ಆಳಂದ: ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ನಿರಗುಡಿಯ ಮಲ್ಲಯ್ಯಾ ಮುತ್ತ್ಯ ಅವರು ರಾಷ್ಟçಧ್ವಜ ಹಿಡಿದು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರ‍್ಯಾಲಿ ನಡೆಸಿ ಸಾರ್ವಜನಿಕರಿಗೆ ಕಲ್ಲುಸಕ್ಕರೆ ವಿತರಿಸಿದರು.
ಆಳಂದ: ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಪಟ್ಟಣದಲ್ಲಿ ಜೈ ಭಾರತ ಮಾತಾ ಸೇವಾ ಸಂಘದ ಆಶ್ರಯದಲ್ಲಿ ಭಾನುವಾರ ದೇಶಭಕ್ತಿಯ ಸಡಗರ-ಸಂಭ್ರಮದ ನಡುವೆ ಅದ್ಧೂರಿ ರ‍್ಯಾಲಿ ನಡೆಯಿತು.
ನಿರಗುಡಿಯ ಮಲ್ಲಯ್ಯಾ ಮುತ್ತ್ಯ ಅವರ ನೇತೃತ್ವದಲ್ಲಿ ನಡೆದ ರ‍್ಯಾಲಿಯು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ರಾಷ್ಟçಧ್ವಜಗಳನ್ನು ಹಿಡಿದ ದೇಶಾಭಿಮಾನಿಗಳು, ಭಕ್ತಾದಿಗಳು ಹಾಗೂ ವಿವಿಧ ವಯೋಮಾನದ ನಾಗರಿಕರು ಉತ್ಸಾಹದಿಂದ ಪಾಲ್ಗೊಂಡು ‘ಭಾರತ ಮಾತಾ ಕೀ ಜೈ’, ‘ವಂದೇ ಮಾತರಂ’ ಎಂಬ ಘೋಷಣೆಗಳನ್ನು ಕೂಗಿದರು. ತೆರೆದ ವಾಹನಗಳಲ್ಲಿ ದೇಶಭಕ್ತಿ ಗೀತೆಗಳು ಮೊಳಗುತ್ತಿದ್ದರಿಂದ ಪಟ್ಟಣದಲ್ಲಿ ದೇಶಪ್ರೇಮದ ವಾತಾವರಣ ನಿರ್ಮಾಣವಾಗಿತ್ತು.
ಈ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ಭಾರತೀಯ ಯೋಧರ ತ್ಯಾಗ, ಶೌರ್ಯ ಹಾಗೂ ರಾಷ್ಟçಸೇವೆಯನ್ನು ಸ್ಮರಿಸಲಾಯಿತು. ಯುವಜನತೆ ದೇಶಭಕ್ತಿ, ರಾಷ್ಟಿçÃಯ ಏಕತೆ ಹಾಗೂ ಸೈನಿಕರ ಸೇವಾ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಲ್ಲಯ್ಯಾ ಮುತ್ತ್ಯ ಕರೆ ನೀಡಿದರು.
ಸಾರ್ವಜನಿಕರಿಗೆ ಕಲ್ಲುಸಕ್ಕರೆ ವಿತರಿಸುವ ಮೂಲಕ ಕಾರ್ಗಿಲ್ ವಿಜಯೋತ್ಸವವನ್ನು ಸಂಭ್ರಮದಿAದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಜೈ ಭಾರತ ಮಾತಾ ಸೇವಾ ಸಂಘದ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಹಾಗೂ ಅಪಾರ ಸಂಖ್ಯೆಯ ದೇಶಾಭಿಮಾನಿಗಳು ಭಾಗವಹಿಸಿದ್ದರು.