Shubhashaya News

BREAKING : ಸಂಸದ ಡಾ. ಉಮೇಶ್ ಜಾಧವ ಬೆಂಬಲಿಗನ ಭೀಕರ ಹತ್ಯೆ : ಪಾರ್ಟಿ ಕೊಡಿಸುವ ನೆಪದಲ್ಲಿ ಕೊಲೆ

ಸ್ನೇಹಿತರು ಪಾರ್ಟಿ ಕೊಡಿಸುತ್ತೇನೆ ಎಂದು ಹೇಳಿ ಜಮೀನಿಗೆ ಕರೆಸಿಕೊಂಡು ಸಂಸದ ಡಾ. ಉಮೇಶ್ ಜಾಧವ ಬೆಂಬಲಿಗನ ಭೀಕರ ಹತ್ಯೆ ಮಾಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ಅಫ್ಜಲ್ಪುರ ತಾಲೂಕಿನ ಸಾಗನೂರು ಗ್ರಾಮದಲ್ಲಿ ನಡೆದಿದೆ.

ಹತ್ಯೆಗೆ ಒಳಗಾದ ವ್ಯಕ್ತಿಯನ್ನು ಗಿರೀಶ್ ಚಕ್ರ ಎಂದು ಹೇಳಲಾಗುತ್ತಿದ್ದು, ಸಂಸದ ಡಾ. ಉಮೇಶ್ ಜಾದವ್ ಬೆಂಬಲಿಗ ಕೂಡ ಎಂದು ಹೇಳಲಾಗುತ್ತಿದ್ದು, ಗಿರೀಶ್ ಬಿಜೆಪಿ ಮುಖಂಡರಾಗಿದ್ದು, ಸಾಗನೂರು ಗ್ರಾಮದ ಜಮೀನಿನಲ್ಲಿ ಭೀಕರವಾಗಿ ಕೊಲೆ ಮಾಡಲಾಗಿದೆ.ಕಳೆದ ನಾಲ್ಕು ದಿನಗಳ ಹಿಂದೆ ಬಿಎಸ್ಎನ್ಎಲ್ ಸಲಹಾ ಸಮಿತಿಗೆ ನಿರ್ದೇಶಕರಾಗಿ ಗಿರೀಶ್ ಆಯ್ಕೆಯಾಗಿದ್ದರು.

ಹೀಗಾಗಿ ಜಾದವ್ ಬೆಂಬಲಿಗ ಗಿರೀಶ್ ಗೆ ಸ್ನೇಹಿತರಿಂದ ಕರೆ ಮಾಡಿದ್ದು ಪಾರ್ಟಿ ಕೊಡಿಸುವುದಾಗಿ ಕರೆಸಿ ಮಾರಕಾಸ್ಟ್ರಗಳಿಂದ ಹತ್ಯೆ ಮಾಡಲಾಗಿದೆ.ಕಣ್ಣಿಗೆ ಕಾರದಪುಡಿ ಎರಚಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.ಇದೀಗ ಆರೋಪಿಗಳಿಗಾಗಿ ಗಣಗಾಪುರ ಪೊಲೀಸರು ಇದೀಗ ಹುಡುಕಾಟ ನಡೆಸುತ್ತಿದ್ದಾರೆ.

Comments are closed.

Don`t copy text!