ಆಳಂದ ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡ, ತಾ.ಪಂ ಸದಸ್ಯೆ ಮಹಾದೇವಿ ಘಂಟೆಯವರ ಪತಿ ಚಂದ್ರಾಮಪ್ಪ ಘಂಟೆ (68) ರವಿವಾರ ಅಕಾಲಿಕ ನಿಧನ ಹೊಂದಿದರು.
ಮೃತರು ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಸ್ವಗ್ರಾಮ ದರ್ಗಾಶಿರೂರ ಗ್ರಾಮದ ಅವರ ಸ್ವಂತ ತೋಟದಲ್ಲಿ ನೇರವೇರಿತು.
ಸಂತಾಪ: ಚಂದ್ರಾಮಪ್ಪ ಘಂಟೆಯವರ ನಿಧನಕ್ಕೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ, ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ, ಮುಖಂಡರಾದ ಆನಂದರಾವ ಪಾಟೀಲ ಕೊರಳ್ಳಿ, ರಾಜಶೇಖರ ಮಲಶೆಟ್ಟಿ, ಅಶೋಕ ಗುತ್ತೇದಾರ, ಮಲ್ಲಿನಾಥ ಪರೇಣಿ, ಮಲ್ಲಿಕಾರ್ಜುನ ಕಂದಗೂಳೆ, ಗುರುಶಾಂತ ಪಾಟೀಲ ನಿಂಬಾಳ ಸೇರಿದಂತೆ ಇತರರು ಸಂತಾಪ ವ್ಯಕ್ತಪಡಿಸಿದ್ದಾರೆ.
Prev Post