Shubhashaya News

ಗ್ರಾಮೀಣ ಅಭಿವೃದ್ಧಿಗೆ ಸ್ವಚ್ಛ ನೀರು, ಶಿಕ್ಷಣ, ಕೌಶಲ್ಯಾಭಿವೃದ್ಧಿ ಮೂಲಸೌಕರ್ಯಕ್ಕೆ ಸಿಎಸ್‍ಆರ್ ಬಲ: ಬರಾಟ್ 

ಆಳಂದ: ತಾಲೂಕಿನ ಕೆರೂರ ವಲಯದಲ್ಲಿ ಅನುಷ್ಠಾನಕ್ಕೆ ಮುಂದಾದ ದೆಹಲಿ ಬ್ಲುಪೈನ್ ಎನರ್ಜಿ ಸಂಸ್ಥೆಯ ಸಾಮಾಜಿಕ ಕಾರ್ಯಚಟುವಟಿಕೆ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಮುಖರೊಂದಿಗೆ ಸ್ಥಳೀಯರು ಇದ್ದರು.

 

ಆಳಂದ: ಸ್ವಚ್ಛ ಕುಡಿಯುವ ನೀರು, ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಮೂಲಸೌಕರ್ಯಗಳ ವೃದ್ಧಿಯ ಮೂಲಕ ಗ್ರಾಮೀಣ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಉತ್ತೇಜನ ನೀಡುವುದು ಸಿಎಸ್‍ಆರ್ ಯೋಜನೆಗಳ ಪ್ರಮುಖ ಉದ್ದೇಶವಾಗಿದೆ ಎಂದು ಬ್ಲುಪೈನ್ ಎನರ್ಜಿ ಸಂಸ್ಥೆಯ ದೆಹಲಿ ಮುಖ್ಯ ಕಚೇರಿ  ಮುಖ್ಯ ಸಸ್ಟೇನಬಿಲಿಟಿ ಅಧಿಕಾರಿ ಸುಮಿತ್ ಬರಾಟ್ ಹೇಳಿದರು.

ತಾಲೂಕಿನ  ಮೋಘಾ, ಜಮಗಾ, ಸಕ್ಕರಗಾ, ಚಿಂಚೋಳಿ ಬಿ. ಹಿರೋಳಿ ಸೇರಿ ಹಲವು ಗ್ರಾಮಗಳಲ್ಲಿ ಬ್ಲುಪೈನ್ ಎನರ್ಜಿ ಸಂಸ್ಥೆಯು ಎರಡು ದಿನಗಳಕಾಲ ವ್ಯಾಪಕ ಕಾಪೆರ್Çರೇಟ್ ಸಾಮಾಜಿಕ ಜವಾಬ್ದಾರಿ ಸಿಎಸ್‍ಆರ್ ಚಟುವಟಿಕೆಗಳನ್ನು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಬ್ಲುಪೈನ್ ಎನರ್ಜಿ ಸಂಸ್ಥೆಯ ದೃಷ್ಟಿಕೋನವು ಕೇವಲ ಇಂಧನ ಉತ್ಪಾದನೆಗೆ ಸೀಮಿತವಲ್ಲ. ನಾವು ಕಾರ್ಯನಿರ್ವಹಿಸುವ ಗ್ರಾಮಗಳ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಕೈಜೋಡಿಸುವುದು ನಮ್ಮ ಬದ್ಧತೆ. ಸ್ವಚ್ಛ ನೀರು, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಗ್ರಾಮೀಣ ಬದುಕನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ” ಎಂದರು.

ಕಂಪನಿಯ ಹಿರಿಯ ವ್ಯವಸ್ಥಾಪಕಿ ಸಾಮಾಜಿಕ ಮತ್ತು ಸ್ಥಿರತೆ ವಿಭಾಗದ ಸುಶ್ರೀ ಸುಚಿತ್ರಾ ಬಿಸೇನ್ ಅವರು, “ಈ ಯೋಜನೆಗಳು ಸ್ಥಳೀಯ ಸಮುದಾಯಕ್ಕೆ ದೀರ್ಘಕಾಲಿಕ ಲಾಭ ನೀಡಲಿವೆ. ಮಿನಿ ಸೈನ್ಸ್ ಸೆಂಟರ್ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು ಮಕ್ಕಳ ಹಾಗೂ ಯುವಕರ ಭವಿಷ್ಯವನ್ನು ಬೆಳಗಿಸಲಿವೆ. ಸಮುದಾಯದ ಸಹಭಾಗಿತ್ವವಿಲ್ಲದೆ ಅಭಿವೃದ್ಧಿ ಸಾಧ್ಯವಿಲ್ಲ” ಎಂದು ಹೇಳಿದರು.

ಸಂವಹನ ವಿಭಾಗದ ವ್ಯವಸ್ಥಾಪಕಿ ಸುಶ್ರೀ ಅಂಜಲಿ ಬಾವಾ ಮಾತನಾಡಿ,  ತರಬೇತಿ ಕೇಂದ್ರಗಳಲ್ಲಿ ಸೌರ ಪ್ಯಾನೆಲ್ ಅಳವಡಿಕೆ ಕುರಿತ ಆರು ತಿಂಗಳ ಉಚಿತ ತರಬೇತಿ ನೀಡಲಾಗುತ್ತದೆ. ಈ ಕೌಶಲ್ಯಾಭಿವೃದ್ಧಿ ಯೋಜನೆಯಿಂದ ಒಟ್ಟು 60 ವಿದ್ಯಾರ್ಥಿಗಳು ಲಾಭ ಪಡೆಯಲಿದ್ದು, ಅವರಲ್ಲಿ ಶೇ.50ರಷ್ಟು ಬಾಲಕಿಯರ ಭಾಗವಹಿಸುವಿಕೆ ಇದೆ. ಇದರಿಂದ ತಾಂತ್ರಿಕ ಕೌಶಲ್ಯದೊಂದಿಗೆ ಲೈಂಗಿಕ ಸಮಾನತೆಗೂ ಉತ್ತೇಜನ ದೊರೆಯಲಿದೆ ಎಂದು ಹೇಳಿದರು.

ಸ್ಥಳೀಯ ಯೋಜನಾ ತಂಡದ ಸೌರ ಘಟಕ ವ್ಯವಸ್ಥಾಪಕ ಅಮರನಾಥ್, ಗಾಳಿ ವಿದ್ಯುತ್ ಘಟಕ ವ್ಯವಸ್ಥಾಪಕ ವಿಜಯ ಶ್ರೀವಾಸ್ತವ್ ಸೇರಿದಂತೆ ಸಿಬ್ಬಂದಿ, ಗ್ರಾಮ ಸರಪಂಚರು ಹಾಗೂ ಪಂಚಾಯಿತಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಫೌಂಡೇಶನ್ ನಿರ್ದೇಶಕ ಶಿವಧರ್ ದುಬೆ, ಕಾರ್ಯಕ್ರಮ ವ್ಯವಸ್ಥಾಪಕ ಅಮಿತ್ ಸಾಗರ್, ಕ್ಷೇತ್ರ ಸಂಯೋಜಕರು ಪವನ್ ಹಾಗೂ ಆಶುತೋμï ಸಿಂಗ್ ಭಾಗವಹಿಸಿದ್ದರು. ಈ ಯೋಜನೆಗಳನ್ನು ಪಿಆರ್‍ಎಸ್‍ಡಿ ಫೌಂಡೇಶನ್ ಸಹಯೋಗದೊಂದಿಗೆ ಅನುμÁ್ಠನಗೊಳಿಸಲಾಯಿತು.

ಕೆರೂರು, ಅಂಬೇವಾಡ ಹಾಗೂ ಚಿಂಚೋಳಿ ಗ್ರಾಮಗಳಲ್ಲಿ ಆರ್‍ಒ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿ ಗ್ರಾಮಸ್ಥರಿಗೆ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಯಿತು.

ಜಾಮಗಾ ಜೆ ಗ್ರಾಮದಲ್ಲಿ ಆರ್‍ಒ ಘಟಕದೊಂದಿಗೆ ತರಬೇತಿ ಕೇಂದ್ರ ಸ್ಥಾಪಿಸಲಾಯಿತು. ಮೊಘಾ ಬಿ. ಗ್ರಾಮದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಉದ್ಘಾಟಿಸಲಾಯಿತು. ಜಿಡÀಗಾ ಗ್ರಾಮದಲ್ಲಿ ಸೌರ ಬೀದಿ ದೀಪಗಳನ್ನು ಅಳವಡಿಸಿ ಗ್ರಾಮಸ್ಥರ ಸುರಕ್ಷತೆ ಮತ್ತು ಸಂಚಾರ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು  ಅವರು ಹೇಳಿದರು.

ಸರಸಾಂಬಾ ಗ್ರಾಮದಲ್ಲಿ ಮಿನಿ ಸೈನ್ಸ್ ಸೆಂಟರ್, ಆರ್‍ಒ ನೀರು ಶುದ್ಧೀಕರಣ ವ್ಯವಸ್ಥೆ ಹಾಗೂ ಶ್ಮಶಾನಘಾಟ್ ಉದ್ಘಾಟಿಸಲಾಯಿತು. ಹಿರೋಳಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಮಿನಿ ಸೈನ್ಸ್ ಸೆಂಟರ್ ಹಾಗೂ ಬಸ್ ನಿಲ್ದಾಣ ನಿರ್ಮಿಸಲಾಯಿತು.

ಮಿನಿ ಸೈನ್ಸ್ ಸೆಂಟರ್‍ಗಳ ಮೂಲಕ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯಗಳನ್ನು ಪ್ರಾಯೋಗಿಕ ಮಾದರಿ ಹಾಗೂ ಚಟುವಟಿಕೆಗಳ ಮೂಲಕ ಸುಲಭವಾಗಿ ಅರ್ಥಮಾಡಿಕೊಳ್ಳುವ ಕುರಿತು ಮಾಹಿತಿ ನೀಡಲಾಯಿತು.

Comments are closed.

Don`t copy text!