ಕಡಿತದ ಸಂದರ್ಭದಲ್ಲಿ ತಕ್ಷಣದ ಕ್ರಮ ಅನುಸರಿಸಬೇಕು ಎಂದು ಸಲಹೆ ನೀಡಿದರು.
ಹಾವು ಕಚ್ಚಿದ ತಕ್ಷಣ ಸಮೀಪದ ಆಸ್ಪತ್ರೆಗೆ ತೆರಳಿ, ವಿಷವಿರುವ ಹಾವಿನ ಕಡಿತವಾದರೆ ಆಂಟಿ-ವೆನಮ್ ಚಿಕಿತ್ಸೆ ಪಡೆಯಿರಿ. ಕಡಿದ ಭಾಗವನ್ನು ಚಲಿಸದಂತೆ ಇರಿಸಿ, ಇದರಿಂದ ವಿಷವು ದೇಹದಲ್ಲಿ ವೇಗವಾಗಿ ಹರಡದಿರಲಿ. ಸಾಧ್ಯವಾದರೆ, ಸಾಬೂನು ಮತ್ತು ನೀರಿನಿಂದ ಕಡಿದ ಜಾಗವನ್ನು ಶುದ್ಧಗೊಳಿಸಿ. ರೋಗಿಯನ್ನು ಶಾಂತವಾಗಿರಿಸಿ, ಆತಂಕವು ವಿಷದ ಹರಡುವಿಕೆಯನ್ನು ತೀವ್ರಗೊಳಿಸಬಹುದು ತಕ್ಷಣಕ್ಕೆ ಆಸ್ಪತ್ರೆಯ ಚಿಕಿತ್ಸೆಗೊಳಗಾಬೇಕು ಎಂದು ಡಾ. ಉಮಾಕಾಂತ ರಜಗಿರಿ ಅವರು ಹೇಳಿದರು.
ಹಾವು ಕಡಿದರೆ ಹೀಗೆ ಮಾಡಬೇಡಿ:
ಕಡಿದ ಜಾಗವನ್ನು ಕತ್ತರಿಸುವುದು ಅಥವಾ ಚೂರಿ ಬಳಸುವುದು ತಪ್ಪು, ಇದು ಸೋಂಕಿಗೆ ಕಾರಣವಾಗಬಹುದು. ಬಾಯಿಯಿಂದ ವಿಷವನ್ನು ಹೀರಲು ಯತ್ನಿಸುವುದು ಅಪಾಯಕಾರಿ ಮತ್ತು ಫಲಕಾರಿಯಲ್ಲ. ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧಿಗಳನ್ನು ರೋಗಿಗೆ ನೀಡಬಾರದು. ಕಡಿತದ ಜಾಗಕ್ಕೆ ಬಿಗಿಯಾದ ಬ್ಯಾಂಡೇಜ್ ಹಾಕಬೇಡಿ: ಇದು ರಕ್ತದ ಹರಿವನ್ನು ನಿಬರ್ಂಧಿಸಿ ತೊಡಕುಗಳನ್ನು ಉಂಟುಮಾಡಬಹುದು. ತಕ್ಷಣವೇ ಆಸ್ಪತ್ರೆಗೆ ತೆರಳಿ ವೈದ್ಯಕೀಯ ಸಹಾಯ ಪಡೆಯುವಂತೆ ಅವರು ಸಲಹೆ ನೀಡಿದರು.

Comments are closed.

Don`t copy text!