Shubhashaya News

ಸತತ ಮಳೆಯಿಂದ ಹಾನಿಯಾದ ಬೆಳೆ ಪರಿಹಾರಕ್ಕೆ ಕಿಸಾನ್‍ಸಭಾ ಒತ್ತಾಯ

ಆಳಂದ: ಪ್ರಸಕ್ತ ಮಳೆಯಿಂದಾದ ಬೆಳೆ ಹಾನಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನಸಭಾ ಮೌಲಾ ಮುಲ್ಲಾ ನೇತೃತ್ವದಲ್ಲಿ ತಹಸೀಲ್ದಾರರಿಗೆ ರೈತರು ಮನವಿ ಸಲ್ಲಿಸಿದರು.

ಆಳಂದ: ತಾಲೂಕಿನಲ್ಲಿ ಜುಲೈ 15ರಿಂದ ಅಗಷ್ಟ್ 20ರವರೆಗೆ ಸುರಿದ ನಿರಂತರ ಮಳೆಯಿಂದ ಹಾನಿಯಾದ ಬೆಳೆಗೆ ಸರ್ಕಾರದ ಪರಿಹಾರ ಹಾಗೂ ವಿಮೆ ಕೈಗೊಂಡ ರೈತರಿಗೆ ವಿಮೆ ಮೊತ್ತವನ್ನು ತಕ್ಷಣವೇ ನೀಡಬೇಕು ಎಂದು ಅಖಿಲ ಭಾರತ ಕಿಸಾನಸಭಾ ತಾಲೂಕು ಘಟಕವು ಲಿಖಿತ ಮನವಿಯ ಮೂಲಕ ತಾಲೂಕು ಆಡಳಿತವನ್ನು ಒತ್ತಾಯಿಸಿದೆ.
ಈ ಕುರಿತು ಮನವಿಯನ್ನು ಪಟ್ಟಣದ ತಹಸೀಲ್ದಾರ ಕಚೇರಿಗೆ ತೆರಳಿ ತಹಸೀಲ್ದಾರಿಗೆ ಮತ್ತು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಿಗೆ ತೆರಳಿ ಕಿಸಾನಸಭಾ ರಾಜ್ಯ sಸಮಿತಿಯ ಮೌಲಾ ಮುಲ್ಲಾ ಅವರ ನೇತೃತ್ವದಲ್ಲಿ ರೈತರು ಪ್ರತ್ಯೇಕವಾಗಿ ಬೇಡಿಕೆಯ ಮನವಿ ಸಲ್ಲಿಸಿ ಪರಿಹಾರಕ್ಕಾಗಿ ಆಗ್ರಹಿಸಿದರು.
ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಬೆಳೆಗಳು ಹಾನಿಗೊಳಗಾಗಿವೆ. ವಿಶೇಷವಾಗಿ ಜುಲೈ 15 ರಿಂದ ಆಗಸ್ಟ್ 20ರ ಅವಧಿಯಲ್ಲಿ ಸುರಿದ ಮಳೆಯಿಂದಾಗಿ ತೊಂದರೆ ಉಂಟಾಗಿದೆ. ಹಾಲು ಉತ್ಪಾದನೆ ಹಾಗೂ ದಿನಗೂಲಿ ಕಾರ್ಯಗಳಲ್ಲಿ ವ್ಯತ್ಯಯ ಉಂಟಾಗಿದ್ದು, ರೈತರ ಬದುಕು ಸಂಕಷ್ಟಕ್ಕೆ ತುತ್ತಾಗಿದೆ. ಬೆಳೆಹಾನಿಯ ಸಮಗ್ರ ಸರ್ವೇ ನಡೆಸಿ ಪ್ರತಿ ಎಕರಿಗೆ 25 ಸಾವಿರ ರೂಪಾಯಿ ಪರಿಹಾರ ಒದಗಿಸುವಂತೆ ಅವರು ಒತ್ತಾಯಿಸಿದ್ದಾರೆ.
ಬೆಳೆ ವಿಮೆ ಕೈಗೊಂಡ ರೈತರು ಬೆಳೆ ಹಾಳಾದ ಕುರಿತು ಕಂಪನಿಯ ಸಿಬ್ಬಂದಿಗಳಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಭೇಟಿಯಾಗಿ ಸಮಸ್ಯೆ ತೋಡಿಕೊಂಡರೆ ಬೆಳೆ ಹಾಳಾದವರು ಅರ್ಜಿ ಕೊಡಿ ಎನ್ನುತ್ತಿದ್ದಾರೆ. ಎಲ್ಲಾ ರೈತರಿಗೆ ತಮ್ಮ ಕೆಲಸ ಬಿಟ್ಟು ಅರ್ಜಿಕೊಡಲು ಕಚೇರಿಗಳಿಗೆ ಅಲೆದಾಟ ಮಾಡಿಸುವುದು ಸರಿಯಲ್ಲ. ಪ್ರತಿ ಗ್ರಾಪಂಮಟ್ಟದಲ್ಲಿ ವಿಮಾ ಕಂಪನಿಯ ಸಿಬ್ಬಂದಿಗಳಿಂದ ಬೆಳೆ ಹಾನಿಯ ಅರ್ಜಿಗಳನ್ನು ಸ್ವೀಕರಿಸಿ ತಕ್ಷಣದ ಕ್ರಮ ಕೈಗೊಳ್ಳಬೇಕು. ಹೆಚ್ಚುವರಿವಾಗಿ, ಅಧಿಕಾರಿಗಳು ತಕ್ಷಣ ಸರ್ವೇ ಮಾಡಿ ಸರ್ಕಾರದ ಮಟ್ಟದಲ್ಲಿ ಪರಿಹಾರ ಘೋಷಿಸಬೇಕೆಂದು ಎಂದು ಮೌಲಾ ಮುಲ್ಲಾ ಅವರು ಒತ್ತಾಯಿಸಿದರು.
ಕಿಸಾನಸಭಾ ಉಪಾಧ್ಯಕ್ಷ ಮಹಾದೇವ ಸೂರವಾಸೆ, ನ್ಯಾಯವಾದಿ ಪಂಡಿತ ಸಲಗರ, ಆರೀಫ್ ಅಲಿ ಮತ್ತಿತರು ಉಪಸ್ಥಿತರಿದ್ದರು.

Comments are closed.

Don`t copy text!