Shubhashaya News

ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ

ಕಲಬುರಗಿ: ನಗರದ ವಾರ್ಡ ನಂ 7ರ ವ್ಯಾಪ್ತಿಯಲ್ಲಿ ಬರುವ ಅಂಬೇಡ್ಕರ ಆಶ್ರಯ ಕಾಲೋನಿಯಲ್ಲಿ (ಶೇಖರೋಜಾ) ಶಿಶು ಅಭಿವೃದ್ದಿ ಇಲಾಖೆಯ ಕೇಂದ್ರ 1ರಲ್ಲಿ ಅಂಗನವಾಡಿಯ ಮಕ್ಕಳಿಗೆ ಸಮವಸ್ತ್ರವನ್ನು ಸ್ವಇಚ್ಚೆಯಿಂದ ಮಹಾನಗರ ಪಾಲಿಕೆ ಸದಸ್ಯ ಕೃಷ್ಣಾ ನಾಯಕ, ಹಾಗೂ ಡೊಂಗರಗಾಂವ ಗ್ರಾಮ ಪಂಚಾಯತ ಮಾಜಿ ಅದ್ಯಕ್ಷ ಅನೀಲಕುಮಾರ ಪಿ ಬೆಳಕೇರಿ ನೇತೃತ್ವದಲ್ಲಿ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು.ಈ ಸಂದರ್ಭದಲ್ಲಿ ವಿಲಾಸಮತಿ ಹಿರೇಮಠ,ಮೇಲ್ವಿಚಾರಕಿ ಅಶ್ವಿನಿ,ವಿನೋದ ಬಿಲಗುಂದಿ, ಜಗದೇವಿ ಟೀಚರ್, ಶಿವಲೀಲಾ ಲೇಗಂಟಿ, ಶಿವಶರಣಪ್ಪ ನಾಗೂರೆ,ಮಾರುತಿ ಭರಣಿ,ಅಮೃತ ದೊಡ್ಡಮನಿ, ರುಕ್ಮಣ್ಣ ವಾಡೇಕರ ಸೇರಿದಂತೆ ಬಡಾವಣೆಯ ಮುಖಂಡರು ಇದ್ದರು.

Leave A Reply

Your email address will not be published.