Shubhashaya News

ಹೋನ್ನಳ್ಳಿ–ಶುಕ್ರವಾಡಿ ರಸ್ತೆ ಕಾಮಗಾರಿ ತಡೆಗಟ್ಟುವವರ ವಿರುದ್ಧ ಕಾನೂನು ಕ್ರಮಕ್ಕೆ ಭೀಮ ಸೇನೆ ಆಗ್ರಹ

ಆಳಂದ: ಹೊನ್ನಾಳಿ ಶುಕ್ರವಾಡಿ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸಿ ಭೀಮ ಸೇನೆ ಜಿಲ್ಲಾಧ್ಯಕ್ಷ ಸಂಜಯ್ ಕುಮಾರ್ ಭೋಸ್ಲೆ ನೇತೃತ್ವದಲ್ಲಿ ಪ್ರಮುಖರು ತಹಶೀಲರ ಅಣ್ಣಾರಾವ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.

ಆಳಂದ: ಹೋನ್ನಳ್ಳಿ ಗ್ರಾಮದಿಂದ ಶುಕ್ರವಾಡಿ ಗ್ರಾಮದವರೆಗೆ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಬಾರದು. ಕಾಮಗಾರಿಗೆ ಕಾನೂನುಬಾಹಿರವಾಗಿ ಅಡ್ಡಿಪಡಿಸುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಭೀಮ ಸೇನೆ (ರಿ) ಕಲಬುರಗಿ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧ್ಯಕ್ಷ ಸಂಜಯ್ ಕುಮಾರ್ ಭೋಸ್ಲೆ ನೇತೃತ್ವದಲ್ಲಿ ಆಳಂದ ತಹಸೀಲ್ದಾರ್ ಅಣ್ಣಾರಾವ್ ಪಾಟೀಲ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ, ಹೋನ್ನಳ್ಳಿ–ಶುಕ್ರವಾಡಿ ರಸ್ತೆ ಕಾಮಗಾರಿಗೆ ಸಂಬAಧಿಸಿದAತೆ ನ್ಯಾಯಾಲಯವು ೨೦೨೫ರ ಡಿಸೆಂಬರ್ ೮ರಂದು ಆದೇಶ ನೀಡಿದ್ದು, ಬಳಿಕ ತಾಲ್ಲೂಕು ದಂಡಾಧಿಕಾರಿಗಳೂ ೨೦೨೬ರ ಜೂನ್ ತಿಂಗಳಲ್ಲಿ ಅಗತ್ಯ ಆದೇಶ ಹೊರಡಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ, ಲೋಕೋಪಯೋಗಿ ಇಲಾಖೆ (PWಆ) ಹಾಗೂ ಸರ್ವೇ ಇಲಾಖೆಯ ಅಧಿಕಾರಿಗಳು ರಸ್ತೆ ಕಾಮಗಾರಿಗೆ ಅನುಮೋದನೆ ನೀಡಿ, ನಿಗದಿತ ಅಳತೆಯಲ್ಲಿಯೇ ರಸ್ತೆ ನಿರ್ಮಾಣ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿರುವುದಾಗಿ ತಿಳಿಸಲಾಗಿದೆ.
ಸರ್ವೇ ಸಂಖ್ಯೆ ೮, ೯, ೧೬, ೧೭, ೨೯ ಹಾಗೂ ೩೦ಕ್ಕೆ ಸಂಬAಧಿಸಿದ ಕೆಲವರು ಯಾವುದೇ ಸಮರ್ಪಕ ಕಾರಣವಿಲ್ಲದೆ ರಸ್ತೆ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅಭಿವೃದ್ಧಿ ಕಾಮಗಾರಿಗೆ ಅಡ್ಡಿಯಾಗುವವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಂಡು ಕಾಮಗಾರಿಯನ್ನು ಸುಗಮವಾಗಿ ಮುಂದುವರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಒಂದು ವೇಳೆ ರಸ್ತೆ ಕಾಮಗಾರಿಯನ್ನು ಮತ್ತೆ ತಡೆಗಟ್ಟುವ ಪ್ರಯತ್ನ ನಡೆದರೆ, ಕರ್ನಾಟಕ ಭೀಮ ಸೇನೆ ಹಾಗೂ ಶುಕ್ರವಾಡಿ ಗ್ರಾಮದ ಸಾರ್ವಜನಿಕರು ಸೇರಿ ಆಳಂದ ತಾಲ್ಲೂಕು ಆಡಳಿತ ಸೌಧ ಕಚೇರಿ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಭೀಮ ಸೇನೆಯ ಮುಖಂಡರಾದ ಸಚಿನ್ ಮುಗಳೆ, ರಣಜಿತ್ ಭೂಸನೂರು ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave A Reply

Your email address will not be published.