Shubhashaya News

ಬೆಳೆ ವಿಮೆ ಅವಧಿ ವಿಸ್ತರಣೆ ಕರವೇ ಆಗ್ರಹ

ಮುಂಗಾರು ಹಂಗಾಮಿನ ಬೆಳೆ ವಿಮೆ ಅವಧಿ ವಿಸ್ತರಿಸಬೇಕು ಎಂದು ಕರವೇ(ಪ್ರವೀಣ ಶೆಟ್ಟಿ) ಬಣದ ಕಲಬುರಗಿ ತಾಲೂಕು ಅಧ್ಯಕ್ಷ ವಿಜಯಕುಮಾರ ಅಂಕಲಗಿ ಅವರು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,”ಸರಕಾರ ಜು.31 ರಂದು ವಿಮೆ ತುಂಬುವುದಕ್ಕೆ ಕೊನೆಯ ದಿನಾಂಕ ನಿಗದಿಪಡಿಸಿದೆ. ಸರ್ವರ್ ಸಮಸ್ಯೆಯಿಂದ ರೈತರು ವಿಮೆ ಕಂತು ತುಂಬುವುದು ವಿಳಂಬವಾಗುತ್ತಿದೆ. ಇನ್ನು ಸಾಕಷ್ಟು ರೈತರು ವಿಮೆ ತುಂಬುವರಿದ್ದಾರೆ. ಅವಧಿ ಮುಕ್ತಾಯಕ್ಕೆ ಬಂದಿರುವುದರಿಂದ ಪರದಾಡುವಂತಾಗಿದೆ. ಆದ್ದರಿಂದ 15 ರಿಂದ 20 ದಿನ ಅವಧಿ ವಿಸ್ತರಣೆ ಮಾಡಬೇಕು,” ಎಂದು ಅವರು ಆಗ್ರಹಿಸಿದರು.

ಕಲಬುರಗಿ ಜಿಲ್ಲೆಯಲ್ಲಿ ರೈತರು ಅಪಾರ ಪ್ರಮಾಣದಲ್ಲಿ ರೈತರು ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಆದರೆ, ಮಳೆಯ ತೀವ್ರ ಕೊರತೆ ಎದುರಾಗಿದೆ. ಹೊಲದಲ್ಲಿರುವ ಬೆಳೆಗಳು ಒಣಗುವ ಹಂತ ತಲುಪಿವೆ. ಇದರಿಂದ ರೈತರು, ಬೆಳೆ ವಿಮೆ ಮಾಡಿಸಲು ಮುಂದಾಗುತ್ತಿದ್ದಾರೆ. ಆದರೆ, ನೋಂದಣಿ ಪ್ರಕ್ರಿಯೆ ಜುಲೈ 31ರಂದು ಮುಕ್ತಾಯಗೊಳ್ಳುತ್ತಿದೆ. ಆದ್ದರಿಂದ ನೋಂದಣಿ ಅವಧಿ ವಿಸ್ತರಿಸುವಂತೆ ಆದೇಶ ನೀಡಬೇಕು’ ಎಂದು ಅವರು ಮನವಿ ಮಾಡಿಕೊಂಡರು.

Leave A Reply

Your email address will not be published.