ಆಳಂದ: ಮಹಿಳಾ ಶೌಚಾಲಯ ಸೇರಿದಂತೆ ಹಲವು ಜನಪರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಅವರು ಆಳಂದದಿAದ ಕಲಬುರಗಿವರೆಗೆ ಎರಡು ದಿನಗಳ ೫೦ ಕಿ.ಮೀ. ಪಾದಯಾತ್ರೆಗೆ ಗುರುವಾರ ಚಾಲನೆ ನೀಡಿದರು.
ಆಳಂದ: ಮಹಿಳೆಯರ ಶೌಚಾಲಯ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಾದಯಾತ್ರೆ ಆರಂಭಿಸಿದ ಮಹೇಶ್ವರಿ ವಾಲಿ ಅವರು ತಹಸೀಲ್ದಾರ್ ಅಣ್ಣಾರಾವ್ ಪಾಟೀಲ ಅವರ ಮೂಲಕ ಸರ್ಕಾರÀಕ್ಕೆ ಮನವಿ ಸಲ್ಲಿಸಿದರು.
ತುಂತುರು ಮಳೆಯನ್ನೂ ಲೆಕ್ಕಿಸದ ಮಹೇಶ್ವರಿ ವಾಲಿ ಹೋರಾಟ • ಬಸವಣ್ಣ–ಅಂಬೇಡ್ಕರ್ ಪ್ರತಿಮೆಗೆ ನಮನ • ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ •
ಮಾರ್ಗ ಮಧ್ಯೆಯೇ ವಿದ್ಯಾರ್ಥಿಗಳ ಬಸ್ ಸಮಸ್ಯೆಗೆ ಸ್ಪಂದ£
ೆ’ಘನತೆಗಾಗಿ ಹೆಜ್ಜೆ’: ಶೌಚಾಲಯ ಹಕ್ಕಿಗಾಗಿ
ಆಳಂದ: ಮಹಿಳೆಯರ ಘನತೆ, ಸುರಕ್ಷತೆ ಮತ್ತು ಮೂಲಭೂತ ಹಕ್ಕಿನ ಪ್ರಶ್ನೆಯನ್ನು ಸರ್ಕಾರದ ಅಂಗಳಕ್ಕೆ ತಲುಪಿಸುವ ಉದ್ದೇಶದಿಂದ ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಅವರು ಗುರುವಾರ ಆಳಂದದಿAದ ಕಲಬುರಗಿವರೆಗೆ ಸುಮಾರು ೫೦ ಕಿಲೋಮೀಟರ್ ಏಕವ್ಯಕ್ತಿ ಪಾದಯಾತ್ರೆ ಗುರುವಾರ ಆರಂಭಿಸಿ ಗಮನ ಸೆಳೆದರು.
ನಾಳೆ ಕಲಬುರಗಿಗೆ ತಲುಪುವ ಯಾತ್ರೆ ಜಿಪಂ ಸಿಇಒ ಹಾಗೂ ಜಿಲ್ಲಾಧಿಕಾರಿಗಳಿಗೆ ಭೇಟಿ ಮಾಡಿ ಜ್ವಲಂತ ಸಮಸ್ಯೆಗಳ ಬೇಡಿಕೆಯ ಪಟ್ಟಿಯನ್ನು ಬೆಂಬಲಿಗರೊAದಿಗೆ ಸಲ್ಲಿಸುವರಿದ್ದಾರೆ.
ಬೆಳಗಿನ ೧೧:೦೦ಗಂಟೆಯ ಸುಮಾರಿಗೆ ತುಂತುರು ಮಳೆಯ ನಡುವೆಯೂ ಆರಂಭವಾದ ಈ ಹೋರಾಟ ಕೇವಲ ರಾಜಕೀಯ ಕಾರ್ಯಕ್ರಮವಾಗಿರದೆ, ಗ್ರಾಮೀಣ ಮಹಿಳೆಯರ ದೈನಂದಿನ ಬದುಕಿನ ನೋವು, ಅವಮಾನ ಮತ್ತು ಮೂಲಸೌಲಭ್ಯಗಳ ಕೊರತೆಯನ್ನು ಎತ್ತಿ ಹಿಡಿದ ಜನಪರ ಚಳವಳಿಯಾಗಿ ಗಮನ ಸೆಳೆಯಿತು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಮಹಿಳೆಯರು ಕುಂಕುಮ–ಅರಿಶಿಣ ಹಚ್ಚಿ, ಹೂಮಾಲೆ ಹಾಗೂ ಶಾಲು ಹೊದಿಸಿ ಮಹೇಶ್ವರಿ ವಾಲಿ ಅವರಿಗೆ ಆತ್ಮೀಯ ಬೀಳ್ಕೊಡುಗೆ ನೀಡಿದರು. ಜೆಡಿಎಸ್ ಕಾರ್ಯಕರ್ತರು, ಮಹಿಳೆಯರು, ಯುವಕರು ಹಾಗೂ ವಿವಿಧ ಸಂಘಟನೆಗಳ ಸಮಾನ ಮನಸ್ಕರು ಪಕ್ಷಾತೀತವಾಗಿ ಬೆಂಬಲ ವ್ಯಕ್ತಪಡಿಸಿ ಬಸ್ ನಿಲ್ದಾಣದಿಂದ ತಾಲೂಕು ಆಡಳಿತ ಸೌಧದವರೆಗೆ ಸುಮಾರು ಏಳು ಕಿಲೋಮೀಟರ್ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಆಡಳಿತ ಸೌಧ ತಲುಪಿದ ಬಳಿಕ ಮಹೇಶ್ವರಿ ವಾಲಿ ಅವರು ಮೊದಲು ವಿಶ್ವಗುರು ಬಸವಣ್ಣ ಹಾಗೂ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಬಳಿಕ ತಹಸೀಲ್ದಾರ್ ಅಣ್ಣಾರಾವ್ ಪಾಟೀಲ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಶೌಚಾಲಯಗಳ ನಿರ್ಮಾಣ, ಈಗಿರುವ ಶೌಚಾಲಯಗಳಿಗೆ ನೀರು ಹಾಗೂ ಮೂಲಸೌಲಭ್ಯ ಒದಗಿಸುವುದು, ನಿರ್ವಾಹಣೆ ವ್ಯವಸ್ಥೆಯನ್ನು ಬಲಪಡಿಸುವುದು ಸೇರಿದಂತೆ ಮಹಿಳೆಯರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸರ‍್ಭದಲ್ಲಿ ಮಾತನಾಡಿದ ಮಹೇಶ್ವರಿ ವಾಲಿ, ಗ್ರಾಮೀಣ ಭಾಗದ ಸಾವಿರಾರು ಮಹಿಳೆಯರು ಇಂದಿಗೂ ಶೌಚಾಲಯದ ಕೊರತೆಯಿಂದ ಬಯಲಿನಲ್ಲಿ ಬಹಿರ್ದೇಸೆಗೆ ತೆರಳುವ ಅವಮಾನಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಮುಳ್ಳು-ಕಂಟೆಗಳು, ಕತ್ತಲೆ ಹಾಗೂ ಸುರಕ್ಷತೆಯ ಕೊರತೆಯ ನಡುವೆ ಬದುಕುವ ಮಹಿಳೆಯರ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಶೌಚಾಲಯ ನಿರ್ಮಾಣಕ್ಕೆ ಬಿಡುಗಡೆಯಾದ ಅನುದಾನ ಸಮರ್ಪಖವಾಗಿ ಬಳಕೆಯಾಗದೆ ಅನೇಕ ಕಡೆ ಕಾಮಗಾರಿಗಳು ಅಪೂರ್ಣವಾಗಿವೆ ಅಥವಾ ನಿರ್ವಹಣೆ ಕೊರತೆಯಿಂದ ಬಳಕೆಗೆ ಯೋಗ್ಯವಾಗಿಲ್ಲ. ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಮಹಿಳೆಯರ ಘನತೆಯನ್ನು ಕಾಪಾಡುವ ಉದ್ದೇಶದಿಂದಲೇ ಈ ಪಾದಯಾತ್ರೆ ಕೈಗೊಂಡಿದ್ದೇನೆ ಎಂದು ಹೇಳಿದರು.
ತಹಸೀಲ್ದಾರ್ ಕಚೇರಿಯಿಂದ ಮತ್ತೆ ಆರಂಭಗೊAಡ ಯಾತ್ರೆ ಕೊಡಲಹಂಗರ, ಲಾಡಚಿಂಚೋಳಿ, ಕಡಗಂಚಿ ಮಾರ್ಗವಾಗಿ ಕಲಬುರಗಿ ಕಡೆಗೆ ಸಾಗಿತು. ಇದೇ ವೇಳೆ ಆಡಳಿತ ಸೌಧದ ಬಳಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಬಸ್‌ಗಳ ಕೊರತೆಯಿಂದ ಎದುರಿಸುತ್ತಿರುವ ಸಮಸ್ಯೆಯನ್ನು ಮಹೇಶ್ವರಿ ವಾಲಿ ಅವರ ಗಮನಕ್ಕೆ ತಂದರು. ಕೂಡಲೇ ಸಂಬAಧಿಸಿದ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪಕಿಸಿದ ಅವರು, ಇವರ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವಂತೆ ಸೂಚನೆ ನೀಡಿದರು. ಪಾದಯಾತ್ರೆಯ ನಡುವೆಯೇ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದರಲ್ಲದೆ ಆಹ್ವಾಲುಗಳನ್ನು ಆಲಿಸುತ್ತಲೆ ಸಾಗಿದ ಈ ನಡೆ ಗಮನ ಸೆಳೆಯಿತು.
ಆರಂಭದಲ್ಲಿ ಪ್ರಭಾವತಿ ರವೀಂದ್ರ ಕೊರಳಿ ಅವರು ಪಾದಯಾತ್ರೆಗೆ ಚಾಲನೆ ನೀಡಿ ಶುಭ ಹಾರೈಸಿದರು. ನಂತರ ಮಾತನಾಡಿದ ಜ್ಯೋತಿ ಹಿರೇಮಠ, ಮಹಿಳೆಯರ ಗೌರವ ಮತ್ತು ಮೂಲಭೂತ ಹಕ್ಕುಗಳಿಗಾಗಿ ಮಹೇಶ್ವರಿ ವಾಲಿ ಅವರು ಕೈಗೊಂಡಿರುವ ಈ ಹೋರಾಟ ಜಿಲ್ಲೆಯಲ್ಲಿ ಮಾದರಿ ಚಳವಳಿಯಾಗಿ ದಾಖಲಾಗಲಿದೆ. ರಾಜಕೀಯದ ಮಿತಿಯನ್ನು ಮೀರಿ ಮಹಿಳೆಯರ ಧ್ವನಿಯಾಗಿ ಸರ್ಕಾರದ ಗಮನ ಸೆಳೆಯುವ ಈ ನಿರ್ಧಾಕರಕ್ಕೆ ಜಿಲ್ಲೆಯ ಮಹಿಳೆಯರು ವ್ಯಾಪಕ ಬೆಂಬಲ ನೀಡಲಿದ್ದಾರೆ ಎಂದು ಹೇಳಿದರು.
ಯಾತ್ರೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ರಫೀಕ್ ಇನಾಮದಾರ, ಗುರುಸ್ವಾಮಿ, ವೆಂಕಟೇಶ ರಾಠೋಡ, ಸೈಫಾನ್ ಪಟೇಲ್, ಸೈಯದ್ ಜಾಕೀರ್ ಅನೇಕರು ಮಾತನಾಡಿದರು.
ಸಂಗಮೇಶ ಸಜ್ಜನ್ ಸೇರಿದಂತೆ ಮಹಿಳೆಯರು, ವಿದ್ಯಾರ್ಥಿಗಳು, ಯುವಕರು ಹಾಗೂ ವಿವಿಧ ಸಂಘಟನೆಗಳ ಸಮಾನ ಮನಸ್ಕರು ಭಾಗವಹಿಸಿ ಬೆಂಬಲ ಸೂಚಿಸಿದರು.
ಮಹಿಳೆಯರ ಶೌಚಾಲಯದಂತಹ ಮೂಲಭೂತ ಸೌಲಭ್ಯಕ್ಕಾಗಿ ಒಬ್ಬ ಮಹಿಳಾ ನಾಯಕಿ ಸ್ವತಃ ೫೦ ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಸರ್ಕಾರದ ಗಮನ ಸೆಳೆಯಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದ್ದು, ಮಹಿಳೆಯರ ಘನತೆ ಮತ್ತು ಸುರಕ್ಷತೆಯ ಪ್ರಶ್ನೆಯನ್ನು ಮತ್ತೆ ಸಾರ್ವಜನಿಕ ಕೇಂದ್ರಬಿAದುವಾಗಿಸಿದೆ. ಈ ಹಿನ್ನೆಲೆಯಲ್ಲಿ ಯಾತ್ರೆಗೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕಲ್ಪಿಸಿತ್ತು.
ಒಟ್ಟಾರೆ, ಮಹೇಶ್ವರಿ ವಾಲಿ ಅವರ ಈ ಪಾದಯಾತ್ರೆ ಕೇವಲ ಪ್ರತಿಭಟನೆಯಾಗಿ ಉಳಿಯದೆ, ಗ್ರಾಮೀಣ ಮಹಿಳೆಯರ ಮೂಲಭೂತ ಹಕ್ಕು, ಗೌರವ ಮತ್ತು ಸುರಕ್ಷತೆಗಾಗಿ ಸರ್ಕರ ಉತ್ತರದಾಯಿತ್ವಕ್ಕೆ ಒಳಪಡಿಸುವ ಜನಪರ ಚಳವಳಿಯಾಗಿ ರೂಪುಗೊಳ್ಳುತ್ತಿರುವುದು ಗಮನ ಸೆಳೆದಿದೆ.