Shubhashaya News

BREAKING: ’44 ನಿಗಮ-ಮಂಡಳಿ’ಗಳಿಗೆ ‘ಅಧ್ಯಕ್ಷ, ಉಪಾಧ್ಯಕ್ಷ’ರನ್ನು ನೇಮಿಸಿ ‘ಸಿಎಂ ಸಿದ್ಧರಾಮಯ್ಯ’ ಆದೇಶ: ಇಲ್ಲಿದೆ ಲೀಸ್ಟ್

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೊನೆಗೂ ಕಾರ್ಯಕರ್ತರ ಒತ್ತಡಕ್ಕೆ ಮಣಿದು, 44 ನಿಗಮ ಮಂಡಳಿಯ ಸ್ಥಾನಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ಟಿಪ್ಪಣಿ ಹೊರಡಿಸಿರುವಂತ ಅವರು, ವಿವಿಧ ನಿಗಮ/ಮಂಡಳಿ/ಪ್ರಾಧಿಕಾರಗಳ ಅಧ್ಯಕ್ಷರು/ಉಪಾಧ್ಯಕ್ಷರ ನೇಮಕಾತಿ ಆದೇಶಗಳನ್ನು ಸಂಬಂಧಪಟ್ಟ ಆಡಳಿತ ಇಲಾಖೆಗಳು ಹೊರಡಿಸಬೇಕಾಗಿರುತ್ತದೆ. ಅದರಂತೆ, ಸದರಿಯವರು ನೇಮಕಗೊಂಡ ದಿನಾಂಕದಿಂದ ಮುಂದಿನ ಎರಡು ವರ್ಷಗಳ ಅವಧಿಯವರೆಗೆ ಕಾರ್ಯನಿರ್ವಹಿಸುವಂತೆ ತಕ್ಷಣದಿಂದ ಜಾರಿಗೆ ಬರುವಂತೆ ಸದರಿ ನೇಮಕಾತಿ ಆದೇಶಗಳನ್ನು ಹೊರಡಿಸಲು ಸಂಬಂಧಪಟ್ಟ ಆಡಳಿತ ಇಲಾಖೆಗಳಿಗೆ ಈ ಮೂಲಕ ಸೂಚಿಸಿದ್ದಾರೆ.

ಇಲ್ಲಿದೆ 44 ನಿಗಮ-ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರ ಪಟ್ಟಿ

  1. ಕಾಂತಾ ನಾಯ್ಕ್ – ಅಧ್ಯಕ್ಷರು, ಕೌಶಲ್ಯಾಭಿವೃದ್ಧಿ ನಿಗಮ
  2. ವಿನೋದ್ ಕೆ ಅಸೂಟಿ- ಉಪಾಧ್ಯಕ್ಷರು, ಕರ್ನಾಟಕ ಕ್ರೀಡಾ ಪ್ರಾಧಿಕಾರ
  3. ಬಿ.ಹೆಚ್ ಹರೀಶ್ – ಅಧ್ಯಕ್ಷರು, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ
  4. ಡಾ.ಅಂಶುಮಂತ್ – ಅಧ್ಯಕ್ಷರು, ಭದ್ರಾ ಕಾಡಾ, ಶಿವಮೊಗ್ಗ
  5. ಆಂಜನೇಯಲು ಜೆ.ಎಸ್ – ಅಧ್ಯಕ್ಷರು, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ
  6. ಡಾ.ಬಿ ಯೋಗೇಶ್ ಬಾಬು – ಅಧ್ಯಕ್ಷರು, ಕರ್ನಾಟಕ ದ್ರಾಕ್ಷಾರಸ ಮಂಡಳಿ
  7. ಮುಂಡರಗಿ ನಾಗರಾಜು- ಅಧ್ಯಕ್ಷರು, ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ
  8. ಮರೀಗೌಡ ಯಾದಗಿರಿ – ಅಧ್ಯಕ್ಷರು, ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ
  9. ದೇವೇಂದ್ರಪ್ಪ ವರ್ತೂರು- ಅಧ್ಯಕ್ಷರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ
  10. ರಾಜಶೇಖರ್ ರಾಮಸ್ವರಂ – ಅಧ್ಯಕ್ಷರು, ಕರ್ನಾಟಕ ಜೈವಿಕ ಇಂಧನ ಮಂಡಳಿ
  11. ಕೆ.ಮರೀಗೌಡ – ಅಧ್ಯಕ್ಷರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
  12. ಎಸ್ ಮನೋಹರ್ – ಅಧ್ಯಕ್ಷರು, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್
  13. ಅಯೂಬ್ ಖಾನ್ – ಅಧ್ಯಕ್ಷರು, ಬಣ್ಣ ಮತ್ತು ಅರಗು ಕಾರ್ಖಾನೆ, ಮೈಸೂರು
  14. ಮಮತಾ ಗಟ್ಟಿ – ಅಧ್ಯಕ್ಷರು, ಗೇರು ಅಭಿವೃದ್ಧಿ ನಿಗಮ
  15. ಪಲ್ಲವಿ.ಜಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ
  16. ಹೆಚ್.ಸಿ ಸುಧೀಂದ್ರ, ಅಧ್ಯಕ್ಷರು, ತೆಂಗು ಅಭಿವೃದ್ಧಿ ಮಂಡಳಿ
  17. ಡಾ.ನಾಗಲಕ್ಷ್ಮೀ ಚೌಧರಿ – ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ಆಯೋಗ
  18. ಹೆಚ್.ಎಸ್ ಸುಂದರೇಶ್ – ಅಧ್ಯಕ್ಷರು, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ
  19. ಆರ್.ಎಂ ಮಂಜುನಾಥ ಗೌಡ – ಅಧ್ಯಕ್ಷರು, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ
  20. ಜಯಣ್ಣ- ಅಧ್ಯಕ್ಷರು, ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ
  21. ಆರ್ ಸಂಪತ್ ರಾಜ್- ಅಧ್ಯಕ್ಷರು, ಡಾ.ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ
  22. ಪದ್ಮಾವತಿ- ಅಧ್ಯಕ್ಷರು, ಮಹಿಳಾ ಅಭಿವೃದ್ಧಿ ನಿಗಮ
  23. ಶ್ರೀನಿವಾಸ್, ಮಾಜಿ ವಿಧಾನಪರಿಷತ್ ಸದಸ್ಯರು – ಅಧ್ಯಕ್ಷರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
  24. ಶಾಕಿರ್ ಸನದಿ – ಅಧ್ಯಕ್ಷರು, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ
  25. ಸೋಮಣ್ಣ ಬೇವನಿಮರದ- ಅಧ್ಯಕ್ಷರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ
  26. ಮೆಹಬೂಬ್ ಪಾಷಾ- ಅಧ್ಯಕ್ಷರು, ಕಂಠೀರವ ಸ್ಟುಡಿಯೋ
  27. ಕೀರ್ತಿ ಗಣೇಶ್- ಅಧ್ಯಕ್ಷರು, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
  28. ಮಜರ್ ಖಾನ್- ಅಧ್ಯಕ್ಷರು, ದೇವರಾಜು ಅರಸು ಟ್ರಕ್ ಟರ್ಮಿನಲ್
  29. ಸವಿತಾ ರಘು- ಅಧ್ಯಕ್ಷರು, ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗ
  30. ಲಲಿತ್ ರಾಘವ್ – ಅಧ್ಯಕ್ಷರು, ಕರ್ನಾಟಕ ವಿದ್ಯುತ್ ಕಾರ್ಖಾನೆ
  31. ಜಿಎಸ್ ಮಂಜುನಾಥ್ – ಉಪಾಧ್ಯಕ್ಷರು, ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ
  32. ಮಾಲಾ ನಾರಾಯಣರಾವ್ – ಅಧ್ಯಕ್ಷರು, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ
  33. ರಿಜ್ವಾನ್, ಜಯನಗರ- ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ
  34. ಕೇಶವ ರೆಡ್ಡಿ- ಅಧ್ಯಕ್ಷರು, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ
  35. ತಾಜ್ ಪೀರ್- ಅಧ್ಯಕ್ಷರು, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ
  36. ಗಂಗಾಧರ್- ಅಧ್ಯಕ್ಷರು, ಮೈಸೂರು ಸಕ್ಕರೆ ಕಾರ್ಖಾನೆ
  37. ಅಲ್ತಾಫ್- ಅಧ್ಯಕ್ಷರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
  38. ಜಯಸಿಂಹ – ಅಧ್ಯಕ್ಷರು, ಬ್ರಾಹ್ಮಣ ಅಭಿವೃದ್ಧಿ ಮಂಡಳಿ
  39. ವಿಜಯ್ ಕೆ ಮುಳುಗುಂದ್- ಅಧ್ಯಕ್ಷರು, ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರ
  40. ಮರಿಸ್ವಾಮಿ, ಚಾಮರಾಜನಗರ- ಅಧ್ಯಕ್ಷರು, ಕಾಡಾ, ಮೈಸೂರು
  41. ಸದಾಶಿವ ಉಲ್ಲಾಳ್- ಅಧ್ಯಕ್ಷರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ
  42. ರಘುನಂದನ್ ರಾಮಣ್ಣ – ಅಧ್ಯಕ್ಷರು, ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರದೇಶ ಯೋಜನೆ ಪ್ರಾಧಿಕಾರ
  43. ಬಸವರಾಜ್ ಜಾಬಶೆಟ್ಟಿ – ಅಧ್ಯಕ್ಷರು, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ
  44. ಸಾಧು ಕೋಕಿಲ – ಅಧ್ಯಕ್ಷರು ಕರ್ನಾಟಕ ಚಲನಚಿತ್ರ ಅಕಾಡೆಮಿ

 

Comments are closed.

Don`t copy text!