ಶರಣ ಮಂಟಪದಲ್ಲಿ ಅ. ೯ರಂದು ೧೫೦೦ ಮಹಿಳೆಯರಿಗೆ ಉಡಿತುಂಬುವ ಕಾರ್ಯ ಜಪಯಜ್ಞದಿಂದ ಮಾನಸಿಕ ಶಾಂತಿ, ದೋಷ ನಿವಾರಣೆ ಸಾಧ್ಯ: ಶ್ರೀ ಮಹಾಂತಲಿAಗ ಶಿವಾಚಾರ್ಯ
ಆಳಂದ: ಪಟ್ಟಣದ ಶರಣ ಮಂಟಪದಲ್ಲಿ ಹಮ್ಮಿಕೊಂಡ ಜಪಯಜ್ಞ ಕಾರ್ಯಕ್ರಮದಲ್ಲಿ ಶ್ರೀ ಮಹಾಂತಲಿAಗ ಶಿವಾಚಾರ್ಯÀರನ್ನು ಮಂಟಪದ ಶ್ರೀ ಚನ್ನಬಸವ ಪಟ್ಟದೇವರು ಹಾಗೂ ಕಮೀಟಿಯ ಪ್ರಮುಖರ ಗೌರವ ಸನ್ಮಾನ ನೀಡಿದರು.
ಆಳಂದ: ಬ್ರಹ್ಮೀ ಮುಹೂರ್ತದಲ್ಲಿ ಮಾಡುವ ಜಪದಿಂದ ಮನಸ್ಸಿಗೆ ಶಾಂತಿ ಲಭಿಸುವುದರ ಜೊತೆಗೆ ಜೀವನದಲ್ಲಿನ ಅನೇಕ ದೋಷಗಳು ನಿವಾರಣೆಯಾಗುತ್ತವೆ. ಜಪವು ವ್ಯಕ್ತಿಯ ಬದುಕಿನಲ್ಲಿ ಸರಳತೆ, ಆತ್ಮವಿಶ್ವಾಸ ಹಾಗೂ ಆಧ್ಯಾತ್ಮಿಕ ಪರಿವರ್ತನೆಯನ್ನು ಉಂಟುಮಾಡುವ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರು.
ಪಟ್ಟಣದ ಶರಣನಗರದ ಶರಣ ಮಂಟಪದಲ್ಲಿ ಆಶಾಡ ಮಾಸದ ೨೦ನೇ ವರ್ಷದ ವರ್ಷಗಳಿಂದ ನಡೆಯುತ್ತಿರುವ ೨೦ ದಿನಗಳ ಜಪಯಜ್ಞ ಮಹೋತ್ಸವದ ಗುರುವಾರ ನಸುಕಿನ ಜಾವ ನಡೆದ ಜಪಯಜ್ಞ ಸಮಾರಂಭದಲ್ಲಿ ಆಗಮಿಸಿದ್ದ ಪೂಜ್ಯ ಶ್ರೀ ಮಹಾಂತಲಿAಗ ಶಿವಾಚಾರ್ಯರು ಗೌರವ ಸನ್ಮಾನ ಸ್ವೀಕರಿಸಿ ಆಶೀರ್ವಚನ ನೀಡಿದರು.
ಶರಣ ಮಂಟಪದ ಶ್ರೀ ಚನ್ನಬಸವ ಪಟ್ಟದೇವರು ಕಿರಿಯ ವಯಸ್ಸಿನಲ್ಲಿಯೇ ಸಿದ್ಧರೂಢರು ಹಾಗೂ ಚಿಕ್ಕರೇವಣಸಿದ್ಧ ಶಿವಶರಣರ ತತ್ವ-ಆದರ್ಶಗಳನ್ನು ಜನರಲ್ಲಿ ಬಿತ್ತುವ ಮೂಲಕ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿರುವುದು ಶ್ಲಾಘನೀಯವಾಗಿದೆ. ಭಕ್ತರು ಸಹ ಇಂತಹ ಧಾರ್ಮಿಕ ಕಾರ್ಯಗಳಿಗೆ ಸಹಕಾರ ನೀಡುವ ಮೂಲಕ ತಮ್ಮ ಜೀವನವನ್ನು ಪವಿತ್ರಗೊಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶರಣ ಮಂಟಪದ ಶ್ರೀ ಚನ್ನಬಸವ ಪಟ್ಟದೇವರು ಮಾತನಾಡಿ, ಜಪಯಜ್ಞದ ಮಹತ್ವವನ್ನು ವಿವರಿಸಿದರು. ಜಪಯಜ್ಞದ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಧಾರ್ಮಿಕ ಮೌಲ್ಯಗಳ ಬೆಳವಣಿಗೆಗೆ ಉತ್ತೇಜನ ಸಿಗುತ್ತಿದೆ ಎಂದು ಹೇಳಿದರು.
ಸಮಾರಂಭಕ್ಕೂ ಮುನ್ನ ಭಕ್ತರ ಸಮ್ಮುಖದಲ್ಲಿ ಜಪಯಜ್ಞ ವಿಧಿವತ್ತಾಗಿ ನೆರವೇರಿತು. ಬಳಿಕ ಶ್ರೀ ಮಹಾಂತಲಿAಗ ಶಿವಾಚಾರ್ಯರನ್ನು ಶ್ರೀ ಚನ್ನಬಸವ ಪಟ್ಟದೇವರು ಹಾಗೂ ಪಂಚಕಮೀಟಿಯ ಭಕ್ತರು ಗೌರವ ಸನ್ಮಾನ ಮಾಡಿ ಆಶೀರ್ವಾದ ಪಡೆದರು.
ಜಪಯಜ್ಞದ ಸಮಾರೋಪ ಸಮಾರಂಭವು ಆಗಸ್ಟ್ ೯ರಂದು ನಡೆಯಲಿದ್ದು, ಅಂದು ಮಹಾಮಂಗಲ ಕಾರ್ಯಕ್ರಮದೊಂದಿಗೆ ೧,೫೦೦ ಮಹಿಳೆಯರಿಗೆ ಉಡಿತುಂಬುವ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಶಶಿಕಲಾ ಮುನ್ನೊಳ್ಳಿ, ಲಿಂಗಮ್ಮ ದುದಗಿ, ಕಾಂತಾಬಾಯಿ ಜಗದೆ, ಶರಣಮ್ಮ ಕಳಸೆ, ಮಲ್ಲಮ್ಮ ಗುಳೆದಗುಡ್ಡ,ರಾಜೇಶ್ವರಿ ಸನ್ಮೂಖ, ಧಾನಮ್ಮ ಕಿಣಗಿ, ನಾಗಮ್ಮ ಯಲ್ದೆ, ಸೂರೆಖಾ ಮಸೂಂದೆ, ಅಂಬವ್ವ ಅಟಗಿ, ಪಾರ್ವತಿ ಇಟಾಮಳೆ, ಜೋತಿ ಜುಳಜುಳೆ, ಶರಣಮ್ಮ ಮಾಡಿಯಾಳ, ಶ್ರೀದೇವಿ ಡಬರೆ, ಕಮೀಟಿ ಅಧ್ಯಕ್ಷ ಸೂರ್ಯಕಾಂತ ತಟ್ಟಿ, ಕಾರ್ಯದರ್ಶಿ ಶ್ರೀಶೈಲ ಉಳ್ಳೆ, ಖಜಾಂಚಿ ಭೀಮಣ್ಣ ಶಟ್ಟಗುಂಡೆ, ಡಾ. ಸಿದ್ಧರಾಮ ತಟ್ಟಿ, ರಾಜಶೇಖರ ಕೆ. ತಟ್ಟಿ, ವೀರಭದ್ರ ದುದಗಿ, ಕಾಂತಯ್ಯ ಸ್ವಾಮಿ ಗುಳೆದಗುಡ್ಡ ಅನೇಕರು ಉಪಸ್ಥಿತರಿದ್ದರು.