Shubhashaya News

ಲಂಬಾಣಿ ಸಮುದಾಯದಿಂದ ವರದಕ್ಷಿಣೆ ಕಡಿವಾಣ ಸಂಕಲ್ಪಕ್ಕೆ ಕೈಜೋಡಿಸಲು ರಾಜು ಕರೆ

ಆಳಂದ: ತಾಲೂಕಿನ ವಿವಿಧ ಲಂಬಾಣಿ ತಾಂಡಾಗಳಲ್ಲಿ ಬಂಜಾರಾ ಕ್ರಾಂತಿದಳದ ರಾಜ್ಯಾಧ್ಯಕ್ಷ ರಾಜು ಜೆ. ಚವ್ಹಾಣ ನೇತೃತ್ವದಲ್ಲಿ ಹಮ್ಮಿಕೊಂಡ ವರದಕ್ಷಿಣೆ ತಡೆ ಹಾಗೂ ಸರಳ ವಿವಾಹ ಜಾಗೃತಿ ಅಭಿಯಾನದಲ್ಲಿ ಸಮಾಜದ ಮುಖಂಡರು ಮತ್ತು ಬಾಂಧವರು ಭಾಗವಹಿಸಿದ್ದರು.

ಆಳಂದ: ವರದಕ್ಷಿಣೆ ರಹಿತ ಸರಳ ವಿವಾಹ, ಶಿಕ್ಷಣ ಸಂಘಟನೆ ಆರ್ಥಿಕ ಸಮಾಜಿಕ ರಾಜಕೀಯವಾಗಿ ಸಂಘಟಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಲಂಬಾಣಿ ಸಮಾಜ ಬಾಂಧವರು ಪರಸ್ಪರ ವಿಶ್ವಾಸ ಮತ್ತು ಸೌಹಾರ್ದ ಬದುಕಿಗೆ ಒಗ್ಗೂಡಬೇಕು ಎಂದು ಬಂಜಾರಾ ಕ್ರಾಂತಿದಳ ರಾಜ್ಯಾಧ್ಯಕ್ಷ ರಾಜು ಜೆ. ಚವ್ಹಾಣ ಅವರು ಇಂದಿಲ್ಲಿ ಕರೆ ನೀಡಿದರು.
ತಾಲೂಕಿನ ಸೀಡ್ಸ್ಫಾರಂ ತಾಂಡಾ, ನೆಹರು ನಗರ ತಾಂಡಾ, ಹೆಬಳ್ಳಿ ತಾಂಡಾ, ಪಿ.ಎನ್.ತಾಂಡಾ, ಮೋರಿಸಾಬ್ ತಾಂಡಾಗಳಲ್ಲಿ ಸರಣಿಯಾಗಿ ಲಂಬಾಣಿ ಸಮುದಾಯದಲ್ಲಿ ವರದಕ್ಷಿಣೆ ರಹಿತ ವಿವಾಹ ಶಿಕ್ಷಣ, ಸರ್ಕಾರಿ ಸೌಲಭ್ಯಗಳ ಹಕ್ಕುಗಳ ಅರಿವು ಮೂಡಿಸುವ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲೂಕಿನ ಬಂಜಾರಾ ಸಮಾಜದ ೫೨ ತಾಂಡಾ ಗಳ್‌ಲ್ಲಿ ವರದಕ್ಷಿಣೆ ಕಡಿವಾಣ ಹಾಕಲು ಬಂಜಾರಾ ಕ್ರಾಂತಿ ದಳ ಮತ್ತು ಸೇವಾಲಾಲ್ ಜಯಂತಿ ಸಮಿತಿ ಆಳಂದ ವತಿಯಿಂದ ತಾಂಡಾಗಳಲಿ ಸರಣಿ ಜಾಗೃತಿ ಅಭಿಯಾನ ಆರಂಭಗೊAಡಿದೆ. ಸಮಾಜದಲಿ ೩೦ ವರ್ಷ್ ಹಿಂದೆ ಗಂಡನ ಕಡೇವರು ೨ ರಿಂದ ೪ ಎತುಗಳು ಹೆಣಿನ ಕಡೆವರಿಗೆ ಕೊಟೊ ಮದುವೆ ಮಾಡುವ ಸಂಪರದಯ ಇವತ್ತಿನ ಕಾಲದಲಿ ವಂದು ಹೆಣಿನ್ ಮದುವೆ ಮಾಡಿದರೆ ಸುಮಾರು ೧೦-ರಿಂದ ೧೫ ಲಕ್ಷ ರೂಪಾಯಿ ಖರ್ಚು ಆಗುತ್ತಿದೆ ಆದ ಕಾರಣ ನಾವು ಬಂಜಾರಾ ಸಮಾಜ ವನ್ನು ಜಾಗೃತಿ ಮಾಡಲು ಪ್ರೇಯತನ್ ಮಾಡುತಿದ್ದೇವೆ ಇದರಿಂದ ನಮ್ಮ ಜನರಿಗೆ ತುಂಬಾ ತೊಂದರೆ ಆಗುತ್ತಿದೆ ಸಮಾಜ ಬಾಂಧವರ ಇಂಥ ಕಾರ್ಯಕ್ಕೆ ಕೈಜೊಡಿಸಬೇಕು ಎಂದು ಬಂಜಾರಾ ಕ್ರಾಂತಿದಳ ರಾಜ್ಯಾಧ್ಯಕ್ಷ ರಾಜು ಜೆ. ಚವ್ಹಾಣ ಅವರು ಸಮುದಾಯಕ್ಕೆ ಕರೆ ನೀಡಿದರು.
ಬಂಜಾರ ಸಮುದಾಯದ ತಾಂಡಾಗಳಲ್ಲಿ ಇನ್ನು ಮುಂದೆ ವರದಕ್ಷಿಣೆ ಪಡೆಯುವುದು ಅಥವಾ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಸಮುದಾಯದ ನಾಯಕರು ಹಾಗೂ ಹಿರಿಯರು ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ.
ಪಟ್ಟಣದ ಬಂಜಾರ ಭವನದಲ್ಲಿ ಅಖಿಲ ಇಂಡಿಯಾ ಬಂಜಾರೆ ಸೇವಾ ಸಂಘ ಹಾಗೂ ಸಂಯುಕ್ತ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಈ ಕ್ರಾಂತಿಕಾರಿ ತೀರ್ಮಾನಕ್ಕೆ ಒಮ್ಮತ ವ್ಯಕ್ತವಾಯಿತು. ವಿವಾಹ ಕಾರ್ಯಕ್ರಮಗಳಲ್ಲಿ ವರದಕ್ಷಿಣೆ ರೂಪದಲ್ಲಿ ಹಣ, ವಾಹನ ಸೇರಿದಂತೆ ದುಬಾರಿ ಉಡುಗೊರೆಗಳನ್ನು ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸುವವರಿಗೆ ೧ ಲಕ್ಷ ರೂಪಾಯಿ ದಂಡ ವಿಧಿಸುವುದಾಗಿ ಸಂಘದ ತಾಲೂಕಾಧ್ಯಕ್ಷ ವೆಂಕಟೇಶ ರಾಠೋಡ್ ಘೋಷಿಸಿದ್ದಾರೆ.
ಅಷ್ಟೇ ಅಲ್ಲದೆ, ವರದಕ್ಷಿಣೆ ಪಡೆಯುವವರ ಮಾಹಿತಿ ನೀಡುವವರಿಗೆ ೧೫ ಸಾವಿರ ರೂಪಾಯಿ ಬಹುಮಾನ ನೀಡುವುದಾಗಿಯೂ ತಿಳಿಸಲಾಗಿದೆ.
ಮದುವೆಗಳಲ್ಲಿ ಡಿಜೆ, ಧ್ವನಿವರ್ಧಕಗಳ ಬಳಕೆ ಹಾಗೂ ಮದ್ಯಪಾನವನ್ನು ಸಹ ನಿಷೇಧಿಸಲಾಗಿದ್ದು, ಸಮುದಾಯದ ಸಾಂಪ್ರದಾಯಿಕ ಆಚಾರ ವಿಚಾರಗಳಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ ಪದ್ಧತಿಯಿಂದಾಗಿ ಬಡ ಕುಟುಂಬಗಳು ಅನುಭವಿಸುತ್ತಿರುವ ಸಂಕಷ್ಟ ಮತ್ತು ನೈತಿಕ ಮೌಲ್ಯಗಳ ಕುಸಿತದ ಹಿನ್ನೆಲೆಯಲ್ಲಿ ಈ ಜಾಗೃತಿ ಅಭಿಯಾನವನ್ನು ತೀವ್ರಗೊಳಿಸಲಾಗಿದೆ.
ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಗೋವಿಂದರಾಜ್, ಜಿಲ್ಲಾಧ್ಯಕ್ಷ ಅಮರೇಶ ರಾಠೋಡ್ ಸೇರಿದಂತೆ ಹಲವು ಧಾರ್ಮಿಕ ಮುಖಂಡರು ಹಾಗೂ ತಾಂಡಾದ ಕಾರ್ಭಾರಿಗಳು ಭಾಗವಹಿಸಿದ್ದರು.
ಲಂಬಾಣಿ ತರುಣ ಸಂಘದ ಅಧ್ಯಕ್ಷ ಶಿವಾಜಿ ರಾಠೋಡ, ಸಮಾಜ ಮುಖಂಡ ಠಾಕೂರಸಿಂಗ್ ರಾಠೋಡ, ಲಂಬಾಣಿ ವಸತಿ ನಿಲಯ ಅಧ್ಯಕ್ಷ ಗಂಗಾರಾಮ ಪವಾರ, ಶಿವಾಜಿ ರಾಠೋಡ ಹೋದಲೂರ್ ಅನೇಕರ ಮುಂದಾಳತ್ವದಲ್ಲಿ ಸೀಡ್ಸ್ಫಾರಂ ತಾಂಡಾ, ನೆಹರು ನಗರ ತಾಂಡಾ, ಹೆಬಳ್ಳಿ ತಾಂಡಾ, ಪಿ.ಎನ್.ತಾಂಡಾ, ಮೋರಿಸಾಬ್ ತಾಂಡಾಗಳಲ್ಲಿ ಮೂರುದಿನಗಳಿಂದ ಸತತವಾಗಿ ಜಾಗೃತಿ ಅಭಿಯಾನ ಕೈಗೊಂಡಿದ್ದು ಇನ್ನೂಳಿದ ತಾಂಡಾಗಳಲ್ಲಿ ಮುಂದುವರೆಯಲಿದೆ ಎಂದು ಮುಖಂಡರು ಹೇಳಿದರು.

Leave A Reply

Your email address will not be published.