ಮಾಳಿ–ಮಾಲಗಾರ ಸಮಾಜದ ಪ್ರತಿಭಾ ಪುರಸ್ಕಾರ: ಅ.೨೫ರಂದು ಚಿಕ್ಕೋಡಿಯಲ್ಲಿ ಸಾಧಕರಿಗೆ ಸನ್ಮಾನ; ಅರ್ಜಿ ಸಲ್ಲಿಕೆಗೆ ಅ.೧೫ ಕೊನೆ ದಿನ
ಆಳಂದ: ಕರ್ನಾಟಕ ರಾಜ್ಯ ಮಾಳಿ–ಮಾಲಗಾರ ಮಹಾಸಭಾ ಟ್ರಸ್ಟ್ (ರಿ), ಬೆಂಗಳೂರು ವತಿಯಿಂದ ೨೦೨೫–೨೬ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ವಿಶೇಷ ಸಾಧಕರ ಸನ್ಮಾನ ಸಮಾರಂಭವನ್ನು ಅಕ್ಟೋಬರ್ ೨೫ರಂದು ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ರಾಜ್ಯ ಉಪಾಧ್ಯಕ್ಷ ಪಂಡಿತ್ ಶೇರಿಕಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿಕ್ಕೋಡಿಯ ಕೇಶವ ಕಲಾ ಭವನ (ಕೆ.ಇ. ರೋಡ್)ದಲ್ಲಿ ಬೆಳಿಗ್ಗೆ ೯ ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಶೇ.೮೦, ಪದವಿಯಲ್ಲಿ ಶೇ.೮೦, ಸ್ನಾತಕೋತ್ತರ ಪದವಿಯಲ್ಲಿ ಶೇ.೭೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುವುದು. ಶಿಕ್ಷಣ, ಕಲೆ, ಕೃಷಿ, ವಾಣಿಜ್ಯ, ತಾಂತ್ರಿಕ, ಸಾಹಿತ್ಯ, ವೃತ್ತಿಪರ, ಸಂಗೀತ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜ ಬಾಂಧವರಿಗೂ ಸನ್ಮಾನ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ ಶೇ.೯೬–೧೦೦ ಅಂಕ: ೨,೫೦೦, ಶೇ.೯೧–೯೫ ಅಂಕ: ೨,೦೦೦, ಶೇ.೮೬–೯೦ ಅಂಕ: ೧,೫೦೦, ಶೇ.೮೦–೮೫ ಅಂಕ: ೧,೦೦೦ ಪ್ರೋತ್ಸಾಹಧನ ನೀಡಲಾಗುವುದು. ಅರ್ಜಿ ಸಲ್ಲಿಕೆಗೆ ಆಸಕ್ತರು ಅಕ್ಟೋಬರ್ ೧೫ರೊಳಗೆ ಅರ್ಜಿ ಸಲ್ಲಿಸಬೇಕು. ಅಂಕಪಟ್ಟಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ, ೪ ಛಾಯಾಚಿತ್ರ ಮತ್ತು ೨ ಮೊಬೈಲ್ ಸಂಖ್ಯೆಗಳನ್ನು ಲಗತ್ತಿಸಬೇಕು. ಅರ್ಜಿಗಳು ಸಮಾಜದ ಪ್ರತಿ ನಿಧಿಯ ಮೂಲಕ ಸ್ವೀಕೃತವಾಗುತ್ತವೆ ಎಂದು ತಿಳಿಸಿರುವ ಅವರು, ಸಮಾಜದಲ್ಲಿ ಹೆಚ್ಚುತ್ತಿರುವ ಮದುವೆ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಚಿಕ್ಕೋಡಿಯಲ್ಲಿ ಮೊಟ್ಟಮೊದಲ ಬಾರಿಗೆ ವಧು–ವರರ ಬೃಹತ್ ರಾಜ್ಯ ಮಟ್ಟದ ಸಮ್ಮೇಳನವನ್ನು ನವೆಂಬರ್ ೧೪ರಂದು ಆಯೋಜಿಸಲಾಗಿದೆ ಸಮಾಜ ಬಾಂಧವರು ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದಿರುವ ಅವರು, ಕಳೆದ ೧೭ ವರ್ಷಗಳಿಂದ ಟ್ರಸ್ಟ್ ಸಮಾಜದ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ರಾಜ್ಯ, ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಮಹಿಳಾ ಮತ್ತು ಯುವ ಘಟಕಗಳನ್ನು ಆರಂಭಿಸಲಾಗುತ್ತಿದ್ದು, ಆಸಕ್ತರು : ಪಂಡಿತ್ ಶೇರಿಕಾರ್ (ಆಳಂದ), ರಾಜ್ಯ ಉಪಾಧ್ಯಕ್ಷರು, ೮೪೩೧೦೬೪೨೧೧, ೯೪೪೯೬೬೧೨೬೨; ಅಶೋಕ ಲಿಂಬಿಗಿಡ (ಚಿಕ್ಕೋಡಿ), ರಾಜ್ಯಾಧ್ಯಕ್ಷರು, ೮೯೫೧೭೮೨೪೪೭.ಸಂಪರ್ಕಿಸಬಹುದಾಗಿದೆ ಎಂದು ಅವರು ಕೋರಿದ್ದಾರೆ.