Shubhashaya News

ಪತ್ರಕರ್ತರಿಗೂ ಕೋವಿಡ್ ಪ್ಯಾಕೇಜ್ ಸೇರಿ ಎಲ್ಲ ಸೌಲಭ್ಯಕ್ಕೆ ಭವಾನಿ ಸಿಂಗ ಠಾಕೂರ ಒತ್ತಾಯ

ಕಲಬುರಗಿ: ಮುಖ್ಯಮಂತ್ರಿಗಳು ಹಾಗೂ ಪ್ರಧಾನ ಮಂತ್ರಿಗಳು ಪತ್ರಕರ್ತರು ಸಹ ಪ್ರಂಟ್‍ಲೈನ್ ವಾರಿಯರಸ್‍ಗಳು ಎಂದು ಘೋಷಣೆ ಮಾಡಿ ಕೇವಲ ಕೋವಿಡ್ ಲಸಿಕೆ ಸೌಲಭ್ಯ ಬಿಟ್ಟರೆ ಇನ್ಯಾವುದೇ ಪರಿಹಾರ ಪ್ರಕಟಿಸದೆ ಇರುವುದು ರಾಜ್ಯದ ಸರ್ಕಾರದ ದೋರಣೆ ಸರಿಯಲ್ಲ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಭವಾನಿ ಸಿಂಗ ಠಾಕೂರ ಮತ್ತು ಪ್ರಧಾನ ಕಾರ್ಯದರ್ಶಿ ದೇವಿಂದ್ರಪ್ಪ ಅವಟಿ ಅವರು ಸರ್ಕಾರದ ವಿರುದ್ಧ ಹರಿಹಾಯ್ದರು.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೂಡಲೇ ಸರ್ಕಾರ ಪತ್ರಕರ್ತರಿಗೆ ಪ್ಯಾಕೇಜ್ ಸೇರಿ ವಾರಿಯರಸ್‍ಗಳಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದ ಅವರು, ರಾಜ್ಯದಲ್ಲಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಗುರುವಾರ ಘೋಷಿಸಿದ 2ನೇ ಪ್ಯಾಕೇಜ್‍ನಲ್ಲಿ ಪತ್ರಕರ್ತರು ಮತ್ತು ವಿಶೇಷವಾಗಿ ಹೆಚ್ಚಿನ ಸಂಕಷ್ಟದಲ್ಲಿರುವ ತಾಲೂಕು ಪಟ್ಟಣದ ಪತ್ರಕರ್ತರಿಗೆ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿಗಳು ಸೇರಿ ಯಾವೊಬ್ಬ ಶಾಸಕ ಸಚಿವರು ಚೆಕಾರ ಎತ್ತದೆ ಇರುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಕರ್ತರು ಸಹ ಕಾರ್ಮಿಕರೆ ಇದ್ದಂತೆ, ಎಲ್ಲಾ ತಾಲೂಕು ಹೋಬಳಿ ಮಟ್ಟದಲ್ಲಿ ಪತ್ರಕರ್ತರು ಪ್ರಸಕ್ತ ಪರಿಸ್ಥಿತಿಯ ಎಲ್ಲಾ ಆಗು ಹೋಗುಗಳನ್ನು ಸರ್ಕಾರ ಮತ್ತು ಅಧಿಕಾರಿಗಳ ಗಮನಕ್ಕೆ ತಂದು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಇಂಥವರಿಗೆ ಸರ್ಕಾರ ಸೌಲಭ್ಯಗಳನ್ನು ಘೋಷಣೆ ಮಾಡಬೇಕು. ತಾಲೂಕು ಮಟ್ಟದಲ್ಲಿ ಅರೆಕಾಲಿಕ ಪತ್ರಕರ್ತರೆಂದು ಆಯಾ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದ್ದರು ಸಹ ಅವರು ಪೂರ್ಣಕಾಲಿಕ ಕೆಲಸ ಮಾಡುತ್ತಿರುವುದು ಜಗಜಾಹಿರಿದೆ. ಇದರಿಂದ ಇವರಿಗೂ ಹೆಚ್ಚಿನ ಸಂಭಳವಿಲ್ಲದೆ ಕೇವಲ ಗೌರವಧನದ ಆಧಾರದ ಮೇಲೆ ದುಡಿಯುತ್ತಿದ್ದು, ಮಧ್ಯಮಗಳು ಸದ್ಯ ಸಂಕಷ್ಟದಲ್ಲಿದ್ದು ನಿರೀಕ್ಷಿತ ವೇತನ ನೀಡುವ ಸ್ಥಿತಿಯಲ್ಲಿಲ್ಲ. ಇದರಿಂದ ಪತ್ರಕರ್ತರಿಗೆ ಈ ವೃತ್ತಿ ಬಿಟ್ಟರೆ ಬೇರೆನು ಗತಿಯಿಲ್ಲದ ಸ್ಥಿತಿಯಲ್ಲಿ ಸರ್ಕಾರವು ಇನ್ನೂಳಿದ ವರ್ಗಗಳಿಗೆ ನೀಡಿದಂತೆ ಪತ್ರಕರ್ತರಿಗೆ ತಕ್ಷಣವೇ ಪ್ಯಾಕೇಜ್ ಘೋಷಿಸಿ ಸೌಲಭ್ಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

Leave A Reply

Your email address will not be published.