Shubhashaya News

ಬೆಂಗಳೂರು ಏರ್ಪೋರ್ಟ್ ನಲ್ಲಿ 47 ಜೀವಂತ ಆಮೆಗಳನ್ನು ವಶಪಡಿಸಿಕೊಂಡ ಕಸ್ಟಮ್ಸ್ ಅಧಿಕಾರಿಗಳು

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕನಿಂದ 47 ಜೀವಂತ ಆಮೆಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಈ ಸಂಬಂಧ ಬ್ಯಾಕಾಂಕ್‌ನಿಂದ ಬಂದಿಳಿದ ಪ್ರಯಾಣಿಕನನ್ನು ಬಂಧಿಸಲಾಗಿದೆ.

ಈ ಪ್ರಾಣಿಗಳನ್ನು ಅಕ್ರಮವಾಗಿ ಭಾರತಕ್ಕೆ ಸಾಗಿಸಲು ಯತ್ನಿಸಲಾಗುತ್ತಿದ್ದು, ಕಳ್ಳ ಸಾಗಾಣಿಕೆ ದಂಧೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. ಕೆಲವರು ಆಮೆಗಳು ಅದೃಷ್ಟ ತರಲಿವೆ ಎಂಬ ನಂಬಿಕೆಯನ್ನು ಬಳಸಿಕೊಂಡು ಜನರಿಗೆ ಮಾರಾಟ ಮಾಡುವುದರಿಂದ ಇಂತಹ ಅಕ್ರಮ ದಂಧೆಗಳು ಹೆಚ್ಚಾಗುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕಸ್ಟಮ್ಸ್ ಅಧಿಕಾರಿಗಳು ಖಚಿತ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿ, ಪ್ರಯಾಣಿಕನ ಬ್ಯಾಗ್ ಪರಿಶೀಲಿಸಿದ ವೇಳೆ ವಿವಿಧ ಜಾತಿಯ ಆಮೆಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಪ್ರಾಣಿಗಳಲ್ಲಿ ರೆಡ್ ಫೂಟೆಡ್ ಆಮೆ, ಆಫ್ರಿಕನ್ ಸ್ಪರ್‌ಡ್ ಆಮೆ, ಅರ್ಜೆಂಟೀನಾದ ಕಪ್ಪು-ಬಿಳಿ ಟೆಗು ಹಾಗೂ ಗೋಯಲ್ಡಿಯ ಮಾರ್ಮೊಸೆಟ್ ಸೇರಿದಂತೆ ಅಪರೂಪದ ಜಾತಿಗಳು ಸೇರಿವೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ಕಸ್ಟಮ್ಸ್ ಕಾಯ್ದೆ 1962ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಬಂಧಿತ ಪ್ರಯಾಣಿಕನನ್ನು ಮುಂದಿನ ಕ್ರಮಕ್ಕಾಗಿ ವನ್ಯಜೀವಿ (ರಕ್ಷಣೆ) ಕಾಯ್ದೆ 1972ರಡಿ ಬೆಂಗಳೂರು ಗ್ರಾಮಾಂತರ ವಲಯದ ಅರಣ್ಯಾಧಿಕಾರಿ (RFO) ಅವರಿಗೆ ಹಸ್ತಾಂತರಿಸಲಾಗಿದೆ.

Leave A Reply

Your email address will not be published.