ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸರಸಂಬಾ ಗ್ರಾಮದ ಬಿಜೆಪಿ ಮುಖಂಡರಾಗಿದ್ದ ಮಹಾಂತಪ್ಪ ಸಿದ್ದಾರಾಮಪ್ಪ ಆಲೂರೆ (45) ಅವರನ್ನು ಗುರುವಾರ ಬೆಳಿಗ್ಗೆ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸರಸಂಬಾ ಗ್ರಾಮದ ಧನಲಕ್ಷ್ಮೀ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿದ್ದರು. ಈ ಹಿಂದೆ ಅವರು ಸತತ ಮೂರು ಬಾರಿ ಗ್ರಾ.ಪಂ ಸದಸ್ಯರಾಗಿ ಆಯ್ಕೆಯಾಗಿದ್ದರು.
ಮಹಾಂತಪ್ಪ ಬೆಳಿಗ್ಗೆ ಹೊಲದಲ್ಲಿ ಕಟ್ಟಿದ್ದ ಆಕಳಿನ ಹಾಲು ತೆಗೆದುಕೊಂಡು ಮನೆಯತ್ತ ಬರುತ್ತಿದ್ದರು. ಗ್ರಾಮದ ಮುಖ್ಯ ರಸ್ತೆಯ ಜೆಸ್ಕಾಂ ಕಚೇರಿಯ ಸಮೀಪ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅವರ ಬೈಕಗೆ ಕಾರಿನಿಂದ ಡಿಕ್ಕಿ ಹೊಡೆದು ಅವರನ್ನು ಕೆಳಗೆ ಬಿಳಿಸಿದ್ದಾರೆ ನಂತರ ಮಾರಕಾಸ್ತ್ರಗಳಿಂದ ಭಯಾನಕವಾಗಿ ಹಲ್ಲೆ ಮಾಡಿದ್ದಾರೆ ದೇಹದ ತುಂಬೆಲ್ಲ ಮನಸ್ಸೋ ಇಚ್ಚೇ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಾಂತಪ್ಪ ಅವರನ್ನು ಸೋಲಾಪೂರ ಆಸ್ಪತ್ರೆಗೆ ದಾಖಲಾಯಿಸಿತಾದರೂ ಚಿಕಿತ್ಸೆಗೆ ಸ್ಮಂದಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗೆ ರಾಜಕೀಯ ಕಾರಣವೋ? ಆರ್ಥಿಕ ಕಾರಣವೋ? ಅಥವಾ ಮತ್ತಿನ್ಯಾವ ಕಾರಣವೋ ತಿಳಿದು ಬಂದಿಲ್ಲ. ಮಾದನಹಿಪ್ಪರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು . ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
Comments are closed.