Shubhashaya News

ನಿಂಬರ್ಗಾ ಗ್ಯಾಸ್ ಸಿಲಿಂಡರ್ ಸಂಕಷ್ಟ: ಬುಕ್ ಮಾಡಿದರೂ ಪೂರೈಕೆ ಇಲ್ಲ, ೨೫ ಹಳ್ಳಿಗಳ ಗ್ರಾಹಕರು ಬಿಸಿಲಿನಲ್ಲಿ ಗ್ರಾಮ ಗ್ರಾಮಕ್ಕೆ ಅಲೆದಾಟ

ಆಳಂದ: ನಿಂಬರಗಾ ಗ್ಯಾಸ್ ಏಜ್‌ನ್ಸಿ ಮುಂದೆ ಸಲಿಂಡರ್‌ಗಾಗಿ ಕಾದು ಕುಳಿತ ಗ್ರಾಹಕರು.

ಆಳಂದ: ತಾಲೂಕಿನ ನಿಂಬರ್ಗಾ ಪ್ರದೇಶದಲ್ಲಿ ಗೃಹ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ತೀವ್ರ ಅಸ್ತವ್ಯಸ್ತತೆ ಉಂಟಾಗಿದೆ. ನೋಂದಾಯಿತ ಗ್ರಾಹಕರು ಮೊಬೈಲ್ ಅಪ್ಲಿಕೇಶನ್ ಅಥವಾ ಏಜೆನ್ಸಿ ಮೂಲಕ ಸಿಲಿಂಡರ್ ಬುಕ್ ಮಾಡಿದರೂ, ಸಕಾಲಕ್ಕೆ ಪೂರೈಕೆಯಾಗುತ್ತಿಲ್ಲ. ಬದಲಿಗೆ “ಮತ್ತೊಮ್ಮೆ ಬುಕಿಂಗ್ ಮಾಡಿ” ಅಥವಾ “ನಂಬರ್ ಹಾಕಿ” ಎಂದು ಏಜೆನ್ಸಿ ವತಿಯಿಂದ ಹೇಳಲಾಗುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ಇದರ ಪರಿಣಾಮವಾಗಿ ನಿಂಬರ್ಗಾ ಸುತ್ತಮುತ್ತಲಿನ ಸುಮಾರು ೨೫ ಹಳ್ಳಿಗಳ ಗ್ರಾಹಕರು ತೀವ್ರ ಪರದಾಟಕ್ಕೊಳಗಾಗಿದ್ದಾರೆ. ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ, ಒಂದು ಏಜೆನ್ಸಿಯಿಂದ ಇನ್ನೊಂದಕ್ಕೆ ಅಲೆದಾಡುವಂತಾಗಿದೆ. ವಿಪರೀತ ಬಿಸಿಲಿನಲ್ಲಿ ಮಹಿಳೆಯರು, ವೃದ್ಧರು ಮತ್ತು ಕುಟುಂಬದವರು ಸಿಲಿಂಡರ್‌ಗಾಗಿ ಅಲೆಯುತ್ತಿದ್ದಾರೆ. ಇದರ ಜೊತೆಗೆ ಕೆಲವರು ತಮ್ಮ ಮಕ್ಕಳ ಶಾಲಾ ಕ್ಲಾಸ್‌ಗಳಿಗೆ ಹೋಗುವುದರಲ್ಲಿ ಕೂಡ ತೊಂದರೆ ಎದುರಿಸುತ್ತಿದ್ದಾರೆ.

ಗ್ರಾಹಕರ ದೂರುಗಳ ಪ್ರಕಾರ: ಬುಕಿಂಗ್ ಆಗಿದ್ದರೂ ಸಿಲಿಂಡರ್ ತಲುಪುತ್ತಿಲ್ಲ. ಎಡತಾಕಿ ಹಾಕುವುದರಲ್ಲಿ” (ಸರತಿ ಸಾಲು ಅಥವಾ ರಿಪೀಟ್ ಬುಕಿಂಗ್) ಜನರು ಸುಸ್ತಾಗಿದ್ದಾರೆ. ಹಳ್ಳಿಗಳಿಂದ ನಿಂಬರ್ಗಾ ಏಜೆನ್ಸಿಗೆ ಬರುವುದೇ ದೊಡ್ಡ ಸವಾಲಾಗಿದೆ. ಇದು ದೈನಂದಿನ ಅಡುಗೆಯನ್ನು ಕೂಡ ಪ್ರಭಾವಿಸುತ್ತಿದೆ ಎಂದು ಅನೇಕರು ಅಳಲು ತೋಡಿಕೊಂಡಿದ್ದಾರೆ.
ಈ ಸಮಸ್ಯೆ ಆಳಂದ್ ಪಟ್ಟಣ ಸೇರಿ ಗ್ರಾಮೀಣ ಭಾಗದ ಹಲವು ತಿಂಗಳಿನಿAದಲೂ ಮುಂದುವರೆದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಗ್ಯಾಸ್ ಅಭಾವದ ಬಗ್ಗೆ ಈಗಾಗಲೇ ವರದಿಗಳು ಬಂದಿವೆಯಾದರೂ, ಗ್ರಾಮೀಣ ಪ್ರದೇಶಗಳಲ್ಲಿ ಪೂರೈಕೆ ವ್ಯವಸ್ಥೆ ಇನ್ನಷ್ಟು ದುರ್ಬಲವಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ.
ಈ ಸಮಸ್ಯೆಯನ್ನು ತಕ್ಷಣ ಗಮನಿಸಿ, ನಿಂಬರ್ಗಾ ಮತ್ತು ಸುತ್ತಮುತ್ತಲಿನ ೨೫ ಹಳ್ಳಿಗಳ ಗ್ರಾಹಕರಿಗೆ ಸಕಾಲಕ್ಕೆ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಳಂದ್ ತಾಲೂಕು ಆಡಳಿತ ಜಿಲ್ಲಾ ಆಡಳಿತ ಮತ್ತು ಸಂಬAಧಪಟ್ಟ ಗ್ಯಾಸ್ ಏಜೆನ್ಸಿಗಳು ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಒತ್ತಾಯಿಸಿದ್ದಾರೆ.
ಗ್ರಾಹಕನ ಅಳಲು:
ಧಂಗಾಪೂರದ ಸೇರಿ ನೆರೆ ಹೊರೆಯ ಹಲವು ಗ್ರಾಹಕರು ಏ.೨೨ರಂದು ನೋಂದಣಿ ಮಾಡಿದ್ದಾರೆ. ೨೩ಕ್ಕೆ ವಿತರಿಸಲಾಗುವುದು ಎಂದು ಓಟಿಪಿ ಬಂದಿದೆ. ಅಂದೆ ಸಿಲೆಂಡೆರ್ ನೀಡುವಂತೆ ನಿಂಬರಗಾದ ಏಜ್‌ನ್ಸಿ ಗುರುದೇವ ಅಂಗಡಿಗೆ ಧಂಗಾಪೂರದಿAದ ನಿಂಬರಗಾಕ್ಕೆ ಗ್ರಾಹಕ ಈರಣ್ಣಾ ಎಂಬುವರು ಹೋಗಿದ್ದಾಗ ಏ.೩೦ಕ್ಕೆ ಬನ್ನಿ ವಾರಬಿಟ್ಟು ಕೊಡುತ್ತೇವೆ ಎಂದಾಗ ಹಿಂದುರುಗಿದ ಗ್ರಾಹಕ ಮತ್ತೆ ಮೇ ೨ಕ್ಕೆ ಹೋಗಿ ಕೇಳಿದಾಗ ಹಳೆಯ ಒಟಿಪಿ ರದ್ದಾಗಿದೆ ಪುನಾ ನೋಂದಾಯಿಸಿ ವಾರಬಿಟ್ಟು ಕೊಡುತ್ತೇವೆ ಎಂದು ಗುರುದೇವ ಏಜ್‌ನ್ಸಿ ಅವರಿಂದ ಹಾರಿಕೆ ಉತ್ತರಕ್ಕೆ ಇದು ಈ ರೀತಿ ಬ್ಬಿರದಲ್ಲ. ಹೀಗೆ ೧೫ ದಿನಗಳ ಓಡಾಡುವಂತಾಗಿ ಇದಾದ ಬಳಿಕವಾದರೂ ಗ್ಯಾಸ್ ದೊರೆಯುತ್ತದೆ ಎಂಬ ವಿಶ್ವಾಸವಿಲ್ಲವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

Comments are closed.

Don`t copy text!