ಚಿತ್ತಾಪುರ; ಜನರ ಮನೆ ಬಾಗಿಲಿಗೆ ಸರ್ಕಾರ ಎಂಬ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆಂದೋಲನ ಕಾರ್ಯಕ್ರಮವು ತಾಲೂಕಿನ ಅಲ್ಲೂರ್(ಬಿ) ಗ್ರಾಮದಲ್ಲಿ ಜರುಗಿದೆ.
ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ಆಂದೋಲನಕ್ಕೆ ಚಾಲನೆ ನೀಡಿದರು.
ಸಾರ್ವಜನಿಕರು ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ, ಆಹಾರ ಇಲಾಖೆ, ಕುಡಿಯುವ ನೀರು ಸರಬರಾಜು ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಒಟ್ಟು 40 ಅರ್ಜಿಗಳು ಸ್ವೀಕೃತಿಯಾಗಿದ್ದು, ಆಯಾ ಇಲಾಖೆಗಳಿಗೆ ಅರ್ಜಿಗಳನ್ನು ವರ್ಗಾಯಿಸಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಗ್ರೇಡ್-2 ತಹಶೀಲ್ದಾರ್ ರಾಜಕುಮಾರ ಮರತೂರಕರ್, ತಾ.ಪಂ ಇಒ ಮಹ್ಮದ್ ಅಕ್ರಂ ಪಾಷಾ, ಅರಣ್ಯ ಇಲಾಖೆಯ ವಿಜಯಕುಮಾರ ಬಡಿಗೇರ್, ಪಶು ಇಲಾಖೆಯ ಶಂಕರ ಕಣ್ಣೆ, ಮುಖಂಡರಾದ ದುರ್ಜನಪ್ಪ ನಾಟಿಕಾರ್, ರಾಮಲಿಂಗ, ಶಂಕರ ವಿಜಾಪುರ, ಮಹಾದೇವ ಕೊನಿಗೇರಿ ಸೇರಿದಂತೆ ಇತರರು ಇದ್ದರು.
Next Post