ಆಳಂದ: ಹಲವು ಬೇಡಿಕೆಗೆ ಒತ್ತಾಯಿಸಿ ರುದ್ರವಾಡಿ ಗ್ರಾಪಂ ಮುಂದೆ ಗ್ರಾಮದ ಚಂದ್ರಕಾAತ ಖೋಬ್ರೆ ನೇತೃತ್ವದಲ್ಲಿ ಸಿಪಿಐ ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಪ್ರಭುದೇವ ಯಳಸಂಗಿ, ಖಜಾಂಚಿ ಭೀಮಾಶಂಕರ ಮಾಡಿಯಾಳ, ರಾಜ್ಯ ಮಂಡಳಿ ಸದಸ್ಯ ಮೌಲಾ ಮುಲ್ಲಾ, ಮತ್ತಿತರು ಪ್ರತಿಭಟನೆ ನಡೆಸಿದರು.
ಆಳಂದ: ಭಾರತ ಕಮೂನಿಷ್ಟ್ ಪಕ್ಷದ ರಾಷ್ಟಿçÃಯ ಮಂಡಳಿಯ ಕರೆಯ ಮೆರೆಗೆ ರಾಷ್ಟç ರಾಜಕೀಯ ಬದಲಾವಣೆ ಅಭಿಯಾನದ ಅಂಗವಾಗಿ ಪಾದಯಾತ್ರೆ ಪಾದಯಾತ್ರೆ ಪ್ರಾರಂಭಿಸಿ ಮೊದಲು ದಿನ ತಾಲೂಕು ಬಂಗರಗಾನಿAದ ರುದ್ರವಾಡಿ ವರೆಗೆ ೩ ಕಿ.ಮೀ ವರೆಗೆ ಪಾದಯಾತ್ರೆಯ ಮೂಲಕ ತೆರಳಿ ಬಳಿಕ ರುದ್ರವಾಡಿ ಗ್ರಾಪಂ ಮುಂದೆ ಗ್ರಾಮದ ಹಿರಿಯ ಮುಖಂಡ ಚಂದ್ರಕಾAತ ಖೋಬ್ರೆ ಅವರ ನೇತೃತ್ವದಲ್ಲಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಗ್ರಾಪಂ ಮುಂದೆ ಪ್ರತಿಭಟನಾ ಧರಣಿ ನಡೆಸಿ ಬೇಡಿಕೆ ಒತ್ತಾಯಿಸಲಾಯಿತು.
ದಿನ ಬಳಕೆ ವಸ್ತುಗಳ ಬೆಲೆ ನಿಲ್ಲಬೇಕು. ಯುವಕರಿಗೆ ಉದ್ಯೋಗ ಕಲ್ಪಿಸಬೇಕು.ಸಾರ್ವತ್ರಿಕ ಆರೋಗ್ಯ ಮತ್ತು ಶಿಕ್ಷಣ ಗುಣಮಟ್ಟದ ಒದಗಿಸಬೇಕು. ಮಹಿಳಾ ಮೀಸಲಾತಿ, ಕಾರ್ಮಿಕ ಹಕ್ಕುಗಳ ರಕ್ಷಣೆ, ಇವಿಎಂ ಹಟಾವೋ ಮಾಡಿ ಮತಮತದ ಮೂಲಕ ಚುನಾಣೆ ನಡೆಸಿ ಪ್ರಜಾಪ್ರಭುತ್ವ ಉಳಿಸಬೇಕು. ಕನಿಷ್ಠ ಬೆಂಬಲ ಬೆಲೆ ಕಾನೂನಾತ್ಮಕ ಭರವಸೆ ನೀಡಬೇಕ. ದಲಿತ, ಆದಿವಾಸಿಗಳ ಮೇಲಿನ ದಬ್ಬಾಳಿಕೆ ಅಂತ್ಯಗೊಳಿಸುವ ಉದ್ದೇಶದಿಂಧ ಗ್ರಾಮ ಪಂಚಾಯತ್ ಮಟ್ಟದವರೆಗೆ ಪಾದಯಾತ್ರೆ ನಡೆಸಿ ಸೆ.೧ರಂದು ದೆಹಲಿಯ ರಾಮಲೀಲಾ ಮೈದಾನ ಚಲೋ ಅಭಿಯಾನದಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಮುಖಂಡರು ಕರೆ ನೀಡಿದರು.
ಸ್ಥಳೀಯ ಬೇಡಿಕೆ ಒತ್ತಾಯಿಸಿದ ಮುಖಂಡರು, ಸಾರ್ವಜನಿಕ ಶೌಚಾಲಯ ನಿರ್ಮಿಸಿ ಬಳಕೆ ಅನುಕೂಲ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ಖಾಲಿ ಶಿಕ್ಷಕ ಹುದ್ದೆ ಭರ್ತಿಮಾಡಬೇಕು. ನಿಂತ್ತಿರುವ ವೃದ್ಧಾಪ ವೇತನ ಬಿಡುಗಡೆಗಡೆ ಸೇರಿ ಸ್ಥಳೀಯ ಮಟ್ಟದ ಮೂಲಸೌಕರ್ಯಗಳ ಬೇಡಿಕೆಗೆ ಒತ್ತಾಯಿಸಿ ಗ್ರಾಪಂ ಕಾರ್ಯದರ್ಶಿ ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಪ್ರಭುದೇವ ಯಳಸಂಗಿ, ಜಿಲ್ಲಾ ಮಂಡಳಿ ಖಜಾಂಚಿ ಭೀಮಾಶಂಕರ ಮಾಡಿಯಾಳ, ರಾಜ್ಯ ಮಂಡಳಿ ಸದಸ್ಯ ಮೌಲಾ ಮುಲ್ಲಾ, ತಾಲೂಕು ಕಾರ್ಯದರ್ಶಿ ಆಸ್ಪಕ್ ಮುಲ್ಲಾ, ಕಿಸಾನಸಭಾ ತಾಲೂಕು ಅಧ್ಯಕ್ಷ ಧರ್ಮಣ್ಣಾ ಪೂಜಾರಿ, ಗೌರವ ಅಧ್ಯಕ್ಷ ಚಂದ್ರಕಾAತ ಖೋಬ್ರೆ, ಉಪಾಧ್ಯಕ್ಷ ಮಹಾದೇವ ಪೂಜಾರಿ ಮಂಟಗಿ, ಸಿಪಿಐ ಕಲಬುರಗಿ ನಗರ ಕಾರ್ಯದರ್ಶಿ ಸಾಜೀದ ಅಹ್ಮದ್, ರುದ್ರವಾಡಿಯ ಲಕ್ಷಿö್ಮÃಂಬಾಯಿ, ಕಾರ್ಮಿಕ ಸಂಘಟನೆಯ ಕಲ್ಯಾಣಿ ತುಕಾಣಿ ಸೇರಿ ಗ್ರಾಮದ ಪ್ರಮುಖರು ಭಾಗವಹಿಸಿದ್ದರು.
ಅ.೭ರಂದ ಕಣ್ಮಸ್‌ನಿಂದ ತಡಕಲ್ ವರೆಗೆ ಪಾದಯಾತ್ರೆ ನಡೆಸಿ ಅಲ್ಲಿನ ಬೇಡಿಕೆಗೆ ಒತ್ತಾಯಿಸಿ ಧರಣಿ ನಡೆಯಲಿದೆ.