ಆಳಂದ ಮತಕ್ಷೇತ್ರದಲ್ಲಿ ಚುನಾವಣೆಗೂ ಮೂರು ವರ್ಷವಿರುವಾಗಲೇ ಮುಂಚೆ ಪಕ್ಷಾಂತರ ಜೋರಾಗಿ ಜರುಗುತ್ತಿದೆ.
ಆಳಂದ ಪಟ್ಟಣದ ಭೋವಿ ಸಮಾಜದ ಹಲವರು ಮಾಜಿ ಶಾಸಕ ಸುಭಾಷ ಆರ್ ಗುತ್ತೇದಾರ ಸಮ್ಮುಖದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರನ್ನು ಬಿಜೆಪಿ ಪಕ್ಷದ ಶಾಲು ಬಾವುಟ ನೀಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.
ಆಳಂದ ಮತಕ್ಷೇತ್ರದಲ್ಲಿ ಜನಸಾಮಾನ್ಯರ ಪಾಡು ಹೇಳತೀರದಾಗಿದೆ. ಎಲ್ಲ ರಂಗದಲ್ಲಿ ಭೃಷ್ಟಾಚಾರ ತಾಂಡವಾಡುತ್ತಿದೆ. ಶಾಸಕರು ಕ್ಷೇತ್ರದಲ್ಲಿ ಇದ್ದು ಸಮಸ್ಯೆ ಬಗೆ ಹರಿಸುತ್ತಿಲ್ಲ ಇದರಿಂದ ಜನಸಾಮಾನ್ಯರು ರೋಸಿ ಹೋಗಿದ್ದಾರೆ ಹೀಗಾಗಿ ಜನ ಬದಲಾವಣೆ ಬಯಸಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಿದರು.
ಭೋವಿ ಸಮಾಜದ ಯಲ್ಲಪ್ಪ ದಂಡಗುಲೆ, ನಾಗನಾಥ ದಂಡಗುಲೆ, ಶ್ಯಾಮರಾವ ದಂಡಗುಲೆ, ಯಲ್ಲಪ್ಪ ದಂಡಗುಲೆ, ಈರಣ್ಣ ನಿಂಬಾಳಕರ, ಯಲ್ಲಪ್ಪ ಪಾತ್ರೋಟ, ಹುಲಗಪ್ಪ ಅಲಕುಂಟೆ, ತಿಮ್ಮಣ್ಣ ದಂಡಗುಲೆ, ಹಣಮಂತ ಅಲಕುಂಟೆ, ರಾಮಣ್ಣಾ ಅಲಕುಂಟೆ, ಸಾಗರ ಬನಪಟ್ಟೆ, ಸಂತೋಷ ದಂಡಗುಲೆ, ಸಿದ್ದು ಪಾತ್ರೋಟ, ಅವಿನಾಶ ಬನಪಟ್ಟೆ, ರಾಜು ಮಂಜುಳೆ, ವೆಂಕಟೇಶ ಕೆರೆಮನೆ, ಭರಮಣ್ಣ ದಂಡಗುಲೆ, ಬಸವರಾಜ ಪಾತ್ರೋಟ, ತಿರುಪತಿ ದಂಡಗುಲೆ, ಕೃಷ್ಣಾ ಕುಸಾಳಕರ, ಯಲ್ಲಪ್ಪ ದಂಡಗುಲೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಪುರಸಭೆ ಸದಸ್ಯ ಶಿವಪುತ್ರ ನಡಗೇರಿ, ಮುಖಂಡರಾದ ಬಾಬಾಸಾಹೇಬ ಪಾಟೀಲ, ಮಾಣಿಕ ಜಾಧವ, ಮಹಾಂತೇಶ ಪೂಜಾರಿ, ಪ್ರಕಾಶ ತೋಳೆ, ಅಣ್ಣಪ್ಪ ದಂಡಗುಲೆ, ಕನಕಪ್ಪ ಬಂಡಿವಡ್ಡರ, ಭರಮವ್ವಾ, ಅಶ್ಪಾಕ್ ಶೇಖ್, ಇಸ್ಮಾಯಿಲ್ ಜಮಾದಾರ ಸೇರಿದಂತೆ ಇತರರು ಇದ್ದರು.
Comments are closed.