ಆಳಂದ: ಸಿಯುಕೆ ಆಯೋಜಿಸಿದ್ದ ಇಇಜಿ ಬಯೋಫೀಡ್‌ಬ್ಯಾಕ್ ಕಾರ್ಯಾಗಾರದಲ್ಲಿ ಕುಲಪತಿ ಬಟ್ಟು ಸತ್ಯನಾರಾಯಣ ಉದ್ಘಾಟಿಸಿ ಮಾತನಾಡಿದರು.
ಆಳಂದ: ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಸಾಮಾಜಿಕ ಮತ್ತು ವರ್ತನೆಯ ವಿಜ್ಞಾನ ಶಾಲೆಯ ಮನೋವಿಜ್ಞಾನ ವಿಭಾಗದ ವತಿಯಿಂದ ಮೂರು ದಿನಗಳ ಇಇಜಿ ಬಯೋಫೀಡ್‌ಬ್ಯಾಕ್ ಕಾರ್ಯಾಗಾರ ನಡೆಯಿತು.
ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಮೆದುಳಿನ ವಿದ್ಯುತ್ ತರಂಗಗಳನ್ನು ದಾಖಲಿಸುವ ಎಲೆಕ್ಟೊçÃಎನ್ಸೆಫಲೋಗ್ರಫಿ (ಇಇಜಿ) ತಂತ್ರಜ್ಞಾನ ಹಾಗೂ ಸಂಬAಧಿತ ಮನೋಶಾರೀರಿಕ ಮಾಪನ ವಿಧಾನಗಳ ಕುರಿತು ಪ್ರಾಯೋಗಿಕ ತರಬೇತಿ ನೀಡುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿತ್ತು. ಕಾರ್ಯಾಗಾರದಲ್ಲಿ ಇಇಜಿ ಉಪಕರಣಗಳ ಬಳಕೆ, ಸಿಗ್ನಲ್‌ಗಳ ದಾಖಲಾತಿ, ದತ್ತಾಂಶ ಸಂಗ್ರಹಣೆ ಮತ್ತು ವಿಶ್ಲೇಷಣೆಗೆ ಅಗತ್ಯವಾದ ಮೂಲಭೂತ ಹಾಗೂ ಪ್ರಾಯೋಗಿಕ ಅಂಶಗಳನ್ನು ಪರಿಚಯಿಸಲಾಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ, ಇಇಜಿ ಸೇರಿದಂತೆ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ಬಹುಶಿಸ್ತೀಯ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು. ವಿವಿಧ ಶಿಸ್ತುಗಳ ನಡುವಿನ ಸಂಶೋಧನಾ ಸಾಧ್ಯತೆಗಳನ್ನು ಅನ್ವೇಷಿಸುವ ಮೂಲಕ ಹೊಸ ಜ್ಞಾನವನ್ನು ಸೃಷ್ಟಿಸಲು ಮುಂದಾಗಬೇಕು. ವಿಶ್ವವಿದ್ಯಾಲಯದಲ್ಲಿರುವ ಸಂಶೋಧನಾ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ರಾಷ್ಟಿçÃಯ ಹಾಗೂ ಅಂತರರಾಷ್ಟಿçÃಯ ಮಟ್ಟದಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಸಹಯೋಗವನ್ನು ವಿಸ್ತರಿಸಬೇಕು ಎಂದು ಸಂಶೋಧಕರಿಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕುಲಪತಿ ಅವರು ಬಯೋಫೀಡ್‌ಬ್ಯಾಕ್ ಮತ್ತು ಅರಿವಿನ ನರಮನೋವಿಜ್ಞಾನ ಪ್ರಯೋಗಾಲಯದ ವೆಬ್‌ಸೈಟ್‌ಗೆ ಚಾಲನೆ ನೀಡಿದರು. ಪ್ರಯೋಗಾಲಯದ ಸೌಲಭ್ಯಗಳು, ನಡೆಯುತ್ತಿರುವ ಸಂಶೋಧನಾ ಚಟುವಟಿಕೆಗಳು ಹಾಗೂ ಶೈಕ್ಷಣಿಕ ಉಪಕ್ರಮಗಳ ಕುರಿತು ಸಮಗ್ರ ಮಾಹಿತಿಯನ್ನು ವೆಬ್‌ಸೈಟ್ ಒಳಗೊಂಡಿದೆ. ದೇಶ-ವಿದೇಶಗಳ ಸಂಶೋಧಕರು ಹಾಗೂ ಶೈಕ್ಷಣಿಕ ಸಂಸ್ಥೆಗಳು ಸಿಯುಕೆ ಮನೋವಿಜ್ಞಾನ ವಿಭಾಗದೊಂದಿಗೆ ಸಂಪರ್ಕ ಸಾಧಿಸಿ ಸಂಶೋಧನಾ ಸಹಯೋಗದ ಅವಕಾಶಗಳನ್ನು ಅನ್ವೇಷಿಸಲು ಇದು ವೇದಿಕೆಯಾಗಲಿದೆ ಎಂದು ತಿಳಿಸಲಾಯಿತು.
ಏರೋಬ್ ಪ್ರೆöÊವೇಟ್ ಲಿಮಿಟೆಡ್‌ನ ಸಹಾಯಕ ತಾಂತ್ರಿಕ ಬೆಂಬಲ ವ್ಯವಸ್ಥಾಪಕ ರಾಹುಲ್ ಗುಪ್ತಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಕಾರ್ಯಾಗಾರದ ಪ್ರಾಯೋಗಿಕ ತರಬೇತಿಗೆ ಮಾರ್ಗದರ್ಶನ ನೀಡಿದರು. ಎಲೆಕ್ಟೊçÃಡ್‌ಗಳನ್ನು ಅಳವಡಿಸುವ ವಿಧಾನ, ಇಇಜಿ ಸಿಗ್ನಲ್‌ಗಳ ದಾಖಲಾತಿ, ದತ್ತಾಂಶ ಸಂಗ್ರಹಣೆ ಹಾಗೂ ದತ್ತಾಂಶದಲ್ಲಿನ ಆರ್ಟಿಫ್ಯಾಕ್ಟ್ಗಳನ್ನು ಗುರುತಿಸುವ ವಿಧಾನಗಳ ಕುರಿತು ಭಾಗವಹಿಸಿದವರಿಗೆ ತರಬೇತಿ ನೀಡಿದರು.
ಇದರೊಂದಿಗೆ ಗಾಲ್ವನಿಕ್ ಸ್ಕಿನ್ ರೆಸ್ಪಾನ್ಸ್ (ಜಿಎಸ್‌ಆರ್), ಹೃದಯ ಬಡಿತದ ವ್ಯತ್ಯಾಸ (ಎಚ್‌ಆರ್‌ವಿ) ಹಾಗೂ ಎಲೆಕ್ಟೊçÃಮ್ಯೋಗ್ರಫಿ (ಇಎಂಜಿ) ಸೇರಿದಂತೆ ವಿವಿಧ ಶಾರೀರಿಕ ಮಾಪನ ವಿಧಾನಗಳ ಕುರಿತು ಪ್ರಾಯೋಗಿಕ ಮಾಹಿತಿ ನೀಡಲಾಯಿತು. ಈ ತರಬೇತಿಯು ಮನೋವಿಜ್ಞಾನ, ನರಮನೋವಿಜ್ಞಾನ ಮತ್ತು ಸಂಬAಧಿತ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುವ ವಿದ್ಯಾರ್ಥಿಗಳಿಗೆ ಉಪಯುಕ್ತವಾಯಿತು.
ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ವಿಜಯೇಂದ್ರ ಪಾಂಡೆ ಸ್ವಾಗತಿಸಿ, ವಿದ್ಯಾರ್ಥಿಗಳು ಮತ್ತು ಸಂಶೋಧಕರಲ್ಲಿ ಪ್ರಾಯೋಗಿಕ ಹಾಗೂ ಸಂಶೋಧನಾ ಕೌಶಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ವಿಭಾಗ ಕೈಗೊಂಡಿರುವ ವಿವಿಧ ಉಪಕ್ರಮಗಳ ಕುರಿತು ವಿವರಿಸಿದರು.
ಸಾಮಾಜಿಕ ಮತ್ತು ವರ್ತನೆಯ ವಿಜ್ಞಾನ ಶಾಲೆಯ ಡೀನ್ ಪ್ರೊ. ಪವಿತ್ರಾ ಆರ್. ಆಲೂರ್, ಯುವ ಸಂಶೋಧಕರ ಕೌಶಲ್ಯ ಹಾಗೂ ಸಂಶೋಧನಾ ಸಾಮರ್ಥ್ಯ ವೃದ್ಧಿಯಲ್ಲಿ ಪ್ರಾಯೋಗಿಕ ಕಲಿಕೆಯ ಮಹತ್ವವನ್ನು ಒತ್ತಿ ಹೇಳಿದರು.
ಸಹಾಯಕ ಪ್ರಾಧ್ಯಾಪಕಿ ಹಾಗೂ ಕಾರ್ಯಕ್ರಮ ಸಂಯೋಜಕಿ ಡಾ. ಆಸ್ತಾ ವಂದಿಸಿದರು.