ಆಳಂದ: ಗುಲ್ಬರ್ಗ ವಿಶ್ವವಿದ್ಯಾಲಯದ ೨೦೨೫-೨೬ನೇ ಸಾಲಿನ ಬಿಕಾಂ ಅಂತಿಮ ವರ್ಷದ ಪರೀಕ್ಷಾ ಫಲಿತಾಂಶದಲ್ಲಿ ಪಟ್ಟಣದ ಶರಣನಗರದ ಪ್ರತಿಭಾವಂತ ವಿದ್ಯಾರ್ಥಿನಿ ಮಹಾಲಕ್ಷ್ಮಿ ವೀರಬಸವಂತರಾಯ್ ಅತ್ನೂರ್ ಶೇ. ೯೩ ಅಂಕಗಳನ್ನು ಗಳಿಸುವ ಮೂಲಕ ಕಲಬುರಗಿಯ ಎನ್.ವಿ. ಕಾಲೇಜಿನ ಬಿಕಾಂ ವಿಭಾಗದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಉನ್ನತ ಹಣಕಾಸು ನಿರ್ವಹಣೆ ಶೇ ೮೦, ಆದಾಯ ತೆರಿಗೆ ಕಾನೂನು ಮತ್ತು ಪ್ರಾಯೋಗಿಕ ಶೇ. ೯೮, ನಿರ್ವಹಣಾ ಲೆಕ್ಕಶಾಸ್ತç ೯೦, ಹೂಡಿಕೆ ನಿರ್ವಹಣೆ ಶೇ. ೯೦, ಗ್ರಾಹಕ ಸಂಬAಧ ನಿರ್ವಹಣೆ ಶೇ ೯೩, ವೈಯಕ್ತಿಕರನ್ನು ಹೊರತುಪಡಿಸಿದ ವ್ಯಕ್ತಿಗಳ ಮೌಲ್ಯಮಾಪನ ಹಾಗೂ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಶೇ. ೯೬, ಇಂಟರ್ನ್ಶಿಪ್ ೧೦೦ ಅಂಕಗಳನ್ನು ಪಡೆದು ಒಟ್ಟಾರೆ ಶೇ. ೯೩ ಅಂಕಗಳನ್ನು ಪಡೆದು ಕಾಲೇಜಿನ ಬಿಕಾಂ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿರುವ ಮಹಾಲಕ್ಷ್ಮಿ ವೀರಬಸವಂತರಾಯ್ ಅತ್ನೂರ್ ಅವರು ಆಳಂದ ಪಟ್ಟಣದ ಹೆಮ್ಮೆಯ ವಿದ್ಯಾರ್ಥಿನಿಯಾಗಿ ಹೊರಹೊಮ್ಮಿದ್ದಾರೆ.
ಕಠಿಣ ಪರಿಶ್ರಮ, ಶಿಸ್ತುಬದ್ಧ ಅಧ್ಯಯನ ಹಾಗೂ ನಿರಂತರ ಅಭ್ಯಾಸದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆದು ವಾಣಿಜ್ಯ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಗುರಿಯನ್ನು ಹೊಂದಿರುವುದಾಗಿ ಮಹಾಲಕ್ಷಿö್ಮÃ ಅವರು ತಿಳಿಸಿದ್ದಾರೆ.
ಮಹಾಲಕ್ಷ್ಮಿ ಅವರ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ದಯಾನಂದ ಶಾಸ್ತಿç, ಉಪನ್ಯಾಸಕರು, ಪೋಷಕರು, ಸಹಪಾಠಿಗಳು ಹಾಗೂ ಆಳಂದ ಭಾಗದ ಗಣ್ಯರು ಅಭಿನಂದನೆ ಸಲ್ಲಿಸಿ, ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.