Shubhashaya News

ಕಮಲಾನಗರ ಶಾಲೆಯಲ್ಲಿ ವನ ಮಹೋತ್ಸವ ಮಹಾಘನಿ ಸಸಿಗಳ ವಿತರಣೆ

ಅಳಂದ: ಕಮಲಾನಗರ ಸರ್ಕಾರಿ ಶಾಲಾ ಆವರಣದಲ್ಲಿ ನಡೆದ ವನಮೋತ್ಸವ ಆಚರಣೆ ಅಂಗವಾಗಿ ಮಲ್ಲಿನಾಥ ಹೇಮಾಡಿ, ಆನಂದ ಎಸ್. ಬಿರಾದಾರ, ಪಿಡಿಒ ವಿಜಯ ಸನದಿ, ಶರಣಬಸಪ್ಪ ಕೆ ಮತ್ತಿತರರು ಇದ್ದರು.

ಆಳಂದ: ಪರಿಸರ ಸಂರಕ್ಷಣೆ ಹಾಗೂ ಹಸಿರು ಭವಿಷ್ಯದ ನಿರ್ಮಾಣದ ಸಂಕಲ್ಪದೊAದಿಗೆ ತಾಲೂಕಿನ ಕಮಲಾನಗರ ಸರ್ಕಾರಿ ಶಾಲೆಯ ಆವರಣದಲ್ಲಿ ಪುಣ್ಯಕೋಟಿ ರೈತ ಉತ್ಪಾದಕ ಸಂಸ್ಥೆ ಬೆಂಗಳೂರು, ವಲಯ ಅರಣ್ಯ ಇಲಾಖೆ ಆಳಂದ, ನವ ನಿರ್ಮಾಣ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಬೀದರ ಹಾಗೂ ಗ್ರಾಮ ಪಂಚಾಯಿತಿ ಕಮಲಾನಗರ ಆಶ್ರಯದಲ್ಲಿ ‘ವನ ಮಹೋತ್ಸವ ನಡೆಯಿತು.
ಕಮಲಾನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮಲಾನಗರ, ಕರಹರಿ, ಸಾವಳಗಿ ಹಾಗೂ ಬೆಟ್ಟಜೇವರ್ಗಿ ಸರ್ಕಾರಿ ಶಾಲೆಗಳಿಗೆ ಒಟ್ಟು ೧೦೦ ಮಹಾಘನಿ ಸಸಿಗಳನ್ನು ವಿತರಿಸಿ, ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಲಾಯಿತು.
ಮುಖ್ಯ ಅತಿಥಿ ಮಲ್ಲಿನಾಥ ಹೇಮಾಡಿ ಮಾತನಾಡಿ, ಸಾವಯವ ಕೃಷಿ, ರಾಸಾಯನಿಕ ಕೃಷಿ, ಶೂನ್ಯ ಬಂಡವಾಳ ಕೃಷಿ, ಅರಣ್ಯ ಕೃಷಿ ಹಾಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ವಿವರಿಸಿದರು. ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಮೂಲಕ ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಉಳಿಸಿಕೊಡಬೇಕು ಎಂದು ಕರೆ ನೀಡಿದರು.
ಪುಣ್ಯಕೋಟಿ ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕ ಶರಣಬಸಪ್ಪ ಕೆ. ಮಾತನಾಡಿ, ಮರಗಳು ಜೀವಜಗತ್ತಿನ ಉಸಿರಾಗಿದ್ದು, ಪರಿಸರ ಸಮತೋಲನ ಕಾಪಾಡಲು ಪ್ರತಿಯೊಬ್ಬ ನಾಗರಿಕರೂ ಸಕ್ರಿಯವಾಗಿ ಕೈಜೋಡಿಸಬೇಕೆಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯ ಸನದಿ ಅವರು ಗ್ರಾಮ ಪಂಚಾಯಿತಿಯಿAದ ಸಾರ್ವಜನಿಕರಿಗೆ ದೊರೆಯುವ ವಿವಿಧ ಸರ್ಕಾರಿ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ನೀಡಿ, ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲು ಪಂಚಾಯಿತಿ ಸದಾ ಬದ್ಧವಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವನ್ನು ಆನಂದ ಎಸ್. ಬಿರಾದಾರ ನೆರವೇರಿಸಿ, ರೈತರಿಗೆ ವಿವಿಧ ಸರ್ಕಾರಿ ಇಲಾಖೆಗಳ ಮೂಲಕ ದೊರೆಯುವ ಸಹಾಯಧನ, ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಪುಣ್ಯಕೋಟಿ ರೈತ ಉತ್ಪಾದಕ ಸಂಸ್ಥೆಯು ರೈತರು, ವಿದ್ಯಾರ್ಥಿಗಳು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಅಗತ್ಯವಾದ ಮಾರ್ಗದರ್ಶನ ಹಾಗೂ ಸಹಕಾರ ನೀಡಲು ಸದಾ ಸಿದ್ಧವಾಗಿದೆ ಎಂದು ತಿಳಿಸಿದರು.
ಪುಣ್ಯಕೋಟಿ ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕ ಸಂತೋಷ, ರಾಚಣ್ಣ ಹಾಗೂ ಶಿವ, ಗುಂಡೆರಾಯ, ಪ್ರಶಾಂತ್ ಪಾಟೀಲ, ಗುರು ಪಂಚಾಳ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ವಿಕಾಸ್ ಶೆಟ್ಟಿ, ಗುರು ಹಾಗೂ ಮಲ್ಲಿನಾಥ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Leave A Reply

Your email address will not be published.