ಕಲಬುರಗಿ: ಸುಮಾರು 30 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಉತ್ತಮ ಸಾಮಾಜೀಕ ಕಾರ್ಯಮಾಡಿದ ವಯೋನಿವೃತ್ತಿಯ ಜೀವನದ ಕುಟುಂಬದ ಜೀವನ ಸುಖಕರವಾಗಿ ಸಾಗಲಿ ಎಂದು ಕಮಾಡೆಂಟ್ ಆರನೇ ಪಡೆಯ ಕೆಎಸ್ಆರ್ಪಿಯ ಎನ್. ಎಸ್. ಪ್ರಕಾಶ ಕಲಬುರಗಿ ಹೇಳಿದರು.
ಕಲಬುರಗಿ ನಗರದ ಸಮೀಪದ ತಾಜಸುಲ್ತಾನಪುರ ಗ್ರಾಮದಲ್ಲಿರುವ ಕೆಎಸ್ಆರ್ಪಿಯ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಯೋನಿವೃತ್ತಿಯ ಬೀಳಕೊಡುಗೆಯ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು.ಈ ನಮ್ಮ ಪೊಲೀಸ್ ಇಲಾಖೆಯಲ್ಲಿ ಮೂರು ಜನ ವಯೋನಿವೃತ್ತಿಯಾಗಿದ್ದ ಸುಭಾಸ ನಾಗಪ್ಪ ಬನ್ನೂರಕರ್, ಎಂ. ಡಿ ರಹೀಮ, ನಾಗೇಶ ದಾಸಾ, ಅವರು ಸೇರಿ ಮೂರು ಜನ ನಮ್ಮ ಇಲಾಖೆಯಲ್ಲಿ ಸುಮಾರು 30 ವರ್ಷಗಳ ಕಾಲ ಉತ್ತಮ ಸೇವೆ ಮಾಡಿದ್ದಾರೆ, ಅವರು ಮಾಡಿದ ಕಾರ್ಯಕ್ಕೆ ಕುಟುಂಬದ ಜೀವನ ಸುಖಕರವಾಗಿ ಸಾಗಬೇಕು ಎಂದು ಅವರು ಶುಭ ಹಾರೈಸಿದರು.
ನಂತರ ಮೂರು ಜನ ವಯೋನಿವೃತ್ತಿಯಾಗಿದ್ದವರಿಗೆ ಕುಟುಂಬದ ಸಮೆತ ಇಲಾಖೆ ಸನ್ಮಾನಿಸಿ ಗೌರವಿಸಿದರು.
ಈ ಸಮಾರಂಭದಲ್ಲಿ ಡೆಪುಟಿ ಕಮಾಂಡೊ ಚನ್ನಬಸವ, ಸಹಾಯಕ ಅಧಿಕಾರಿ ಸುರೇಶ ಕಮಲಾಪುರ, ಆರ್.ಕೆ ವಿಜಯಕುಮಾರ ಆರ್.ದತ್ತಾತ್ತ್ರೇಯ,ನಾಗರಾಜ ಕುಂಬಾರ,ಶ್ರೀಕಾಂತ ಚವ್ಹಾಣ,ನಿವೃತ ಪಿಎಸ್ಐ ಶ್ರೀಮಂತ ಸೌದುರ್ಗೆ, ಚಂದ್ರಕಾಂತ ಬಿರಾದಾರ, ಆನಂದ ಪೂಜಾರಿ ಬನ್ನೂರ,ಅಂಬಾರಾಯ ಆಲಗೂಡ,ಪ್ರಶಾಂತ ಸೌದುರ್ಗೆ, ಶಿವರಾಜ ಬಿರಾದಾರ, ಜಗದೀಶ ಪಾಟೀಲ್ ಸುಲ್ತಾನಪುರ ಸೇರಿದಂತೆ ಮತ್ತಿತರರು ಇದ್ದರು.