Shubhashaya News

ಮುಂಗಾರು ಮಳೆ: ಕವಿಗೋಷ್ಠಿಗೆ ಆಯ್ಕೆ

ಕಲಬುರಗಿ: ಕಳೆದ ರವಿವಾರ ಕನಾಟಕ ರಾಜ್ಯ ಬರಹಗಾರರ ಬಳಗ ಹೂವಿನ ಹಡಗಲಿ ಜಿಲ್ಲಾ ಘಟಕದ ಆಶ್ರಯದಲ್ಲಿ ಜಿಲ್ಲಾ ಮಟ್ಟದ ‘ಮುಂಗಾರು ಮ¼’É ಅಂತರ್ಜಾಲ ಕವಿಗೋಷ್ಠಿ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಕವಿಗೋಷ್ಠಿಯಲ್ಲಿ ಮೂರು ಜನರ ಕವನಗಳು ಆಯ್ಕೆಯಾದವು ಎಂದು ಅಧ್ಯಕ್ಷ ಮಹಾಂತೇಶ ಎನ್ ಪಾಟೀಲ ತಿಳಿಸಿದ್ದಾರೆ.


ಇವರಲ್ಲಿ ಕವಿ ಧರ್ಮಣ್ಣ ಎಚ್ ಧನ್ನಿ(ಪ್ರಥಮ), ವೀರಭದ್ರಪ್ಪ ಗುರುಮಠಕಲ್(ದ್ವಿತೀಯ) ಹಾಗೂ ಬಾಬುಮಿಯಾ ಫುಲಾರಿ(ತೃತೀಯ) ಅವರು ಆಯ್ಕೆಗೊಂಡ ಪ್ರಮುಖರು. ಹಾಗೂ ರೇಣುಕಾ ಎನ್ ಮತ್ತು ಅಶ್ವಿನಿ ಎಂ ಪಾಟೀಲ ಅವರ ಕವನಗಳು ತೀರ್ಫುಗಾರರ ಮೆಚ್ಚುಗೆ ಪಡೆದವು.
ಒಟ್ಟು28 ಜನ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ಮಂಡಿಸಿದರು. ರವಿಕುಮಾರ ನಂದಗೇರಿ ಅವರು ತೀರ್ಫುಗಾರರಾಗಿ ಕಾರ್ಯ ನಿರ್ವಹಿಸಿದರು.
‘ಮುಂಗಾರು ಮಳೆರಾಯ ಹಿಗ್ಗಿಲೆ ಬಂದಾನ, ಮುತ್ತಿನ ಹನಿಯಾಗಿ ಬೆಳತನಕ ಸುರಿದಾನ’ ಎಂಬ ಕವನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಮಳೆ ರೈತಾಪಿ ವರ್ಗಕ್ಕೆ ಖುಷಿ ನೀಡುವಂಥದು. ರೈತರ ಮೊಗದಲ್ಲಿ ಸಂಭ್ರಮದ ಕಳೆ ಹೆಚ್ಚಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುತ್ತಾನೆ. ಈ ಮಳೆ ಹೂ ಬಳ್ಳಿ ಎಲೆಗಳು ಚಿಗುರಿ ಪ್ರಕೃತಿಯ ಸೊಬಗನ್ನು ಹೆಚ್ಚಿಸುತ್ತದೆ. ಈ ದಿಸೆಯಲ್ಲಿ ಕವಿಗಳು ತಮ್ಮದೇ ಶೈಲಿಯಲ್ಲಿ ಕವನಗಳು ಕಟ್ಟಿ ಕೊಟ್ಟಿದ್ದರು.

Leave A Reply

Your email address will not be published.