ಶಿಕ್ಷಕರ ದಿನಾಚರಣೆ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
ಅತ್ಯುತ್ತಮ ನಾಗರೀಕರನ್ನು ಸೃಷ್ಠಿಸುವ ಶಕ್ತಿ ಶಿಕ್ಷಕರಿಗಿದೆ: ಸಾಹೇಬ್
ವಾಡಿ, ಸೆ.21: ದೇಶದ ಅತ್ಯುತ್ತಮ ನಾಗರೀಕರನ್ನು ಸೃಷ್ಠಿಸುವ ಶಕ್ತಿ ಶಿಕ್ಷಕರಿಗೆ ಮಾತ್ರ ಇದೆ ಎಂದು ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸೈಯದ್ ಮೆಹಮೂದ್ ಚಿಸ್ತಿ ಸಾಹೇಬ್ ಹೇಳಿದರು.
ಪಟ್ಟಣದ ಸಿದ್ದಾರ್ಥ ಭವನದಲ್ಲಿ ಸೋಮವಾರ ಪಿಎಂಕೆ ಫ್ಯಾನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಹಾಗೂ ‘ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರನ್ನು ವಿದ್ಯಾರ್ಥಿಗಳು ಸದಾ ಗೌರವಿಸಬೇಕು. ಮಕ್ಕಳ ಮಾತುಗಳನ್ನು ಕೇಳು ಶಿಕ್ಷಕರ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೆ ಇಳಿಯಬಾರದು ಎಂದು ಪೋಷಕರಿಗೆ ಸಲಹೆ ನೀಡಿದರು.
ಸ್ಥಳೀಯ ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನೆಯೇ ಮೊದಲ ಪಾಠಶಾಲೆ, ಮಾತೆಯೇ ಮೊದಲ ಗುರು ಎನ್ನುವ ಸತ್ಯ ಇರುವಾಗಲೂ, ನ್ಯಾಯ, ಪರಸ್ಪರ ಪ್ರೀತಿ, ವ್ಯಕ್ತಿ ಸಮಾನತೆ, ಮೈತ್ರಿ, ಹಾಗೂ ಸ್ವತಂತ್ರದ ಬದುಕು ರೂಪಿಸಿಕೊಳ್ಳಲು ಇಷ್ಟು ಸಾಲದು, ಇನ್ನಷ್ಟು ಬೇಕು ಅಂತ ಶತಮಾನಗಳ ಹಿಂದೆ ಶಾಲೆಗಳು ಆರಂಭವಾಗಿವೆ ಎಂದರು.
ತಾಯಿ ಚೆನ್ನಾಗಿ ಓದಿ ನಿದ್ಯಾವಂತನಾಗು ಎಂದು ಹೇಳಿದರೆ, ಶಿಕ್ಷಕ ತಂದೆ ತಾಯಿ, ಗುರು ಹಿರಿಯರನ್ನು ಗೌರವಿಸು ಎಂದು ಹೇಳುತ್ತಾನೆ. ಒಂದು ಮಗುವನ್ನು ಉತ್ತಮ ಪ್ರಜೆಯನ್ನಾಗಿ ಮಾಡಿವ ಶಕ್ತಿ ಶಿಕ್ಷಕನಿಗಿದ್ದರೆ, ಒಬ್ಬ ಮಗನನ್ನು ಮನುಷ್ಯನಾಗಿ ಮಾಡುವ ಪೂರಕವಾದ ವಾತಾವರಣವನ್ನು ತಂದೆ-ತಾಯಿ ನಿರ್ಮಿಸುತ್ತಾರೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಮಹಾತ್ಮ ಗಾಂಧಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶೇಖ್ ಅನ್ವರ್, ಮುಖಂಡರಾದ ಬಾಬು ಮಿಯಾ, ಚಂದ್ರಸೇನ ಮೇನಗಾರ, ಮಾತನಾಡಿದರು.
ಪಿಎಸ್ಐ ತಿರುಮಲೇಶ ಕುಂಬಾರ, ಎಸಿಸಿ ಕಾರ್ಮಿಕ ಸಂಘದ ಅಧ್ಯಕ್ಷ, ಶರಣಬಸ್ಸು ಸಿರೂರಕರ, ಎಪಿಎಂಸಿ ಮಾಜಿ ಅಧ್ಯಕ್ಷ ಶಂಕ್ರಯ್ಯ ಸ್ವಾಮಿ ಮದ್ರಿ, ಪತ್ರಕರ್ತರಾದ ದಯಾನಂದ ಖಜೂರಿ, ಇಂಗಳಗಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮುಕ್ರುಮ್ ಪಟೇಲ್, ಗಂಗಾ ಮಾತೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಇಂದಿರಾ ಜಿ.ಕೆ, ಸುಶೀಲಾ ಜಾಧವ, ಖೇಮಲಿಂಗ ಬೆಳಮಗಿ, ಗುರುಪಾದ ದೊಡ್ಡಮನಿ, ಸಂದೀಪ ಜೋಗೂರ, ಭೀಮರಾವ ನಿಂಬಾಳಕರ, ಹುಸನಪ್ಪ ನಿಲಾರ, ಶಶಿಕುಮಾರ ಅರೋಲಿಕರ, ಕಿರಣ ರಾಜನಾಳ ಸೇರಿದಂತೆ ಹಲವರಿದ್ದರು.
ಇದೇ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ 27 ಜನ ಶಿಕ್ಷಕರಿಗೆ “ಅತ್ಯುತ್ತಮ ಶಿಕ್ಷಕ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶೇಕಪ್ಪ ಹೇರೂರ ಸ್ವಾಗತಿಸಿದರು. ಪ್ರದಾನ ಕಾರ್ಯದರ್ಶಿ ರವಿಕುಮಾರ ಕೋಳಕೂರ ಪ್ರಾಸ್ತಾವಿಕ ನಿಡಿಗಳನ್ನಾಡಿದರು. ಫ್ಯಾನ್ಸ್ ಕ್ಲಬ್‌ನ ಅಧ್ಯಕ್ಷ ಸೂರ್ಯಕಾಂತ ರದ್ದೇವಾಡಿ ನಿರೂಪಿಸಿದರು. ಆನಂದ ನಿಂಬರ್ಗಾ ವಂದಿಸಿದರು.