“ಮೊದಲು ನಾವು ಭಾರತೀಯರು, ಕರ್ನಾಟಕ-ಮಹಾರಾಷ್ಟç ಬಾಂಧವ್ಯಕ್ಕೆ ಧಕ್ಕೆ ಸಲ್ಲ” ಜಲ, ಭಾಷಾ ವಿವಾದಗಳ ನಡುವೆಯೂ ಸಹೋದರ ಭಾವ ಅಬಾಧಿತ ಎಂಎಲ್‌ಸಿ ಬಸವರಾಜ ಪಾಟೀಲ್ ಸ್ಪಷ್ಟನೆ
ಆಳಂದ: ಪಟ್ಟಣದ ತಮ್ಮ ನಿವಾಸಕ್ಕೆ ಆಗಮಿಸಿದ್ದ ಮಹಾರಾಷ್ಟç ಬಿಜೆಪಿ ನೂತನ ಎಂಎಲ್‌ಸಿ ಬಸವರಾಜ ಪಾಟೀಲ ಮುರುಮ್ ಅವರನ್ನು ಕುಟುಂಬದ ಹಿರಿಯ ಸದಸ್ಯ ವಿಠ್ಠಲರಾವ್ ಪಾಟೀಲ ಸೇರಿ ಅಭಿಮಾನಿಗಳು ಸ್ವಾಗತಿಸಿ ಸನ್ಮಾನಿಸಿದರು.
ಆಳಂದ: ಮಹಾರಾಷ್ಟç ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಬಸವರಾಜ ಪಾಟೀಲ ಅವರು ಎಂಎಲ್‌ಸಿಯಾಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ಆಳಂದ ಪಟ್ಟಣದ ತಮ್ಮ ಕುಟುಂಬಸ್ಥರ ನಿವಾಸಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ-ಮಹಾರಾಷ್ಟç ನಡುವಿನ ಭಾಷೆ ಮತ್ತು ಜಲ ವಿವಾದಗಳ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸಿದರು.
“ಮೊದಲು ಭಾರತೀಯರು” ಎಂಬ ಸಂದೇಶ:
“ಕರ್ನಾಟಕ-ಮಹಾರಾಷ್ಟç ಭಾಷೆ ಮತ್ತು ಜಲವಿವಾದ ಯಾವುದೂ ಸಲ್ಲದು. ನಾವು ಮೊದಲು ಭಾರತೀಯರು ಎಂಬ ಭಾವನೆಯೊಂದಿಗೆ ಸಾಗಬೇಕಾಗಿದೆ. ಎರಡೂ ರಾಜ್ಯಗಳ ಬಾಂಧವ್ಯವನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ” ಎಂದು ಪಾಟೀಲ ಹೇಳಿದರು.
ತಮ್ಮ ಕುಟುಂಬದ ಬೇರುಗಳು ಆಳಂದದಲ್ಲಿವೆ ಎಂದು ಭಾವುಕರಾದ ಅವರು, “ನಮ್ಮ ಪೂರ್ವಜರು ಇಲ್ಲಿದ್ದರು. ಈಗಲೂ ನಮ್ಮ ಸಂಬAಧಿಕರು ಇಲ್ಲಿದ್ದಾರೆ. ನಾವು ಬಂದಾಗೊಮ್ಮೆ ಇಲ್ಲಿನ ಜನರು ತೋರುವ ಪ್ರೀತಿ ವಿಶ್ವಾಸವನ್ನು ಎಂದಿಗೂ ಮರೆಯಲಾಗದು” ಎಂದು ನುಡಿದರು.
ಕೇಂದ್ರ, ರಾಜ್ಯ ಸರ್ಕಾರಗಳ ಆಡಳಿತ ಶ್ಲಾಘನೆ:
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮಹಾರಾಷ್ಟç ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ನೇತೃತ್ವದಲ್ಲಿ ಉತ್ತಮ ಆಡಳಿತ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟ ಪಾಟೀಲ, ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲೂ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು. “ಬಿಜೆಪಿಯೊಂದಿಗೆ ಇರುವುದೇ ದೇಶದ ಪ್ರಗತಿಗೆ ದಾರಿ ಎಂದು ನಾನೊಬ್ಬ ಶಾಸಕನಾಗಿ ಹೇಳುತ್ತಿದ್ದೇನೆ” ಎಂದರು.
ಮಹಾರಾಷ್ಟçದ ವಾಣಿಜ್ಯೀಕರಣಕ್ಕೆ ಅನ್ಯಾಯವಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ದೊಡ್ಡ ದೊಡ್ಡ ಕಂಪನಿಗಳು, ಉದ್ಯಮಗಳು ಸ್ಥಾಪನೆಯಾಗುತ್ತಿದ್ದು, ಮಹಾರಾಷ್ಟç ಕೈಗಾರಿಕಾ ರಂಗದಲ್ಲಿ ಬಲಿಷ್ಠವಾಗಿ ಬೆಳೆಯುತ್ತಿದೆಯೇ ಹೊರತು ಅನ್ಯಾಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಯುವ ಸಮುದಾಯಕ್ಕೆ ಆಶ್ವಾಸನೆ, ನೀಟ್ ವಿವಾದದ ಬಗ್ಗೆ ಸಮರ್ಥನೆ
ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ಸರ್ಕಾರಗಳು ಯುವಕರ ಭವಿಷ್ಯಕ್ಕಾಗಿ ಶ್ರಮಿಸುತ್ತಿವೆ ಎಂದು ಹೇಳಿದ ಪಾಟೀಲ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿದರು. “ಕೇಂದ್ರ ಸರ್ಕಾರ ಉತ್ತಮ ನಿರ್ಣಯ ತೆಗೆದುಕೊಂಡಿದೆ. ಸಂಸತ್ತಿನಲ್ಲಿ ಉತ್ತಮ ಚರ್ಚೆ ನಡೆಯುತ್ತಿದ್ದು, ಸೂಕ್ತ ಕಾಯ್ದೆ ರೂಪಿಸಲಾಗುತ್ತಿದೆ. ಶಿಕ್ಷಣ ಕ್ಷೇತ್ರದ ವಿಷಯದಲ್ಲಿ ಸರ್ಕಾರ ಜಾಗೃತವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಬಗ್ಗೆ ಗಂಭೀರವಾಗಿದೆ” ಎಂದು ವಿವರಿಸಿದರು.
ರೈತರ ಸಾಲಮನ್ನಾ: ಐತಿಹಾಸಿಕ ನಿರ್ಣಯ
ಮಹಾರಾಷ್ಟç ಸರ್ಕಾರ ರೈತರ ಪರವಾಗಿ ೩೫ ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಿರುವುದು ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಆಗಿರುವ ಬೃಹತ್ ನಿರ್ಣಯ ಎಂದು ಪಾಟೀಲ ಬಣ್ಣಿಸಿದರು. ಈ ಕ್ರಮದಿಂದ ಮಹಾರಾಷ್ಟçದ ಸಮಸ್ತ ರೈತರಿಗೂ ಅನುಕೂಲವಾಗಿದೆ ಎಂದು ಅವರು ಹೇಳಿದರು.
ಪಾಟೀಲರ ಸಹೋದರ ಆಗಿರುವ ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ, ಪುತ್ರ ನ್ಯಾಯವಾದಿ ಬಿ.ವಿ.ಪಾಟೀಲ, ಚನ್ನಬಸವ ಪಾಟೀಲ, ಬಿಜೆಪಿ ಜಿಲ್ಲಾ ವಕ್ತಾರ ಸಂಜಯ ಮಿಸ್ಕಿನ್, ಮಹೇಶ ಸೂರೆ, ಶರಣಗೌಡ ಪಾಟೀಲ, ಪಿಎಲ್‌ಡಿ ಮಾಜಿ ಅಧ್ಯಕ್ಷ ಹಣಮಂತ ಕಾಬಡೆ, ನಿಜಲಿಂಗಪ್ಪ ಕೊರಳ್ಳಿ, ಸಂಜಯ ನಾಯಕ, ಡಾ. ಸಾಗರ ಕಟಂಬಲೆ, ಉದ್ಯಮಿ ವಿಶಾಲ ಗಾಂಧಿ, ಡಾ. ಯೋಗೇಶ ಬಂಡಗಾರ, ಮಾಣಿಕ ಜಾಧವ, ಪುರಸಭೆ ಮಾಜಿ ಅಧ್ಯಕ್ಷ ಅಮ್ಜದ್ ಅಲಿ ಖಜರ್ಗಿ, ಮುಸ್ತಾಫ್, ಸೇರಿದಂತೆ ಮುಸ್ಲಿಂ ಮುಖಂಡರು ಒಳಗೊಂಡು ವಿವಿಧ ಸಮುದಾಯದ ನಾಗರಿಕರು ಪಾಟೀಲ ಅವರನ್ನು ಸನ್ಮಾನಿಸಿದರು.