Shubhashaya News

ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣ, ಗೈರಾದವರಿಗೆ ಏಪ್ರಿಲ್ 30ರಿಂದ ಎರಡನೇ ಪರೀಕ್ಷೆ.

ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ಹಾಗೂ ವಿವಿಧ ಕಾರಣಗಳಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ಮತ್ತೊಂದು ಅವಕಾಶ ನೀಡಿದೆ. ಏಪ್ರಿಲ್ 30ರಿಂದ ‘ಪರೀಕ್ಷೆ-2’ (ದ್ವಿತೀಯ ಪರೀಕ್ಷೆ) ಆರಂಭವಾಗಲಿದ್ದು, ಇದಕ್ಕೆ ವಿದ್ಯಾರ್ಥಿಗಳನ್ನು ನೋಂದಾಯಿಸುವ ಜವಾಬ್ದಾರಿಯನ್ನು ಆಯಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ವಹಿಸಲಾಗಿದೆ.

ಇತ್ತೀಚೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶದ ವಿವರಗಳು ಹೀಗಿವೆ:

ಒಟ್ಟು ಪರೀಕ್ಷೆ ಬರೆದ ವಿದ್ಯಾರ್ಥಿಗಳು: 6,32,200 (ಫ್ರೆಶರ್ಸ್)

ತೇರ್ಗಡೆಯಾದವರು: 5,46,698 (ಶೇ. 81.48)

ಅನುತ್ತೀರ್ಣರಾದವರು: 85,502

ಪರೀಕ್ಷೆ-2 ಯಾರಿಗೆ ಅನ್ವಯ?

ಪರೀಕ್ಷೆ-1 ಬರೆದು ವಿವಿಧ ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು.ಹಾಜರಾತಿ ಕೊರತೆ, ಅನಾರೋಗ್ಯ ಅಥವಾ ಇತರ ಕಾರಣಗಳಿಂದ ಮೊದಲನೇ ಪರೀಕ್ಷೆಗೆ ಗೈರಾದವರು.

ಅನುತ್ತೀರ್ಣರಾದ ಹಾಗೂ ಗೈರಾದ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿ, ಅವರು ಪರೀಕ್ಷೆ-2ಕ್ಕೆ ನೋಂದಾಯಿಸಿಕೊಳ್ಳುವಂತೆ ಕ್ರಮ ಕೈಗೊಳ್ಳಲು ಪ್ರಾಂಶುಪಾಲರು ಮತ್ತು ಶಿಕ್ಷಕರಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ವ್ಯರ್ಥವಾಗುವುದನ್ನು ತಪ್ಪಿಸಬಹುದಾಗಿದೆ.

Comments are closed.

Don`t copy text!