Shubhashaya News

ಮೇ 15 ರಂದೇ ಅಂತಾರಾಷ್ಟ್ರೀಯ ಕುಟುಂಬ ದಿನ ಆಚರಿಸುವುದು ಏಕೆ?

ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವ ಮಾತಿದೆ. ಆದರೆ ಇಂದು ಅವಿಭಕ್ತ ಕುಟುಂಬಗಳ ಸಂಖ್ಯೆ ಕಡಿಮೆಯಾಗಿದೆ. ವಿಭಕ್ತ ಕುಟುಂಬದಲ್ಲಿ ಇರಲು ಹೆಚ್ಚು ಇಷ್ಟ ಪಡುತ್ತಿದ್ದಾರೆ. ಕುಟುಂಬದ ಮಹತ್ವದ ಬಗ್ಗೆ ತಿಳಿಸಲು ಇರುವ ದಿನವೇ ಅಂತಾರಾಷ್ಟ್ರೀಯ ಕುಟುಂಬ ದಿನ. ಈ ದಿನದ ಇತಿಹಾಸ ಹಾಗೂ ಮಹತ್ವದ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ಮನೆಯೇ ಮೊದಲ ಪಾಠ ಶಾಲೆ. ಕುಟುಂಬವಿಲ್ಲದೇ ವ್ಯಕ್ತಿಯಿಲ್ಲ. ಕುಟುಂಬ’ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಮನೆ ಮಂದಿ ಹಾಗೂ ತನ್ನ ಕುಟುಂಬದಿಂದಲೇ ಜೀವನಕ್ಕೆ ಬೇಕಾದ ಪಾಠವನ್ನು ಕಲಿಯುತ್ತಾನೆ. ಇಲ್ಲಿ ನೋವಿರಲಿ, ನಲಿವಿರಲಿ ಕುಟುಂಬದ ಸದಸ್ಯರು ಸದಾ ಜತೆಗೆ ನಿಲ್ಲುತ್ತಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ವಿಭಿಕ್ತ ಕುಟುಂಬಗಳು ಹೆಚ್ಚಾಗುತ್ತಿದೆ. ಅವಿಭಕ್ತ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಕುಟುಂಬದ ಮಹತ್ವವನ್ನು ಸಾರುವ ದೃಷ್ಟಿಯಿಂದ ಅಂತಾರಾಷ್ಟ್ರೀಯ ಕುಟುಂಬ ದಿನವನ್ನು (International Day of Families) ಮೇ 15 ರಂದು ಆಚರಿಸಲಾಗುತ್ತಿದೆ.

ಅಂತಾರಾಷ್ಟ್ರೀಯ ಕುಟುಂಬ ದಿನದ ಇತಿಹಾಸವೇನು?

ವಿಶ್ವ ಸಂಸ್ಥೆ 1993 ರ ಮೇ 15ರಂದು ಜನರಲ್ ಅಸೆಂಬ್ಲಿಯಲ್ಲಿ ಅಂತಾರಾಷ್ಟ್ರೀಯ ಕುಟುಂಬ ದಿನಾಚರಣೆಯನ್ನು ಆಚರಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿತು. ಅಂದಿನಿಂದ ಪ್ರಪಂಚದಾದಂತ್ಯ ಮೇ 15 ರಂದು ವಿಶ್ವ ಕುಟುಂಬ ದಿನವನ್ನಾಗಿ ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಕುಟುಂಬ ದಿನದ ಮಹತ್ವವೇನು?

ಕುಟುಂಬ ಹಾಗೂ ಸದಸ್ಯರಿಲ್ಲದೇ ಒಬ್ಬಂಟಿಯಾಗಿ ಬದುಕಲು ಅಸಾಧ್ಯ. ಕುಟುಂಬಗಳ ಮೌಲ್ಯ ಹಾಗೂ ಮಹತ್ವವನ್ನು ತಿಳಿಸುವ ದೃಷ್ಟಿಯಿಂದ ಈ ದಿನವು ಮಹತ್ವದ್ದಾಗಿದೆ. ಈ ದಿನದಂದು ಕಾರ್ಯಾಗಾರಗಳು, ವಿಚಾರಗೋಷ್ಠಿಗಳು, ಜಾಗೃತಿ ಕಾರ್ಯಕ್ರಮಗಳು ಸೇರಿದಂತೆ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ.

 

Comments are closed.

Don`t copy text!