ಆಳಂದ: ಸಿಯುಕೆಯಲ್ಲಿ ಆಚರಿಸಿದ ಒಡಿಯಾ ಉತ್ಕಲ ದಿವಸ್ ಆಚರಣೆಯಲ್ಲಿ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ, ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ, ಸಿಎಆರ್ನ ವಿಜ್ಞಾನಿ ಡಾ. ಕೆ. ಸಿ. ಗೌಡ ಇತರರು ಇದ್ದರು.
ಒಡಿಯಾ ಜನರ ಶಾಂತಿಯುತ ಸ್ವಭಾವಕ್ಕೆ ಕುಲಪತಿ ಸತ್ಯನಾರಾಯಣ ಪ್ರಶಂಸೆ
ಆಳಂದ: ತಾಲೂಕಿನ ಕಡಗಂಚಿ ಸಮೀಪದಲ್ಲಿರುವ ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (ಸಿಯುಕೆ) ಒಡಿಯಾ ಪರಿವಾರದ ಆಶ್ರಯದಲ್ಲಿ ಉತ್ಕಲ ದಿವಸ್ 2026 ಅನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಮಾತನಾಡಿ, ಒಡಿಯಾ ಜನರ ಶಾಂತಿಯುತ ಸ್ವಭಾವ, ಸಂಸ್ಕøತಿ ಹಾಗೂ ಸಹಜ ಸೌಹಾರ್ದತೆಯನ್ನು ಹೊಗಳಿದರು. ಇಂತಹ ಸಂಸ್ಕೃತಿಕ ಆಚರಣೆಗಳು ರಾಷ್ಟ್ರದ ಏಕತೆಯನ್ನು ಬಲಪಡಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಕುಲಸಚಿವರಾದ ಪೆÇ್ರ. ಆರ್. ಆರ್. ಬಿರಾದಾರ ಅವರು ಮಾತನಾಡಿ, ಒಡಿಶಾ ರಾಜ್ಯವು ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಸೂಚ್ಯಂಕ ಹಾಗೂ ತಲಾ ಜಿಡಿಪಿಯಲ್ಲಿ ಸಾಧಿಸಿರುವ ಪ್ರಗತಿಯನ್ನು ಶ್ಲಾಘಿಸಿದರು. ರಾಜ್ಯದ ಅಭಿವೃದ್ಧಿ ಪಥವು ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬೆಂಗಳೂರಿನ ಸಿಎಆರ್ನ ಹಿರಿಯ ಪ್ರಧಾನ ವಿಜ್ಞಾನಿ ಡಾ. ಕೆ. ಸಿ. ಗೌಡ ಅವರು ಪಾಲ್ಗೊಂಡು, ಉತ್ಕಲ ದಿವಸ್ ಆಚರಣೆಗಳ ಮೂಲಕ ಒಡಿಶಾದ ಅಭಿವೃದ್ಧಿ ಪ್ರಯಾಣಕ್ಕೆ ಅರ್ಥಪೂರ್ಣ ಕೊಡುಗೆ ನೀಡುವ ಸಾಮಥ್ರ್ಯವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸಚಿವರು, ವಿಜ್ಞಾನಿಗಳು, ನಟರು ಹಾಗೂ ನಿರ್ದೇಶಕರು ಸೇರಿದಂತೆ ಒಡಿಶಾದ ಗಣ್ಯರಿಂದ ಅಭಿನಂದನಾ ಸಂದೇಶಗಳು ಹರಿದುಬಂದವು. ವಿದ್ಯಾರ್ಥಿಗಳು ಸುಂದರವಾದ ಜಗನ್ನಾಥ ವಿಗ್ರಹವನ್ನು ನಿರ್ಮಿಸಿ, ಗಣ್ಯರು ಹಾಗೂ ಅಧ್ಯಾಪಕರು ಪೂಜೆ ನೆರವೇರಿಸಿದರು. ಇದೇ ವೇಳೆ ವಿಶ್ವವಿದ್ಯಾಲಯದಲ್ಲಿ ಮೊದಲ ಬಾರಿಗೆ “ಅರ್ಕಭೂಮಿ” ಎಂಬ ಒಡಿಯಾ ನಿಯತಕಾಲಿಕೆಯನ್ನು ಬಿಡುಗಡೆ ಮಾಡಲಾಗಿದ್ದು, ಇದು ವಿಶೇಷ ಗಮನಸೆಳೆಯಿತು.
ಕಾರ್ಯಕ್ರಮದಲ್ಲಿ ಒಡಿಸ್ಸಿ ನೃತ್ಯ, ಭಜನೆಗಳು ಹಾಗೂ ಸಂಬಲ್ಪುರಿ ಜಾನಪದ ನೃತ್ಯ ಸೇರಿದಂತೆ 25ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿಶೇಷವಾಗಿ ಕಳಿಂಗ ಯುದ್ಧದ ಕುರಿತ ವಿದ್ಯಾರ್ಥಿಗಳ ಕಿರುಚಿತ್ರ ಪ್ರೇಕ್ಷಕರ ಮನಸ್ಸಿಗೆ ತಟ್ಟಿದ್ದು, ಒಡಿಯಾ ಜನರ ಶೌರ್ಯ ಹಾಗೂ ಅದಮ್ಯ ಮನೋಭಾವವನ್ನು ಜೀವಂತವಾಗಿ ಪ್ರತಿಬಿಂಬಿಸಿತು.
ವಿಶ್ವವಿದ್ಯಾಲಯದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮದ ಅಂತ್ಯದಲ್ಲಿ ಸಾಂಪ್ರದಾಯಿಕ ಒಡಿಯಾ ಆಹಾರ ಪದಾರ್ಥಗಳಾದ ದಾಲ್ಮಾ, ಖಾತಾ, ಆಲೂ ಭಜ ಹಾಗೂ ಖಿರಿ ಬಡಿಸಲಾಯಿತು. ಒಟ್ಟಾರೆ ಈ ಆಚರಣೆ ಎಲ್ಲರಿಗೂ ಸ್ಮರಣೀಯ ಹಾಗೂ ಸಾಂಸ್ಕೃತಿಕವಾಗಿ ಸಮೃದ್ಧ ಅನುಭವವನ್ನು ತಂದುಕೊಂಡಿತು.
Comments are closed.