Shubhashaya News

ಕಲಬುರಗಿ: ಸುಲಫಲ ಮಠದಲ್ಲಿ ವಚನ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ

ಕಲಬುರಗಿ: ಬಸವಾದಿ ಶರಣರ ಅನುಭಾವ ತುಂಬಿದ ವಚನ ಸಾಹಿತ್ಯ ನಮ್ಮ ಜೀವನದ ಅಸ್ಮಿತೆಯಾಗಿದೆ. ಪ್ರತಿಯೊಂದು ವಚನಗಳು ಜೀವಸತ್ವದಿಂದ ಕೂಡಿವೆ. ನುಡಿದಂತೆ ನಡೆದಿರುವಾಗ ಅವು ವಚನಗಳಾಗಿ ಹುಟ್ಟಿದವು. ಎಲ್ಲಾ ಜಾತಿ ಧರ್ಮಗಳಾಚೆ ನಿಂತು ಎಲ್ಲರನ್ನು ಅಪ್ಪಿಕೊಂಡoತಹ ಸಾಹಿತ್ಯವೇ ವಚನ ಸಾಹಿತ್ಯವಾಗಿದೆ. ಇಂಥ ವಚನ ಸಾಹಿತ್ಯದಿಂದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಾಣಬಹುದಾಗಿದೆ. ಈ ಕುರಿತು ಬೆಳಕು ಚೆಲ್ಲುವ ವಚನ ಸಾಹಿತ್ಯ ಸಮ್ಮೇಳನ ನಾಡಿಗೆ ಮಾದರಿಯಾಗಲಿದೆ ಎಂದು ಕಲಬುರಗಿ ವಿಭಾಗ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ನೆಲೋಗಿ ವಿರಕ್ತ ಮಠದ ಶ್ರೀ ಸಿದ್ಧಲಿಂಗ ಮಹಸ್ವಾಮಿಗಳು ಅವರು ನುಡಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಡಿಯಲ್ಲಿ ರೂಪಿಸಿರುವ ಕಲಬುರಗಿ ವಿಭಾಗ ಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆ ನಗರದ ಸುಲಫಲ ಮಠದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಪರಿಷತ್ ವತಿಯಿಂದ ನೀಡಿದ ಅಧಿಕೃತ ಆಹ್ವಾನ ಸ್ವೀಕರಿಸಿ ಅವರು ಮಾತನಾಡಿದರು.

ಸಾರಂಗಮಠದ ಜಗದ್ಗುರು ಶ್ರೀ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲೆಯಲ್ಲಿ ವೈಚಾರಿಕೆ ಮಾರ್ಗದಲ್ಲಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಹಾಗಾಗಿ ವಚನಗಳ ಸಾರವನ್ನು ಹೊಸ ಪೀಳಿಗೆಗೆ ಮುಟ್ಟಿಸುವ ಪ್ರಯತ್ನ ಸಾಗಲಿ ಎಂದು ಹಾರೈಸಿದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ವಚನ ಸಾಹಿತ್ಯದ ನೆಲೆಯಾಗಿರುವ ಈ ಭಾಗದಲ್ಲಿ ಅಪಾರ ಜ್ಞಾನಿಗಳಿದ್ದಾರೆ. ಹೀಗಾಗಿ ಸ್ಥಳೀಯವರನ್ನು ಗುರುತಿಸಿ ಗೌರವಿಸುವುದು ಅವಶ್ಯವಿದೆ. ಜಾತೀಯತೆ, ಭ್ರಷ್ಟಾಚವಾರ, ಮೂಢನಂಬಿಕೆ, ಲಿಂಗ ತಾರತಮ್ಯ ಖಂಡಿಸಿದ ಬಸವಾದಿ ಶರಣರು ಸ್ವಾಸ್ಥö್ಯ ಸಮಾಜ ನಿರ್ಮಾಣಕ್ಕಾಗಿ ನಡೆದಂತೆ ನುಡಿದು, ನುಡಿದಂತೆ ನಡೆದರು. ಸಮಾಜದಲ್ಲಿ ಕಡೆಗಣಿಸಲ್ಪಟ್ಟ ದೀನ ದಲಿತರ ಧ್ವನಿಯಾಗಿ ನಿಂತವರು ಎಂದು ಹೇಳಿದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಅಕಾಡೆಮಿ ಅಧ್ಯಕ್ಷ ಬಿ.ಎಂ. ಪಾಟೀಲ ಕಲ್ಲೂರ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಾ. ಗಣಪತಿ ಸಿಂಧೆ, ಸಾಹಿತಿಗಳಾದ ಮುಡುಬಿ ಗುಂಡೇರಾವ, ಡಾ. ಕೆ.ಎಸ್. ಬಂಧು, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಪ್ರಮುಖರಾದ ಚನ್ನಮಲ್ಲಯ್ಯ ಹಿರೇಮಠ, ವಿದ್ಯಾಸಾಗರ ದೇಶಮುಖ, ಲಿಂಗರಾಜ ಸಿರಗಾಪೂರ, ಈರಣ್ಣ ಹಡಪದ, ಜಗದೀಶ ಮರಪಳ್ಳಿ, ಪ್ರಕಾಶ ಗೊಣಗಿ, ಎಸ್.ಕೆ. ಬಿರಾದಾರ, ಸುರೇಶ ದೇಶಪಾಂಡೆ, ಸಂತೋಷ ಕುಡಳ್ಳಿ, ಶರಣಬಸಪ್ಪ ಕೋಬಾಳ, ಧರ್ಮರಾಜ ಜವಳಿ, ರಮೇಶ ಬಡಿಗೇರ, ದಿನೇಶ ಮದಕರಿ, ರಾಜೇಂದ್ರ ಮಾಡಬೂಳ, ಸೋಮಶೇಖರ ಹೊಸಮಠ, ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಜಯಶ್ರೀ ಜಮಾದಾರ, ರವಿಕುಮಾರ ಶಹಾಪೂರಕರ್, ಲಲೀತಾ ಪಾಟೀಲ, ಜ್ಯೋತಿ ಕೋಟನೂರ, ವೆಂಕುಬಾಯಿ ರಜಪೂತ, ಮಂಜುನಾಥ ಕಂಬಾಳಿಮಠ, ಜಗದೀಶ ನಿರ್ಣಾ, ಹಣಮಂತರಾವ ಪೆಂಚನಪಳ್ಳಿ, ಅಮೃತಪ್ಪ ಅಣೂರ, ಶಿವಾನಂದ ಸುರವಸೆ, ಸಿದ್ಧಲಿಂಗ ಬಾಳಿ, ಕಲ್ಯಾಣಕುಮಾರ ಶೀಲವಂತ, ಗಣೇಶ ಚಿನ್ನಾಕಾರ, ಹೆಚ್ ಎಸ್ ಬರಗಾಲಿ, ಮಲ್ಲಿನಾಥ ಸಂಗಶೆಟ್ಟಿ, ಉದಯಕುಮಾರ ಹೊನ್ನಳ್ಳಿ, ಪರಮಾನಂದ ಸರಸಂಬಿ ಸೇರಿ ಅನೇಕರು ಭಾಗವಹಿಸಿದ್ದರು.

Leave A Reply

Your email address will not be published.