Shubhashaya News

ಕಸಾಪ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ್ ಸ್ವಾಮಿ ಶಿಖರಮಠರಿಗೆ ಬೆಂಬಲಿಸಿ: ಬಸವರಾಜ ಭೋಗಾವತಿ

ಮಲ್ಲಿಕಾರ್ಜುನ ಸ್ವಾಮಿ ಶಿಖರಮಠ ಅವರು ಕಳೆದ 10 ವರ್ಷಗಳಿಂದ ಕನ್ನಡ ನಾಡು- ನುಡಿ ಸೇವೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ನಿರಂತರವಾಗಿ ಸೇವೆ ಮಾಡಿದ್ದಾರೆ.

ಮಾನ್ವಿ: ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ  ರಾಯಚೂರು ಯುವ ಸಾಹಿತಿ ಮಲ್ಲಿಕಾರ್ಜುನ್ ಸ್ವಾಮಿ ಶಿಖರಮಠ ಇವರು ಸ್ಫರ್ದೆ ಮಾಡಲಿದ್ದು ಇವರಿಗೆ ಬೆಂಬಲಿಸುವಂತೆ  ಮಾನ್ವಿಯ ಹಿರಿಯ ಪತ್ರಕರ್ತರಾದ ಬಸವರಾಜ್ ಭೋಗವತಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ.09 ರಂದು ನಡೆಯುವ  ರಾಜ್ಯ ಮತ್ತು ಜಿಲ್ಲಾ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ರಾಯಚೂರು ಜಿಲ್ಲಾ ಸಾಹಿತ್ಯ ಕ್ಷೇತ್ರವು  ಹಲವು ದಶಕಗಳಿಂದ ಕಾರ್ಯೋನ್ಮಖವಾಗಿದೆ. ಇಂತಹ ಇತಿಹಾಸವುಳ್ಳ ಪರಿಷತ್ತಿಗೆ ಮತ್ತಷ್ಟು ಶಕ್ತಿ ತುಂಬುವ ಸಮರ್ಪಣ ಮನೋಭಾವವಿರುವ ವ್ಯಕ್ತಿಗಳ ಅಗತ್ಯವಿದೆ ಅದರಲ್ಲೂ ಯುವ ಶಕ್ತಿಯ ಪಾತ್ರ ಬಹುದೊಡ್ಡದಿದ್ದು . ಈ ನಿಟ್ಟಿನಲ್ಲಿ ಮಲ್ಲಿಕಾರ್ಜುನ ಸ್ವಾಮಿ ಶಿಖರಮಠ ಅವರು ಕಳೆದ 10 ವರ್ಷಗಳಿಂದ ಕನ್ನಡ ನಾಡು- ನುಡಿ ಸೇವೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ನಿರಂತರವಾಗಿ ಸೇವೆ ಮಾಡಿದ್ದಾರೆ. ರಾಯಚೂರಿನಲ್ಲಿ ಜರುಗಿದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿ.ವಿ.ಐ.ಪಿ.ಗಳ ಅತಿಥ್ಯಗಳ ಜವಬ್ದಾರಿಯನ್ನು ಸಮರ್ಪಕವಾಗಿ ಯಶಸ್ವಿಯಾಗಿ ನಿರ್ವಸಿದ್ದಾರೆ. ಈ ಹಿಂದೆ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಪ್ರಸ್ತುತ ತಾಲೂಕಾ‌ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿಯೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಿದ್ದಾರೆ.  ಮಲ್ಲಿಕಾರ್ಜುನ ಸ್ವಾಮಿ ಶಿಖರಮಠ ಇವರ ತಂದೆ ದಿವಂಗತ ಎಸ್.ಜಿ ಸ್ವಾಮಿ ಸ್ಥಾಪಿಸಿದ ಗೌರವಾನ್ವಿತ ಮಲ್ಲಿಕಾರ್ಜುನ ಮನ್ಸೂರ್ ಪ್ರತಿಷ್ಠಾನದ ಸಂಚಾಲಕನಾಗಿ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿರುವ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದ್ದಾರೆ. ಇವರ ತಂದೆ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಇದರ ಮೂಲಕ ಅನೇಕ ಸಾಮಾಜಿಕ ಸೇವೆಗಳನ್ನು ಮಾಡಿದ್ದಾರೆ ಹೀಗಾಗಿ ಮಲ್ಲಿಕಾರ್ಜುನ ಸ್ವಾಮಿ ಶಿಖರಮಠ ಇವರು ಮಾನ್ವಿ ತಾಲೂಕಿನಿಂದ ಹೆಚ್ಚಿನ ಬೆಂಬಲವನ್ನು ನೀಡುವುದರ ಮೂಲಕ ಬಹುಮತದಿಂದ ಹಾರಿಸಿ ತರಬೇಕೆಂದರು‌
ಇದೆ. ಮಾ.29 ರಂದು ಪಟ್ಟಣ ಪ್ರಗತಿ ಕಾಲೇಜಿನ ಆವರಣದಲ್ಲಿ ಸಭೆಗೆ ಕರೆಯಲಾಗಿದೆ ಈ ಸಭೆಯಲ್ಲಿ ಮಲ್ಲಿಕಾರ್ಜುನ ಸ್ವಾಮಿ ಶಿಖರಮಠ ಆಗಮಿಸಿ ಸಭೆಯ ಉದ್ದೆಶಿಸಿ ಮಾತನಾಡಲಿದ್ದಾರೆ. ಹೀಗಾಗಿ ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕಸಾಪ ಅಜೀವ ಹಿರಿಯ ಸದಸ್ಯರಾದ ಕಿಡಿಗಣ್ಣಯ್ಯ ಸ್ವಾಮಿ, ಡಾ. ಈರಣ್ಣ ಮರ್ಲಟ್ಟಿ, ಎಂ.ಎಂ ಹಿರೇಮಠ, ವೀರಭದ್ರಯ್ಯ ಸ್ವಾಮಿ ಸಂಗಾಪೂರು, ಪತ್ರಕರ್ತರಾದ ನಾಗರಾಜ್ ತಡಕಲ್, ರವಿಶರ್ಮಾ ಜಾನೇಕಲ್, ಸಂಪಾದಕ ಲಕ್ಷ್ಮಣರಾವ್ ಕಪಗಲ್, ಉಪನ್ಯಾಸಕರಾದ ಆಂಜಿನೇಯ್ಯ ನಸಲಾಪೂರು, ಹನುಮಂತ ಯಡಿವಾಳ ಸೇರಿದಂತೆ ಸದಸ್ಯರು ಇದ್ದರು.

Comments are closed.

Don`t copy text!